ತುಮಕೂರು: ಸರ್ಕಾರಿ ಕಾನೂನನ್ನು ಸರ್ಕಾರದವರೇ ಪಾಲಿಸದಿದ್ದರೆ ಹೇಗೆ?
ಕೊರಟಗೆರೆ ತಾಲೂಕಿನ ಲೋಕಪಯೋಗಿ ಇಲಾಖೆಯ ಸಂಬಂಧಿಸಿದ ವಾಹನ ಟಾಟಾ ಸುಮಾ ಕಳೆದ ಆರು ತಿಂಗಳ ಹಿಂದೆಯೇ ಸ್ಕ್ರಾಪ್ ಹಾಕಲಾಗಿದ್ದು, ಅಲ್ಲಿಂದ ಇಲ್ಲಿಯವರೆಗೂ ಎಫ್ ಸಿ, ಇನ್ಶೂರೆನ್ಸ್ ಇಲ್ಲದೆ ಗಾಡಿ ಯಾರಿಗೂ ಹೆದರದೆ ಜಿಲ್ಲೆ ಸೇರಿದಂತೆ ತಾಲೂಕಿನಾದ್ಯಂತ ಸುತ್ತುತ್ತಿದೆ.
ಕೊರಟಗೆರೆ(ಜ.07): ಸುಗಮ ಸಂಚಾರಕ್ಕೆ ಅನುವು ಮಾಡಿಕೊಳ್ಳುವ ಇಲಾಖೆಯೇ ಅಡ್ಡದಾರಿ ಹಿಡಿದಿದ್ದು, ರಸ್ತೆ ರೂಲ್ಸ್ ಬ್ರೇಕ್ ಮಾಡಿದ್ದು, ರಸ್ತೆ ಗಿಳಿಯಲು ಯೋಗ್ಯವಲ್ಲದ ಇನ್ಶೂರೆನ್ಸ್, ಎಫ್‌ಸಿ ಎಲ್ಲವೂ ಲ್ಯಾಪ್ಸ್ ಆಗಿರುವ ಗಾಡಿ ದಿನಾಲು ಎರಡೆರಡು ಬಾರಿ ತುಮಕೂರ್-ಕೊರಟಗೆರೆ ಸುತ್ತುತ್ತಿರುವುದಲ್ಲದೆ ಕೊರಟಗೆರೆ ಪೂರ ಸುತ್ತುತ್ತಿರುವುದು ಯಾರ ಪ್ರಾಣಕ್ಕೂ ಗ್ಯಾರಂಟಿ ಇಲ್ಲದೆ ರಸ್ತೆಯಲ್ಲಿ ಸಾಗುತ್ತಿರುವುದು ವಿಪರ್ಯಾಸವೇ ಸರಿ.
ಕೊರಟಗೆರೆ ತಾಲೂಕಿನ ಲೋಕಪಯೋಗಿ ಇಲಾಖೆಯ ಸಂಬಂಧಿಸಿದ ವಾಹನ ಟಾಟಾ ಸುಮಾ ಕಳೆದ ಆರು ತಿಂಗಳ ಹಿಂದೆಯೇ ಸ್ಕ್ರಾಪ್ ಹಾಕಲಾಗಿದ್ದು, ಅಲ್ಲಿಂದ ಇಲ್ಲಿಯವರೆಗೂ ಎಫ್ ಸಿ, ಇನ್ಶೂರೆನ್ಸ್ ಇಲ್ಲದೆ ಗಾಡಿ ಯಾರಿಗೂ ಹೆದರದೆ ಜಿಲ್ಲೆ ಸೇರಿದಂತೆ ತಾಲೂಕಿನಾದ್ಯಂತ ಸುತ್ತುತ್ತಿದೆ.
ಅಯೋಧ್ಯೆ ರಾಮಮಂದಿರ ಉದ್ಘಾಟನೆ: ತುಮಕೂರು ಜಿಲ್ಲೆಯ ಮೂವರು ಸ್ವಾಮೀಜಿಗಳಿಗೆ ಆಹ್ವಾನ!
ಸರ್ಕಾರವೇ ಕಾನೂನು ಜಾರಿಗೆ ತಂದು ಸರ್ಕಾರದ ಇಲಾಖೆಗಳ ಕಾನೂನು ಮುರಿದರೆ ಯಾರಿಗೆ ಹೇಳಬೇಕು, ವಾಹನ ಏನಾದರೂ ಸ್ವಯಂ ಅಪಘಾತವಾದರೆ ವಾಹನ ಚಾಲಕನ ಗತಿ ಏನು? ಮುಖಾಮುಖಿ ಅಪಘಾತವಾದರೆ ಇನ್ಶೂರೆನ್ಸ್ ಇಲ್ಲದೆ ಇರುವುದರಿಂದ ಅಪಘಾತವಾಗಿ ಅನುಭವಿಸುವ ಜನಸಾಮಾನ್ಯರ ಗತಿಯೇನೋ? ಇದರ ಪರಿವಿಲ್ಲದೆ ವಾಹನ ಹೆಗ್ಗಿಲ್ಲದೆ ಓಡಾಡುತ್ತಿರುವುದು ಇಲ್ಲಿಯ ಪಿಡಬ್ಲ್ಯುಡಿ ಎಇಇ ಸ್ವಾಮಿಯ ಉದಾಸೀನತೆ ಗಿಡಿದ ಕೈಗನ್ನಡಿಯನ್ನಬಹುದು ಎಂದು ಕೆಲವು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.
ನಿದ್ರೆಗೆ ಜಾರಿದ ಆರ್‌ಟಿಒ
ತಾಲೂಕಿನಲ್ಲಿ ರಾತ್ರಿ ಆಯ್ತು ಅಂದರೆ ಆರ್‌ಟಿಒ ರಸ್ತೆಯಲ್ಲಿ ಬಂದು ನಿಲ್ತಾರೆ, ಡಿಪಿ ಹಾಗೂ ಪರ್ಮಿಟ್ ಇದ್ರೂನೂ ಪ್ರತಿ ಗಾಡಿಗೆ ಇಂತಿಷ್ಟು ಎಂದು ಯಾವುದೋ ಒಂದು ನೆಪ ಒಡ್ಡಿ ಪ್ರತಿ ಗಾಡಿ ಇಂದಲೋ ವಸೂಲಿ ಮಾಡಿಕೊಳ್ಳುತ್ತಾರೆ,ಆರ್‌ಟಿಒ ಹಿಂಬಾಲಕ ಚೇಲಾಗಳ ಕಾಟಕ್ಕೆ ಇಲ್ಲಿನ ವಾಹನ ಸವಾರರು ರೋಸಿ ಹೋಗಿದ್ದಾರೆ. ಇನ್ನೂ ರೈತರ ತರಕಾರಿ, ಹಣ್ಣು, ಇನ್ನಿತರ ಸರಕು ಸಾಗಾಣಿಕೆ ವಾಹನಗಳ ಮೇಲೆ ದರ್ಪ ತೋರಿಸಿ ಬಹಳಷ್ಟು ಹಣ ಪಿಕ್ಕುವ ಆರ್‌ಟಿಒ ಅಧಿಕಾರಿಗಳು ರಾತ್ರಿ 10-11 ಗಂಟೆಯಿಂದ ಬೆಳಗಿನ ಜಾವ 5 ಗಂಟೆವರೆಗೂ ರಸ್ತೆಯಲ್ಲಿಯೇ ಜಾಗರಣೆ ಮಾಡಿ ಬೆಳಿಗ್ಗೆ ಆರ್‌ಟಿಒ ನಿದ್ರೆಗೆ ಜಾರುತ್ತಾರೆ. ಇನ್ನು ಬೆಳಗ್ಗೆ ವೇಳೆ ಎಲ್ಲಿ ಕರ್ತವ್ಯ ನಿರ್ವಹಿಸಲು ಸಾಧ್ಯ ಎಂದು ಕೆಲವು ಸಾರ್ವಜನಿಕರು ಆರ್‌ಟಿಒ ವಿರುದ್ಧ ಇಡೀ ಶಾಪ ಹಾಕುತ್ತಿದ್ದಾರೆ.
ಲೋಕೋಪಯೋಗಿ ಇಲಾಖೆ ವಾಹನ ಇನ್ಶೂರೆನ್ಸ್ ಲ್ಯಾಪ್ಸ್ ಆಗಿ ಆರೇಳು ತಿಂಗಳಾಗಿದೆ. ಎಫ್‌ಸಿ ಲ್ಯಾಪ್ಸ್ ಆಗಿ ಸುಮಾರು ತಿಂಗಳುಗಳೇ ಕಳೆದಿದೆ. ಸ್ಕ್ರಾಪ್ ಗೆ ಶಿಫಾರಸು ಮಾಡಿ ಸುಮಾರು ತಿಂಗಳುಗಳಾಗಿರುವ ವಾಹನವನ್ನ ಯಾವ ಧೈರ್ಯದಲ್ಲಿ ಪ್ರತಿದಿನ ತುಮಕೂರು- ಕೊರಟಗೆರೆಗೆ ಓಡಾಡಿ ಸುತ್ತಿದ್ದಾರೆ. ಪಿಡಬ್ಲ್ಯುಡಿ ಎಇಇ ಬಹಳ ಉದಾಸೀನತೆ ಉಳ್ಳ ಮನುಷ್ಯ, ನನ್ನನ್ನು ಯಾರು ಏನು ಮಾಡಿಕೊಳ್ಳುವುದಕ್ಕೆ ಆಗಲ್ಲ ಎಂಬ ಮನೋಭಾವನೆ ಇರುವ ವ್ಯಕ್ತಿ. ಮುಂದೆ ಯಾವುದೇ ಅನಾಹುತ ಆಗದಂತೆ ಅಧಿಕಾರಿಗಳು ಕೂಡಲೇ ಗಮನ ಹರಿಸಬೇಕು ಎಂದು ಸಂಗೊಳ್ಳಿ ರಾಯಣ್ಣ ಯುವ ವೇದಿಕೆ ನಂಜುಂಡಯ್ಯ ತಿಳಿಸಿದ್ದಾರೆ.