ದಾವಣಗೆರೆ (ನ.11): ಕೊರೋನಾ ಬಗ್ಗೆ ಒಂದಿಷ್ಟುಉದಾಸೀನ ಮಾಡಿದ್ದರಿಂದಲೇ ಕೇಂದ್ರ ರೈಲ್ವೇ ರಾಜ್ಯ ಸಚಿವರಾಗಿದ್ದ ಸ್ನೇಹಿತ ಸುರೇಶ ಅಂಗಡಿ ಅಗಲಿದ್ದು, ಕೊರೋನಾ ಯಾರೂ ಲಘುವಾಗಿ ಪರಿಗಣಿಸಬೇಡಿ ಎಂದು ಸಂಸದ, ಕೇಂದ್ರದ ಮಾಜಿ ಸಚಿವ ಜಿ.ಎಂ.ಸಿದ್ದೇಶ್ವರ ಜನತೆಗೆ ಮನವಿ ಮಾಡಿದ್ದಾರೆ. 

ಕೇಂದ್ರ ಸಚಿವರಾಗಿದ್ದ ಸುರೇಶ ಅಂಗಡಿ ಕೊರೋನಾ ಸೋಂಕಿಗೆ ಬಲಿಯಾದ ನಂತರ ಪಾರ್ಥೀವ ಶರೀರವನ್ನು ಕರ್ನಾಟಕಕ್ಕೆ ತರಲು ಸಾಕಷ್ಟುಪ್ರಯತ್ನಿಸಿದೆವು. 

ಮೇಲ್ಮನೆ ಚುನಾವಣೆ: ಮೂರರಲ್ಲಿ ಬಿಜೆಪಿ ಜಯಭೇರಿ, ಪರಿಷತ್‌ನಲ್ಲಿ 'ಕಮಲ' ಬಲ 30ಕ್ಕೇರಿಕೆ ...

ಆದರೆ, ಅದು ಸಾಧ್ಯವಾಗದ್ದರಿಂದಾಗಿ ಕೋವಿಡ್‌ ನಿಯಮಾವಳಿಯನುಸಾರ ದೆಹಲಿಯಲ್ಲೇ ಅಂತ್ಯಕ್ರಿಯೆ ನಡೆಸಲಾಯಿತು ಎಂದು ತಿಳಿಸಿದರು. ಸೂಳೆಕೆರೆಗೆ ಬಾಗಿನ ಅರ್ಪಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುರೇಶ ಅಂಗಡಿ ಮೃತಪಟ್ಟನಂತರ ನಾನು ದೆಹಲಿಗೇ ಹೋಗಿಲ್ಲ. ಏಕೆಂದರೆ ಕೋವಿಡ್‌ ಬಂದು ಅಲ್ಲಿ ಮೃತರಾದರೆ ಅಲ್ಲಿಂದ ಶವ ಸಹ ಕರ್ನಾಟಕಕ್ಕೆ ಬರುವುದಿಲ್ಲ. ಇದೇ ಕಾರಣಕ್ಕೆ ಎಷ್ಟೇ ಮೀಟಿಂಗ್‌ ಇದ್ದರೂ ನಾನು ದೆಹಲಿಗೆ ಹೋಗಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.