Asianet Suvarna News Asianet Suvarna News

ಬೆಂಗಳೂರು: ಜಾರಕಬಂಡೆ ಕಾಡಲ್ಲ, ಶ್ರೀಗಂಧದ ವನ..!

*  ಬೆಳೆದು ನಿಂತಿವೆ ಬರೋಬ್ಬರಿ 6 ಸಾವಿರಕ್ಕೂ ಅಧಿಕ ಶ್ರೀಗಂಧದ ಮರ
*  ಜೆ.ಬಿ.ಕಾವಲ್‌ನಲ್ಲಿ ಶ್ರೀಗಂಧ ಬೆಳೆಯಲು ಸೂಕ್ತ ಹವಾಮಾನ
*  ಹತ್ತಾರು ವರ್ಷಗಳಿಂದ ಜೆ.ಬಿ.ಕಾವಲ್‌ ಮೀಸಲು ಅರಣ್ಯ ಪ್ರದೇಶ 
 

Good Climate to Grow Sandalwood Tree in Jarkabandi Reserve Forest in Bengaluru grg
Author
Bengaluru, First Published Oct 20, 2021, 11:07 AM IST
  • Facebook
  • Twitter
  • Whatsapp

ರಮೇಶ್‌ ಬನ್ನಿಕುಪ್ಪೆ

ಬೆಂಗಳೂರು(ಅ.20): ಒಂದು ಯಕಶ್ಚಿತ್‌ ಪಾರ್ಕ್ ನಿರ್ಮಾಣಕ್ಕಾಗಿ ಜಾರಕಬಂಡೆ ಕಾವಲ್‌ ಅರಣ್ಯ(Jarkabandi Reserve Forest) ಕಿರಿದು ಮಾಡಲು ಹೊರಟರೆ ಅದು ವಾಸ್ತವವಾಗಿ ಉದ್ಯಾನ ನಗರಿಯ ಅತ್ಯಂತ ಪ್ರಮುಖ ಚಂದನ ವನಕ್ಕೆ ಕೊಡಲಿ ಪೆಟ್ಟು ನೀಡಿದಂತೆ ಎಂದು ಸ್ಥಳೀಯರು ಆರೋಪಿಸುತ್ತಾರೆ.

ಶ್ರೀಗಂಧದ(Sandalwood) ಮರಗಳನ್ನು ಬೆಳೆಯುವುದಕ್ಕೆ ಕರ್ನಾಟಕ(Karnataka) ರಾಜ್ಯ ಜಗತ್ತಿನಲ್ಲಿಯೇ ಪ್ರಸಿದ್ಧಿಯನ್ನು ಹೊಂದಿದೆ. ಅದೇ ರೀತಿ ಜಾರಕಬಂಡೆ ಅರಣ್ಯ ಪ್ರದೇಶ ಮಣ್ಣು ಮತ್ತು ಹವಾಗುಣ(Climate) ಶ್ರೀಗಂಧ ಬೆಳೆಯಲು ಅತ್ಯಂತ ಪೂರಕವಾಗಿದೆ. ಹೀಗಾಗಿಯೇ ಜೆ.ಬಿ. ಕಾವಲ್‌ನಲ್ಲಿ ಸುಮಾರು ಆರು ಸಾವಿರಕ್ಕೂ ಹೆಚ್ಚು ಪ್ರಮಾಣದ ಶ್ರೀಗಂಧದ ಗಿಡಗಳು ಬೆಳೆದು ನಿಂತಿವೆ. ಇಂತಹ ಕಾಡನ್ನು(Forest) ಬರಿದು ಮಾಡಲು ರಾಜ್ಯ ಸರ್ಕಾರ(State Government) ಮುಂದಾಗಿದೆ ಎಂಬುದು ಆರೋಪ.

ಬೆಂಗಳೂರು: ಜಾರಕ ಬಂಡೆ ಮೇಲೆ ಗುತ್ತಿಗೆದಾರರ ಕಣ್ಣು..!

ಬೆಂಗಳೂರು(Bengaluru) ನಗರದ ಸುತ್ತಮುತ್ತಲ ಭಾಗಗಳಲ್ಲಿ ಶ್ರೀಗಂಧ ಬೆಳೆಯುವುದು ಕಡಿಮೆ. ಇಂತಹ ಸಂದರ್ಭದಲ್ಲಿ ಕಳೆದ ಕೆಲ ವರ್ಷಗಳಿಂದ ಗಿಡಗಳನ್ನು ನೆಟ್ಟು ಸಂರಕ್ಷಣೆ ಮಾಡಿರುವ ಭಾಗದಲ್ಲಿ ಸಾರ್ವಜನಿಕ ಉದ್ಯಾನ(Garden) ನಿರ್ಮಾಣ ಮಾಡುವುದು ಎಷ್ಟುಸರಿ ಎಂದು ಪ್ರಶ್ನಿಸಿರುವ ಪರಿಸರ ಪ್ರೇಮಿಗಳು, ಈ ಮರಗಳನ್ನು ಬೆಳೆಸಿ ಪೋಷಣೆ ಮಾಡಿರುವ ಉದ್ದೇಶ ವ್ಯರ್ಥವಾಗಲಿದೆ ಎಂದು ತೀವ್ರ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.

ಅರಣ್ಯ ಇಲಾಖೆಯಿಂದ 3 ಸಾವಿರ ಮರ: 

ಜೆ.ಬಿ.ಕಾವಲ್‌ನಲ್ಲಿ ಕಳೆದ ಎರಡು ವರ್ಷಗಳ ಹಿಂದೆ ಸುಮಾರು 70 ಎಕರೆ ಪ್ರದೇಶದಲ್ಲಿ 3 ಸಾವಿರ ಶ್ರೀಗಂಧದ ಸಸಿಗಳನ್ನು ನೆಡಲಾಗಿತ್ತು. ಅದರ ಜೊತೆಗೆ, ನೈಸರ್ಗಿಕವಾಗಿ ಮೂರು ಸಾವಿರ ಸೇರಿದಂತೆ ಒಟ್ಟು ಆರು ಸಾವಿರಕ್ಕೂ ಹೆಚ್ಚು ಶ್ರೀಗಂಧ ಗಿಡಗಳು ಬೆಳೆದು ನಿಂತಿವೆ ಎಂದು ಅರಣ್ಯ ಇಲಾಖೆಯ(Forest Department) ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಎರಡು ವರ್ಷಗಳ ಹಿಂದೆ ಶ್ರೀಗಂಧದ ಸಸಿಗಳನ್ನು ಹೊರ ಭಾಗದ ನರ್ಸರಿಗಳಿಂದ ಖರೀದಿ ಮಾಡಿ ತರಲಾಗಿತ್ತು. ಅವುಗಳನ್ನು ನೆಟ್ಟ ಬಳಿಕ ಕನಿಷ್ಠ ಮೂರು ವರ್ಷ ಪೋಷಣೆ ಮಾಡಬೇಕಾಗಿದ್ದು, ಇದಕ್ಕಾಗಿ ಗಿಡದ ಸುತ್ತಮುತ್ತಲ ಭಾಗದಲ್ಲಿ ಪಾತಿ ಮಾಡುವುದು, ಬೇಸಿಗೆ ಕಾಲದಲ್ಲಿ(Summer Season) ನೀರನ್ನು ಪೂರೈಸಲು ಮೂರು ವರ್ಷದ ಅವಧಿಗೆ ಕನಿಷ್ಠ .2 ಸಾವಿರ ವೆಚ್ಚವಾಗುತ್ತದೆ. ಮೂರು ಸಾವಿರ ಗಿಡಗಳ ಪೋಷಣೆ ವರ್ಷಕ್ಕೆ ಲಕ್ಷಾಂತರ ರು.ಗಳನ್ನು ಅರಣ್ಯ ಇಲಾಖೆಯಿಂದ ಖರ್ಚು ಮಾಡಿ ಸಂರಕ್ಷಣೆ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ವಿವರಿಸಿದರು.

ಬೆಂಗಳೂರು: ಜಾರಕಬಂಡೆ ಉದ್ಯಾನ ನಿರ್ಮಾಣದ ಹಿಂದೆ ರಿಯಲ್‌ ಎಸ್ಟೇಟ್‌ ಲಾಬಿ..!

3 ಸಲ ಭೇಟಿ ನೀಡಿದ್ದ ತೋಟಗಾರಿಕೆ ಸಚಿವ

ಮೀಸಲು ಅರಣ್ಯ ಪ್ರದೇಶವನ್ನು ಇತರೆ ಇಲಾಖೆಗಳಿಗೆ ಹಸ್ತಾಂತರ ಮಾಡಲು ಅವಕಾಶವಿಲ್ಲ ಎಂಬುದು ಅರಣ್ಯ ಸಂರಕ್ಷಣಾ ಕಾಯಿದೆಯಲ್ಲಿ(Forest Protection Act) ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಈ ಅಂಶವನ್ನು ತೋಟಗಾರಿಕಾ ಸಚಿವರಿಗೆ ವಿವರಿಸಲಾಗಿದೆ. ಹೀಗಿದ್ದರೂ ಪದೇ ಪದೇ ಭೇಟಿ ನೀಡುತ್ತಿದ್ದಾರೆ ಎಂದು ಹೆಸರು ಹೇಳಲಿಚ್ಚಿಸದ ಅರಣ್ಯ ಇಲಾಖೆಯ ಅಧಿಕಾರಿಯೊಬ್ಬರು ‘ಕನ್ನಡಪ್ರಭ’ಕ್ಕೆ(Kannada Prabha) ಮಾಹಿತಿ ನೀಡಿದರು.

ಕಳೆದ ಹತ್ತಾರು ವರ್ಷಗಳಿಂದ ಜೆ.ಬಿ.ಕಾವಲ್‌ ಮೀಸಲು ಅರಣ್ಯ ಪ್ರದೇಶವಾಗಿದ್ದು, ಅರಣ್ಯ ಇಲಾಖೆಯ ಅಧಿಕಾರಿಗಳಿಂದ ಸಂರಕ್ಷಣೆಗೊಳ್ಳುತ್ತಿದೆ. ಅರಣ್ಯದ ಸುತ್ತಮುತ್ತಲ ಪ್ರದೇಶದಲ್ಲಿ ಕೆಲ ರಾಜಕಾರಣಿಗಳು(Politicians) ಮತ್ತು ಸಿನಿಮಾ ನಟರು ಜಮೀನು ಖರೀದಿಸಿದ್ದಾರೆ. ಈ ಜಮೀನಿಗೆ ಉತ್ತಮ ಬೆಲೆ ಸಿಗಬೇಕೆಂಬ ಕಾರಣದಿಂದ ದಟ್ಟವಾಗಿ ಬೆಳೆದು ನಿಂತಿರುವ ಕಾನನವನ್ನು ಸಾರ್ವಜನಿಕರ ಉದ್ಯಾನವನ್ನಾಗಿಸಲು ಹಾತೊರೆಯುತ್ತಿದ್ದಾರೆ. ಅದಕ್ಕೆ ಅವಕಾಶ ನೀಡುವುದಿಲ್ಲ ಎಂದು ರಾಮಗೊಂಡನಹಳ್ಳಿ ನಿವಾಸಿ ಕೃಷ್ಣಪ್ಪ ತಿಳಿಸಿದ್ದಾರೆ.  
 

Follow Us:
Download App:
  • android
  • ios