Asianet Suvarna News Asianet Suvarna News

'ಡಿ.9ರ ನಂತರ ರಮೇಶ್ ಜಾರಕಿಹೊಳಿಯನ್ನ ಹುಚ್ಚಾಸ್ಪತ್ರೆಗೆ ಕಳಿಸೋಣ'

ನಾನು ಮತ್ತು ಕಾಂಗ್ರೆಸ್ ಕಾರ್ಯಕರ್ತರೆಲ್ಲ ಸೇರಿ ರಮೇಶ್‌ನ್ನು ಗೆಲ್ಲಿಸುತ್ತಿದ್ದೆವು| ಅವರ ಅಳಿಯಂದಿರ ಬಳಿ ಹರಾಮಿ ದುಡ್ಡಿದೆ| ರಮೇಶ್ ನ ಅನ್ಯಾಯ, ಭ್ರಷ್ಟಾಚಾರ ಹೆಚ್ಚಾಗಿದ್ದಕ್ಕೆ ಅವರನ್ನು ಕೈಬಿಟ್ಟೆವು| ಅನ್ಯಾಯ ಮಾಡುವವರ ಜೊತೆ ಹೋಗದಂತೆ ನಮ್ಮ ತಂದೆ ತಾಯಿ ಹೇಳಿದ್ದರು. ಹೀಗಾಗಿ ರಮೇಶ್‌ರನ್ನು ಬಿಟ್ಟು ಹೊರಗೆ ಬಂದೆವು ಎಂದ ಲಖನ್ ಜಾರಕಿಹೊಳಿ|

Gokak Congress Candidate Lakhan Jarakiholi Talks Over Ramesh Jarakiholi
Author
Bengaluru, First Published Dec 5, 2019, 3:05 PM IST

ಗೋಕಾಕ್(ಡಿ.05): ಮತದಾರರಿಂದ ಉತ್ತಮ ಬೆಂಬಲ ವ್ಯಕ್ತವಾಗಿದ್ದು, ಗೆಲ್ಲುವ ವಿಶ್ವಾಸವಿದೆ. ಕ್ಷೇತ್ರದಲ್ಲಿ ನಾವು ದುಡ್ಡು ಹಂಚಿಕೆ ಮಾಡಿಲ್ಲ. ಜಿಲ್ಲೆಯ ಯಮಕನಮರಡಿ ಪ್ರಚಾರಕ್ಕೆಂದು ನಮ್ಮನ್ನು ಕಳಿಸುತ್ತಿದ್ದವರು ರಮೇಶ್ ಜಾರಕಿಹೊಳಿ, ಅಣ್ಣ ತಮ್ಮಂದಿರಿಗೆ ಜಗಳ ಹಚ್ಚಿಸುತ್ತಿದ್ದರು ಎಂದು ಗೋಕಾಕ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಲಖನ್ ಜಾರಕಿಹೊಳಿ ಸಹೋದರ ರಮೇಶ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. 

ಗುರುವಾರ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಮತ್ತು ಕಾಂಗ್ರೆಸ್ ಕಾರ್ಯಕರ್ತರೆಲ್ಲ ಸೇರಿ ರಮೇಶ್‌ನ್ನು ಗೆಲ್ಲಿಸುತ್ತಿದ್ದೆವು, ಅವರ ಅಳಿಯಂದಿರನ್ನು ಚುನಾವಣೆಗೆ ಕಳಿಸುತ್ತಿರಲಿಲ್ಲ. ಅವರ ಅಳಿಯಂದಿರ ಬಳಿ ಹರಾಮಿ ದುಡ್ಡಿದೆ. ರಮೇಶ್ ನ ಅನ್ಯಾಯ, ಭ್ರಷ್ಟಾಚಾರ ಹೆಚ್ಚಾಗಿದ್ದಕ್ಕೆ ಅವರನ್ನು ಕೈಬಿಟ್ಟೆವು. ಅನ್ಯಾಯ ಮಾಡುವವರ ಜೊತೆ ಹೋಗದಂತೆ ನಮ್ಮ ತಂದೆ ತಾಯಿ ಹೇಳಿದ್ದರು. ಹೀಗಾಗಿ ರಮೇಶ್‌ರನ್ನು ಬಿಟ್ಟು ಹೊರಗೆ ಬಂದೆವು ಎಂದು ಹೇಳಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಮಾಜಿ ಸಿಎಂ ಸಿದ್ದರಾಮಯ್ಯರಂತ ದೊಡ್ಡ ನಾಯಕನ ಬಗ್ಗೆ ಈ ಮನುಷ್ಯ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾನೆ. ಸಿದ್ದರಾಮಯ್ಯ ಎಲ್ಲಿ, ಈತ ಎಲ್ಲಿ, ರಮೇಶ್‌ರನ್ನು ಜನರು ಡಿಸೆಂಬರ್ 9ರ ನಂತರ ಎಲ್ಲಿಗೆ ಕಳಿಸಬೇಕೋ ಅಲ್ಲಿಗೇ ಕಳಿಸುತ್ತಾರೆ ಎಂದು ತಿಳಿಸಿದ್ದಾರೆ.

ರಮೇಶ್ ಜಾರಕಿಹೊಳಿ ಮತ್ತವರ ಅಳಿಯಂದಿರನ್ನು ದೂರದ ಹುಚ್ಚಾಸ್ಪತ್ರೆಗೆ ಕಳಿಸೋಣ. ನಾಳೆ ಸಂಜೆ ಆರು ಗಂಟೆಯ ನಂತರ ಈ ಮನುಷ್ಯ ಯಾರಿಗೂ ಸಿಗಲ್ಲ‌ ಎಂದು ಹೇಳಿದ್ದಾರೆ. 

ಇಂದು ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯುತ್ತಿದ್ದು, 9ರಂದು ಫಲಿತಾಂಶ ಪ್ರಕಟವಾಗಲಿದೆ.
 

Follow Us:
Download App:
  • android
  • ios