ಶಿರಹಟ್ಟಿ(ಫೆ.03): ಶಿರಹಟ್ಟಿ ಪಟ್ಟಣ ಪಂಚಾಯಿತಿ ಕಂಪ್ಯೂಟರ್‌ ಆಪರೇಟರ್‌, ಹೊರಗುತ್ತಿಗೆ ನೌಕರ ಶರಣಪ್ಪ ಗೌಳಿ ಎಂಬವರು ಖಾತೆ ಬದಲಾವಣೆ ಮಾಡಿಕೊಡಲು ಲಂಚ ಸ್ವೀಕರಿಸುತ್ತಿದ್ದಾಗ ಎಸಿಬಿ ಬಲೆಗೆ ಬಿದ್ದಿದ್ದಾರೆ.

ಡಿ.ಆರ್‌. ಮಹಾಂತೇಶ ಎಂಬವರು ನೀಡಿದ ದೂರಿನ ಮೇರೆಗೆ ದಾಳಿ ನಡೆದಿದ್ದು, ಕಳೆದ ಡಿಸೆಂಬರ್‌ ತಿಂಗಳಿನಿಂದ ರಾಧಾ ಎಂಬವರ ಹೆಸರಿಗೆ ಖಾತೆ ಬದಲಾವಣೆ ಮಾಡಿ ಕೊಡುವಂತೆ ಅರ್ಜಿ ಸಲ್ಲಿಸಿದ್ದರು. ಆದರೆ ನೌಕರ ಹಣದ ಬೇಡಿಕೆ ಇಟ್ಟಿದ್ದು, 3500 ಹಣ ನೀಡಿದರೆ ಖಾತೆ ಬದಲಾವಣೆ ಮಾಡಿ ಕೊಡುವುದಾಗಿ ಸತಾಯಿಸುತ್ತಿದ್ದ ಎಂದು ಹೇಳಲಾಗಿದ್ದು, ಮಂಗಳವಾರ ಹಣ ಪಡೆಯುವಾಗಲೇ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾರೆ.

7 ಭ್ರಷ್ಟರಿಗೆ ಎಸಿಬಿ ಬಿಸಿ, ಕೇಜಿಗಟ್ಟಲೆ ಚಿನ್ನ ವಶ!

ಜಿಲ್ಲಾ ಭ್ರಷ್ಟಾಚಾರ ನಿಗ್ರಹ ದಳದ ಡಿಎಸ್‌ಪಿ ವಾಸುದೇವ ನೇತೃತ್ವದಲ್ಲಿ ದಾಳಿ ನಡೆದಿದ್ದು, ಆರೋಪಿಯನ್ನು ಬಂಧಿಸಲಾಗಿದೆ. ದಾಳಿ ವೇಳೆ ಎಸಿಬಿ ಸಿಪಿಐ ಧರಣಾ ನಾಯಕ, ಮಹೇಶ ದೇಸಾಯಿ, ಸಿಬ್ಬಂದಿಗಳಾದ ಎಂ.ಎಂ. ಐಯನಗೌಡರ, ಆರ್‌.ಎಫ್‌. ದೇಸಾಯಿ, ಮಂಜು ಕರಿಗಾರ, ದರೇಶ ಹೆಬಸೂರ, ವೀರೇಶ ಜೋಳದ, ಐ.ಸಿ. ಜಾಲಿಹಾಳ, ಈರಣ್ಣ, ತಾಯಣ್ಣವರ ಇತರರು ಇದ್ದರು.