ಕೊಪ್ಪಳ: ಕನಕಗಿರಿಯಲ್ಲಿ ಪಾಂಚಜನ್ಯ ಮೊಳಗಿಸಿ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ತಂದಿದ್ದ ಎಸ್.ಎಂ.ಕೃಷ್ಣ!
ಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ತರಲೇಬೇಕೆಂಬ ಜಿದ್ದು ಹಿಡಿದಿದ್ದ ಎಸ್.ಎಂ. ಕೃಷ್ಣ ಅವರು ತಾವು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅದ್ಯಕ್ಷರಾಗಿ ಇವರ ನೇತ್ರತ್ವದಲ್ಲಿ ಪಾಂಚಜನ್ಯ ಎನ್ನುವ ಶಿರೋನಾಮೆಯಿಂದ ರಾಜ್ಯದ ಎಲ್ಲ ವಿಧಾನಸಭಾ ಕ್ಷೇತ್ರಗಳಿಗೆ ಸಂಚರಿಸಿ 132 ಸ್ಥಾನಗಳನ್ನು ಗೆಲ್ಲಿಸುವಲ್ಲಿ ಕೃಷ್ಣ ಅವರು ಯಶಸ್ವಿಯಾಗಿದ್ದರು.
ರಾಮಮೂರ್ತಿ ನವಲಿ
ಗಂಗಾವತಿ(ಡಿ.10): ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅದ್ಯಕ್ಷರಾಗಿದ್ದ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ಕೊಪ್ಪಳ ಜಿಲ್ಲೆಯ ಕನಕಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಪಾಂಚಜನ್ಯ ಮೊಳಗಿಸಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಪ್ರಮುಖರಾಗಿರುವುದ ಈಗ ಕೇವಲ ಸ್ಮರಣೆಯಾಗಿ ಉಳಿದಿದೆ.
ಹೌದು, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ತರಲೇಬೇಕೆಂಬ ಜಿದ್ದು ಹಿಡಿದಿದ್ದ ಎಸ್.ಎಂ. ಕೃಷ್ಣ ಅವರು ತಾವು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅದ್ಯಕ್ಷರಾಗಿ ಇವರ ನೇತ್ರತ್ವದಲ್ಲಿ ಪಾಂಚಜನ್ಯ ಎನ್ನುವ ಶಿರೋನಾಮೆಯಿಂದ ರಾಜ್ಯದ ಎಲ್ಲ ವಿಧಾನಸಭಾ ಕ್ಷೇತ್ರಗಳಿಗೆ ಸಂಚರಿಸಿ 132 ಸ್ಥಾನಗಳನ್ನು ಗೆಲ್ಲಿಸುವಲ್ಲಿ ಕೃಷ್ಣ ಅವರು ಯಶಸ್ವಿಯಾಗಿದ್ದರು.
ಬೆಂಗ್ಳೂರನ್ನು ಸಿಂಗಾಪುರ್ ಮಾಡುವ ಕನಸು ಕಂಡಿದ್ದ ಎಸ್.ಎಂ. ಕೃಷ್ಣ: ಸಿದ್ದರಾಮಯ್ಯ
ಕನಕಗಿರಿ ಕ್ಷೇತ್ರದಲ್ಲಿ ಪಾಂಚಜನ್ಯ ಮೊಳಗಿಸಿದ್ದ ಕೃಷ್ಣ ಅವರು ರಾಜ್ಯದಲ್ಲಿ ತೀರಾ ಹಿಂದುಳಿದ ವಿಧಾನಸಭಾ ಕ್ಷೇತ್ರವಾಗಿರುವ ಕನಕಗಿರಿ ವಿಧಾನಸಭಾ ಕ್ಷೇತ್ರವಾಗಿದ್ದು, ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆದ್ದಿದ್ದ ಇತಿಹಾಸ ಇದ್ದಿಲ್ಲ. ಈ ಕ್ಷೇತ್ರ ಮೂರು ತಾಲೂಕಗಳಿಗೆ ಅಂದರೆ ಸಿಂಧನೂರು, ಕುಷ್ಟಗಿ ಮತ್ತು ಗಂಗಾವತಿ ತಾಲೂಕುಗಳ ಕೆಲ ಗ್ರಾಮಗಳು ಕನಕಗಿರಿ ಕ್ಷೇತ್ರದ ವ್ಯಾಪ್ತಿಗೆ ಬರುತ್ತಿದ್ದವು.
ಇಂತಹ ಸಂದರ್ಭದಲ್ಲಿ ಹೇಗಾದರು ಮಾಡಿ ತೀರಾ ಹಿಂದುಳಿದ ಕ್ಷೇತ್ರವನ್ನು ಕಾಂಗ್ರೆಸ್ ಪಕ್ಷದ ತೆಕ್ಕೆಗೆ ತೆಗೆದುಕೊಳ್ಳ ಬೇಕೆಂಬ ಜಿದ್ದು ಹಿಡಿದಿದ್ದ ಎಸ್.ಎಂ. ಕೃಷ್ಣ ಅವರು ತಮ್ಮ ರಾಜಕೀಯ ಪರಮ ಶಿಷ್ಯರಾಗಿದ್ದ ಮಲ್ಲಿಕಾರ್ಜುನ ನಾಗಪ್ಪ ಅವರಿಗೆ 1999 ರಲ್ಲಿ ನಡೆದ ವಿಧಾನಸಭೆಗೆ ಟಿಕೆಟ್ ನೀಡಿ ಗೆಲ್ಲಿಸುವಲ್ಲಿ ಯಶಸ್ವಿಯಾಗಿದ್ದರು. ನಂತರ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ನೇತೃತ್ವದ ಸರಕಾರದಲ್ಲಿ ಮಲ್ಲಿಕಾರ್ಜುನ ನಾಗಪ್ಪ ಅವರಿಗೆ ಕಂದಾಯ ಮತ್ತು ಪೌರಾಡಳಿತ ಸಚಿವ ಸ್ಥಾನ ನೀಡಿದ್ದರು.
SM Krishna Passes Away: ಎಸ್‌ಎಂಕೆ ಅಂತಿಮ ಯಾತ್ರೆ, ಅಭಿಮಾನಿಗಳಿಗೆ ಮನವಿ ಮಾಡಿದ ಡಿಸಿಎಂ ಡಿಕೆಶಿ!
ಇದಕ್ಕಿಂತ ಚುನಾವಣೆ ಪೂರ್ವದಲ್ಲಿ ನಡೆದ ಪಾಂಚಜನ್ಯ ಕಾರ್ಯಕ್ರಮದಲ್ಲಿ ಕ್ಷೇತ್ರದ ತಾವರಗೇರಾದಲ್ಲಿ ಬೃಹತ್ ಸಮಾವೇಶ ನಡೆಸಿ ಪಾಂಚಜನ್ಯ ಇವರ ಗೆಲುವಿಗೆ ಪೂರಕವಾಯಿತು. ಇದೇ ಸಂದರ್ಭದಲ್ಲಿ ಸಂಸದರಾಗಿದ್ದ ಮಾಜಿ ಸಂಸದ ಎಚ್.ಜಿ.ರಾಮುಲು ಅವರು ಸಹ ಪಾಂಚಜನ್ಯಕ್ಕೆ ಕೈಜೋಡಿಸಿದರು. ಈಗ ಎಸ್.ಎಂ. ಕೃಷ್ಣ ಅವರ ಪಾಂಚಜನ್ಯದ ಧ್ವನಿ ದೂರವಾಗಿ ಉಳಿದಿದೆ.
ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ಕೆಪಿಸಿಸಿ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಪಾಂಚಜನ್ಯದ ಮೂಲಕ ರಾಜ್ಯದ ಎಲ್ಲಾ ಕ್ಷೇತ್ರಗಳಲ್ಲಿ ಪ್ರವಾಸ ಮಾಡಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ತರಲು ಕಾರಣರಾಗಿದ್ದರು. ಕನಕಗಿರಿ ವಿಧಾನ ಸಭಾ ಕ್ಷೇತ್ರದಲ್ಲಿಯೂ ಸಹ ಪಾಂಜಜನ್ಯ ಮೊಳಗಿಸಿ ಗೆಲುವಿಗೆ ಕಾರಣರಾಗಿದ್ದರು ಎಂದು ಮಾಜಿ ಸಚಿವ ಮಲ್ಲಿಕಾರ್ಜುನ ನಾಗಪ್ಪ ತಿಳಿಸಿದ್ದಾರೆ.
ಮುಖ್ಯಮಂತ್ರಿ ಪ್ರಮಾಣ ವಚನಕ್ಕೆ ಕೃಷ್ಣ ಮನೆಗೆ ಬಂದು ಕರೆದಿದ್ದರು: ಎಚ್.ಜಿ.ರಾಮುಲು
ಗಂಗಾವತಿ: ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಸಮಾರಂಭಕ್ಕೆ ಎಸ್.ಎಂ. ಕೃಷ್ಣ ಅವರು ಬೆಂಗಳೂರಿನಲ್ಲಿ ನನ್ನ ಮನೆಗೆ ಬಂದು ಆಹ್ವಾನಿಸಿದ್ದರು ಎಂದು ಮಾಜಿ ಸಂಸದ ಹಾಗೂ ಕಾಂಗ್ರೆಸ್ ಧುರೀಣರಾಗಿರುವ ಎಚ್.ಜಿ.ರಾಮುಲು ಅವರು ಸ್ಮರಿಸಿದರು.
ಮಾಧ್ಯಮದವರೊಂದಿಗೆ ಮಾತನಾಡಿದ ಎಚ್.ಜಿ.ರಾಮುಲು ಅವರು, ತಮ್ಮ ಆತ್ನೀಯ ಸ್ನೇಹಿತರು. ಅಭಿವೃದ್ಧಿಯ ಹರಿಕಾರರರು ಆಗಿದ್ದ ಎಸ್.ಎಂ. ಕೃಷ್ಣ ಅವರು ಇಂತಹ ರಾಜಕಾರಣಿಗಳು ಸಿಗುವುದು ಅಪರೂಪ ಎಂದರು. ಮುಖ್ಯಮಂತ್ರಿಯಾದ ಮೇಲೆ ದೆಹಲಿಗೆ ತೆರಳಿ ಎಐಸಿಸಿ ಅಧ್ಯಕ್ಷೆಯಾಗಿದ್ದ ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಿ ತಾವು. ಎಸ್.ಎಂ ಕೃಷ್ಣ ಅವರು ಶುಭ ಕೋರಿರುವುದಾಗಿ ತಿಳಿಸಿದರು. ಇಂತಹ ನಾಯಕನ ಅಗಲಿಕೆ ತುಂಬಲಾರದ ನಷ್ಟವಾಗಿದೆ. ಇವರ ಆತ್ಮಕ್ಕೆ ಭಗವಂತ ಶಾಂತಿ ನೀಡಲಿ ಎಂದು ಸಂತಾಪ ಸೂಚಿಸಿದ್ದಾರೆ.