ರಾಯಚೂರು(ಫೆ.18): ಮೂಕ ಪ್ರಾಣಿಗಳ ಪ್ರೀತಿಗೆ ಸಾಟಿ ಇಲ್ಲ ಎಂಬಂತೆ ಮೇಕೆಯೊಂದು ತನ್ನ ಯಜಮಾನನ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದೆ. ಜನ ತಡೆದರೂ ನಿಲ್ಲದ ಮೇಕೆ ಜನರೊಂದಿಗೆ ಹೆಜ್ಜೆ ಹಾಕಿದೆ.

ಜನರಂತೆ ಅಂತ್ಯಕ್ರಿಯೆಗೆ ಹೋದ ಮೇಕೆ ತನ್ನ ಯಮಮಾನನ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದೆ. ಸರಿಸುಮಾರು 1.05 ಕಿ.ಮೀ.ದೂರದ ಸ್ಮಶಾನಕ್ಕೆ ಮೇಕೆ ನಡೆದುಕೊಂಡು ಹೋಗಿರುವ ಘಟನೆ ರಾಯಚೂರು ಜಿಲ್ಲೆ ಮಾನವಿ ತಾಲೂಕಿನ ಮರಕಲದಿನ್ನಿ ಗ್ರಾಮದಲ್ಲಿ ನಡೆದಿದೆ.

ಚಿತ್ರದುರ್ಗ ಡಿಸಿ ಪ್ರಿಯಾ ಕಾರಿಗೆ KSRTC ಬಸ್ ಡಿಕ್ಕಿ

ಮೇಕೆ ಸಾಕಿದ 48 ವರ್ಷದ ಅಮರಪ್ಪ ಹೃದಯಾಘಾತದಿಂದ ಮೃತಪಟ್ಟಿದ್ದರು. ಮಾಲೀಕನ ಸಾವಿನಿಂದ ಮೇಕೆ ಕಂಗಾಲಾಗಿದ್ದು, ಅಂತ್ಯಕ್ರಿಯೆಗೆ ಜನರೊಂದಿಗೆ ಹೋಗಿತ್ತು. ಜನರು ಮೇಕೆಗೆ ಬರದಂತೆ ತಡೆದರೂ ಮೇಕೆ ಮಸಣಕ್ಕೆ ಬಂದಿದೆ. ತನ್ನ ಮಾಲೀಕನ ಅಂತ್ಯಕ್ರಿಯೆ ಮುಗಿಯುವರೆಗೂ ಮಸಣದ ಸುತ್ತವೇ ಸುತ್ತಾಡಿದ ಮೇಕೆ ಅಲ್ಲಿಯೇ ನಿಂತಿತ್ತು. ಮೇಕೆಯ ಓಡಾಟ ನೋಡಿ ಗ್ರಾಮಸ್ಥರು ಅಚ್ಚರಿಯಾಗಿದ್ದಾರೆ.