ಗೋವಾ ರಾಜ್ಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಘಟಕ! ಗೋವಾ ಕನ್ನಡ ಪರ ಸಂಘಟನೆಗಳಿಂದ ವಿರೋಧ! ಹಿಂದೆ ಇದ್ದ ಘಟಕ ಮುಂದುವರಿಸುವಂತೆ ಸಂಘಟನೆಯ ಆಗ್ರಹ! ಸಭೆಯಲ್ಲಿ ಮನು ಬಳಿಗಾರ ಜೊತೆ ಮಾತಿನ ಚಕಮಕಿ! ಕನ್ನಡ ಪರ ಸಂಘಟನೆಯ ಪ್ರಮುಖರ ಜೊತೆ ಸಂಧಾನ ಮಾತುಕತೆ

ಕಾರವಾ(ಸೆ.8): ಗೋವಾದಲ್ಲಿ ಕನಬ್ನಡ ಸಾಹಿತ್ಯ ಪರಿಷತ್ತು ಘಟಕ ಉದ್ಘಾಟನೆಗೆ ಮುಂದಾಗಿರುವ ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯ ಅಧ್ಯಕ್ಷ ಮನು ಬಳಿಗಾರ ವಿರುದ್ದ ಆಕ್ರೋಶ ವ್ಯಕ್ತವಾಗಿದೆ. 

ಗೋವಾ ರಾಜ್ಯದಲ್ಲಿರುವ ಕನ್ನಡ ಪರ ಸಂಘಟನೆಯ ಜೊತೆ ಮಾತುಕತೆ ನಡೆಸಿರುವ ಮನು ಬಳಿಗಾರ, ನಾಳೆ ಗೋವಾದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಘಟಕ ಉದ್ಘಾಟನೆಗೆ ಮುಂದಾಗಿದ್ದಾರೆ.

"

ಆದರೆ ಮನು ಬಳಿಗಾರ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿರುವ ಗೋವಾ ಕನ್ನಡ ಪರ ಸಂಘಟನೆಗಳು, ಈ ಹಿಂದೆ ಇದ್ದ ಘಟಕವನ್ನೇ ಮುಂದುವರೆಸುವಂತೆ ಒತ್ತಾಯಿಸಿದ್ದಾರೆ. ಇಲ್ಲಿನ ಪರುಪರಿಯ ಹೋಟೆಲ್ ನಲ್ಲಿ ನಡೆದ ಸಭೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಘಟಕ ಉದ್ಘಾಟನೆಗೆ ಅಖಿಲ ಗೋವಾ ಕನ್ನಡ ಮಹಾ ಸಂಘದ ಅಧ್ಯಕ್ಷ ಹನುಮಂತಪ್ಪ ರೆಡ್ಡಿ ವಿರೋಧ ವ್ಯಕ್ತಪಡಿಸಿದರು.

ಈ ಕುರಿತು ಮನು ಬಳಿಗಾರ 70 ಜನ ಕನ್ನಡ ಪರ ಸದಸ್ಯರ ಜೊತೆ ಸಂಧಾನ ಸಭೆ ನಡೆಸಿದರೂ ಗೋವಾ ಕನ್ನಡ ಪರ ಸಂಘಟನೆಗಳು ಇದಕ್ಕೆ ಒಪ್ಪಲಿಲ್ಲ. ಇನ್ನು ಸಭೆಯಲ್ಲಿ ಮಾಪ್ಸಾ ಕನ್ನಡ ಸಂಘದ ಅಧ್ಯಕ್ಷ ಶಂಭು ಶೆಟ್ಟರ್ ಮತ್ತಿತರರು ಭಾಗವಹಿಸಿದ್ದರು.