Asianet Suvarna News Asianet Suvarna News

ಗೋ ಬ್ಯಾಕ್‌ ಸೋಮಣ್ಣ ಅಭಿಯಾನ : ಜಿಲ್ಲಾಡಳಿತ ಸಭೆಯಲ್ಲೇ ಭಾವುಕರಾದ ಉಸ್ತುವಾರಿ ಸಚಿವ

ದೇವಸ್ಥಾನ ಜೀರ್ಣೋದ್ಧಾರ ಮತ್ತು ಮುರಿದ ರಥವನ್ನು ದುರಸ್ತಿ ಮಾಡಿಸದ ಹಿನ್ನೆಲೆಯಲ್ಲಿ ಗೋ ಬ್ಯಾಕ್‌ ಸೋಮಣ್ಣ ಎಂದು ಹೇಳಿದ್ದಕ್ಕೆ ವಸತಿ ಸಚಿವ ವಿ. ಸೋಮಣ್ಣ ಸಭೆಯ ನಡುವೆಯೇ ಭಾವುಕರಾದರು.

Go Back Somanna Abhiyana chamarajanagara in charge minister was emotional in the meeting sat
Author
First Published Mar 26, 2023, 5:59 PM IST | Last Updated Mar 26, 2023, 6:33 PM IST

ಚಾಮರಾಜನಗರ (ಮಾ.26): ದೇವಸ್ಥಾನ ಜೀರ್ಣೋದ್ಧಾರ ಮತ್ತು ಮುರಿದ ರಥವನ್ನು ದುರಸ್ತಿ ಮಾಡಿಸದ ಹಿನ್ನೆಲೆಯಲ್ಲಿ ಚಾಮರಾಜನಗರ ಚನ್ನಪ್ಪನಪುರ ಹಾಗೂ ಅಮಚವಾಡಿ ಗ್ರಾಮಸ್ಥರು ಗೋ ಬ್ಯಾಕ್‌ ಸೋಮಣ್ಣ ಎಂದು ಹೇಳಿದ್ದಕ್ಕೆ ವಸತಿ ಸಚಿವ ವಿ. ಸೋಮಣ್ಣ ಸಭೆಯ ನಡುವೆಯೇ ಭಾವುಕರಾದರು.

ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಅವರು, ಚನ್ನಪ್ಪನಪುರ ಹಾಗೂ ಅಮಚವಾಡಿ ಮತ್ತಿತರ ಗ್ರಾಮಸ್ಥರೊಂದಿಗೆ ಸಭೆಯನ್ನು ಕರೆದಿದ್ದರು. ಈ ಹಿಂದೆ ದೇವಸ್ಥಾನ ಜೀರ್ಣೋದ್ಧಾರ ಹಾಗೂ ಮುರಿದ ರಥವನ್ನು ದುರಸ್ತಿ ಮಾಡಿಕೊಡುವುದಾಗಿ ಸೋಮಣ್ಣ ಭರವಸೆ ನೀಡಿದ್ದರು. ಆದರೆ, ಅಧಿಕಾರ ಮುಗಿಯುತ್ತಾ ಬಂದಿದ್ದರೂ ದುರಸ್ತಿ ಮಾಡಿಕೊಡದ ಹಿನ್ನೆಲೆಯಲ್ಲಿ ಗೋ ಬ್ಯಾಕ್‌ ಸೋಮಣ್ಣ ಎಂದು ಅಭಿಯಾನವನ್ನು ಗ್ರಾಮಸ್ಥರು ಕೈಗೊಂಡಿದ್ದರು. ಗ್ರಾಮಸ್ಥರ ಆಕ್ರೋಶವನ್ನು ಶಮನಗೊಳಿಸಿ ಸಭೆಗೆ ಹಾಜರಾಗುವಂತೆ ಮಾಡಿದ ಅವರು, ಸಭೆಯಲ್ಲಿಯೇ ಭಾವುಕರಾದರು.

ಎಲ್ಲಿ ಸ್ಪರ್ಧಿಸುತ್ತಾರೆ ಮಾಜಿ ಸಿಎಂ ಸಿದ್ದರಾಮಣ್ಣ? ಚಾಮರಾಜನಗರದತ್ತ ವಿ ಸೋಮಣ್ಣ!

ನನ್ನನ್ನು ಖಳನಾಯಕನನ್ನಾಗಿ ಮಾಡಿದ್ದೀರಿ: ಈ ಕುರಿತು ಮಾತನಾಡಿದ ಸೋಮಣ್ಣ ಅವರು, ಗ್ರಾಮಸ್ಥರ ಗೋ ಬ್ಯಾಕ್ ಸೋಮಣ್ಣ ಅಭಿಯಾನದ ಹಿಂದೆ ರಾಜಕೀಯ ಪಿತೂರಿಯಿದೆ. ನಾನೇನು ತಪ್ಪು ಮಾಡಿದ್ದೇನೆ? ಎಂದು ಭಾವುಕರಾದರು. ನನ್ನನ್ನು ಸುಳ್ಳುಗಾರ ಎಂದು ಕರೆಯೋದು ಎಷ್ಟು ಸರಿ? ಬೆಂಗಳೂರಿನಿಂದ ಬೋರ್ಡ್ ತಂದು ಹಾಕಿ ತೇಜೋವಧೆ ಮಾಡಿದ್ದು ಎಷ್ಟರ ಮಟ್ಟಿಗೆ ಸರಿ? ನನ್ನನ್ನು ಖಳನಾಯಕನನ್ನಾಗಿ ಮಾಡಿದ್ದೀರಿ. ಯಾರೋ ಸೃಷ್ಟಿ ಮಾಡಿ ಕಳಿಸ್ತಾನೆ. ಯಾರದ್ದೋ ಮಾತು ಕೇಳಿ ಕೆಟ್ಟದಾಗಿ ನಡೆದುಕೊಂಡ್ರೆ ಹೇಗೆ ಎಂದು ಕಿಡಿಕಾರಿದರು.

ಇನ್ನೊಬ್ಬರ ತೃಪ್ತಿಗಾಗಿ ನನ್ನ ಮಾನ ಹರಾಜು: ಇನ್ನೊಬ್ಬರ ಮುಲಾಜಿಗೋಸ್ಕರ, ಇನ್ನೊಬ್ಬನನ್ನು ತೃಪ್ತಿಪಡಿಸಲು ನನ್ನ ಮೇಲೆಯೇ ಕೆಟ್ಟದಾಗಿ ಬಿಂಬಿಸಿ ಮಾನವನ್ನು ಹರಾಜು ಹಾಕಿದ್ದೀರಿ. ತಮ್ಮ ತೇಜೋವಧೆ ಹಿಂದೆ ರಾಜಕೀಯ ಕೈವಾಡ ಇರುವುದರು ಸ್ಪಷ್ವಾಗಿ ಗೋಚರ ಆಗುತ್ತಿದೆ. ಇನ್ನು ಮುಖ್ಯವಾಗಿ ದೇವರ ಹೆಸರಿನಲ್ಲಿ ರಾಜಕಾರಣ ಮಾಡುವಂತಹ ಚಿಲ್ಲರೆ ಕೆಲಸವನ್ನು ಮಾಡಬಾರದು. ಯಾರೇ ದೇವರ ಬಳಿ ಚಿಲ್ಲರೆ ಕೆಲಸ ಮಾಡಿದರೂ ಕಳೆದು ಹೋಗುತ್ತಾರೆ ಎಂದು ತಮ್ಮ ರಾಜಕೀಯ ವಿರೋಧಿಗಳಿಗೆ ಎಚ್ಚರಿಕೆ ನೀಡಿದರು.

ಬೆಂಗಳೂರು ಬಿಟ್ಟು ಹೊರಟ ಸಚಿವ ಸೋಮಣ್ಣ.! ಚಾಮರಾಜನಗರ ಕ್ಷೇತ್ರದ ಮೇಲೆ ಕಣ್ಣು

 

ತೇಜೋವಧೆಯನ್ನೇ ಸವಾಲಾಗಿ ಸ್ವೀಕರಿಸುತ್ತೇನೆ: ಇನ್ನು ದೇವಸ್ಥಾನವನ್ನು ಗಲೀಜು ಮಾಡದೇ, ನಿರಂತರವಾಗಿ ಸ್ವಚ್ಚವಾಗಿ ಇಟ್ಟಿಕೊಳ್ಳಿ ಅನ್ನೋದೆ ತಪ್ಪಾ? ನಾನು ಮಾತನಾಡಿದ್ದರಲ್ಲಿ ಯಾವುದಾದರೂ ತಪ್ಪಾಗಿದ್ದರೆ ನನ್ನನ್ನು ಕ್ಷಮಿಸಿ. ಈಗ ಎಲ್ಲರೂ ಸೇರಿಕೊಂಡು ವಿರೋಧಿಗಳ ಮಾತುಗಳನ್ನು ನಂಬಿಕೊಂಡು ನನ್ನನ್ನು ತೇಜೋವಧೆ ಮಾಡಿದ್ದೀರಿ. ಇದನ್ನೇ ಸವಾಲಾಗಿ ಸ್ವೀಕರಿಸಿ ದೇವಸ್ಥಾನ ಹೇಗೆ ಅಭಿವೃದ್ಧಿ ಮಾಡ್ತಿನಿ ನೋಡ್ತಾ ಇರಿ. ಈಗಿನಿಂದಲೇ ರಥ ನಿರ್ಮಾಣ ಹಾಗೂ ದೇವಸ್ಥಾನ ಅಭಿವೃದ್ಧಿಗೆ ಕ್ರಮ ವಹಿಸೋದಾಗಿ ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಮಾಹಿತಿ ನೀಡಿದರು. 

Latest Videos
Follow Us:
Download App:
  • android
  • ios