ಕನ್ನಡ ಭಾವುಟ ಕಟ್ಟಿದರೆ ತೆರಿಗೆ ವಿನಾಯಿತಿ ನೀಡಿ
ಜಿಲ್ಲೆಯಲ್ಲಿ ಕನ್ನಡ ರಾಜೋತ್ಸವ ಸಂಬಂಧ ಕನ್ನಡ ಭಾವುಟ, ಪ್ಲಕ್ಸ್ ಕಟ್ಟಿದರೆ ಅವುಗಳಿಗೆ ತೆರಿಗೆ ವಿನಾಯಿತಿ ನೀಡಬೇಕು. ನಗರದ ಎಲ್ಲಾ ಸರ್ಕಲ್‌ಗಳಲ್ಲಿ ಕನ್ನಡ ದ್ವಜ ಹಾರಾಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಕನ್ನಡ ಪರ ಸಂಘಟನೆಗಳ ಒಕ್ಕೂಟಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ. ಪರಮೇಶ್ವರ್ ಭರವಸೆ ನೀಡಿದ್ದಾರೆ.
ತುಮಕೂರು : ಜಿಲ್ಲೆಯಲ್ಲಿ ಕನ್ನಡ ರಾಜೋತ್ಸವ ಸಂಬಂಧ ಕನ್ನಡ ಭಾವುಟ, ಪ್ಲಕ್ಸ್ ಕಟ್ಟಿದರೆ ಅವುಗಳಿಗೆ ತೆರಿಗೆ ವಿನಾಯಿತಿ ನೀಡಬೇಕು. ನಗರದ ಎಲ್ಲಾ ಸರ್ಕಲ್‌ಗಳಲ್ಲಿ ಕನ್ನಡ ದ್ವಜ ಹಾರಾಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಕನ್ನಡ ಪರ ಸಂಘಟನೆಗಳ ಒಕ್ಕೂಟಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ. ಪರಮೇಶ್ವರ್ ಭರವಸೆ ನೀಡಿದ್ದಾರೆ.
ತಮ್ಮನ್ನು ಪ್ರವಾಸಿ ಮಂದಿರದಲ್ಲಿ ಭೇಟಿಯಾಗಿ ಪಾಲಿಕೆಯ ವತಿಯಿಂದ ನಗರದ ಭದ್ರಮ್ಮ ವೃತ್ತ ಮತ್ತು ಬಸ್ ನಿಲ್ದಾಣದ ಮುಂಭಾಗ ಕಟ್ಟಿರುವ ಕನ್ನಡ ಬಾವುಟಗಳನ್ನು ಕಿತ್ತು ಹಾಕಿರುವ ಪಾಲಿಕೆಯ ಕ್ರಮವನ್ನು, ಪಾಲಿಕೆಯ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡುವಂತೆ ಸಲ್ಲಿಸಿದ ಮನವಿಗೆ ಸ್ಪಂದಿಸಿ ಮಾತನಾಡಿದ ಅವರು, ಕನ್ನಡ ಬಾವುಟಗಳನ್ನು ತೆರವುಗೊಳಿಸದಂತೆ ಸ್ಥಳದಲ್ಲಿಯೇ ಇದ್ದ ಪಾಲಿಕೆಯ ಆಯುಕ್ತರಿಗೆ ನಿರ್ದೇಶನ ನೀಡಿದರು. ಕನ್ನಡ ಬಾವುಟ ಕಟ್ಟುವವರೇ ಕಾರ್ಯಕ್ರಮದ ನಂತರ ತೆರವುಗೊಳಿಸುವಂತೆ ಅಗತ್ಯ ಕ್ರಮ ಕೈಗೊಳ್ಳಲು ಸೂಚನೆ ನೀಡಿದರು.
ಈ ವೇಳೆ ಕನ್ನಡಪರ ಸಂಘಟನೆಗಳ ಒಕ್ಕೂಟದ ಪರವಾಗಿ ಮಾತನಾಡಿದ ಕನ್ನಡ ಸೇನೆಯ ಅಧ್ಯಕ್ಷ ಧನಿಯಕುಮಾರ್, ನಗರದ ಭದ್ರಮ್ಮ ವೃತ್ತ ಮತ್ತು ಬಸ್ ನಿಲ್ದಾಣದ ಬಳಿ ಹಾರಿಸಿದ್ದ ಕನ್ನಡ ಬಾವುಟಗಳನ್ನು ಪಾಲಿಕೆಯ ಅಧಿಕಾರಿಗಳು ಕಿತ್ತು ಚರಂಡಿಗೆ ಎಸೆದಿದ್ದಾರೆ. ಅಲ್ಲದೆ ಪ್ಲಕ್ಸ್ ಕಟ್ಟಲು ಶುಲ್ಕ ಪಾವತಿಸಿ ಪರವಾಗಿ ಪಡೆದು, ಪ್ಲಕ್ಸ್ ಜೊತೆ, ಬಾವುಟ ಕಟ್ಟಿದ ಕನ್ನಡ ಸಂಘಟನೆಯ ಮುಖ್ಯಸ್ಥರಿಗೆ ದಂಡ ಕೂಡ ವಿಧಿಸಿದ್ದಾರೆ. ಪಾಲಿಕೆಯ ಅಧಿಕಾರಿಗಳ ಈ ವರ್ತನೆಯಿಂದ ಸಾಕಷ್ಟು ತೊಂದರೆಯಾಗಿದೆ. ಪ್ಲಕ್ಸ್ ಮತ್ತು ಬ್ಯಾನರ್‌ಗಳಿಗೆ ವಿನಾಯಿತಿ ನೀಡಿದರೆ ಹೆಚ್ಚು ಅನುಕೂಲವಾಗಲಿದೆ ಎಂದು ಸಚಿವರಿಗೆ ಸಮಸ್ಯೆಯ ಮನವರಿಕೆ ಮಾಡಿಕೊಟ್ಟರು.
ಕಲಾಶ್ರೀ ಡಾ.ಲಕ್ಷ್ಮಣದಾಸ್ ಮಾತನಾಡಿ, ಕನ್ನಡ ನಾಡು, ನುಡಿ, ನೆಲ, ಜಲದ ವಿಚಾರದಲ್ಲಿ ಕರ್ನಾಟಕದಲ್ಲಿ ಮೊದಲು ಅದ್ಯತೆ ನೀಡಬೇಕು. ಕನ್ನಡ ಬಾವುಟ, ಪ್ಲಕ್ಸ್ ಕಿತ್ತು ಹಾಕುವುದು ತರವಲ್ಲ. ಇದರ ಬಗ್ಗೆ ಅಧಿಕಾರಿಗಳು ಎಚ್ಚರಿಕೆ ವಹಿಸಿಬೇಕೆಂದರು.
ಈ ವೇಳೆ ಜಿಲ್ಲಾ ಕಸಾಪ ಅಧ್ಯಕ್ಷ ಕೆ.ಎಸ್. ಸಿದ್ದಲಿಂಗಪ್ಪ, ವಿವಿಧ ಕನ್ನಡಪರ ಸಂಘಟನೆಗಳ ಮುಖಂಡರಾದ ಉಮೇಶ್, ಕನ್ನಡ ಪ್ರಕಾಶ್, ಪಿ.ಎನ್. ರಾಮಯ್ಯ, ರಘು, ಕೃಷ್ಣಮೂರ್ತಿ, ರಕ್ಷಿತ್ ಕರಿಮಣಿ, ರಾಮಣ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.