ಮೈಸೂರು (ಆ.26): ನಿಶ್ಚಿತಾರ್ಥದ ಮನೆಯಲ್ಲಿ ಕಳ್ಳತನ ಮಾಡಿದ್ದ ಸ್ನೇಹಿತೆಯನ್ನು ಮೈಸೂರಿನ ಮೇಟಗಳ್ಳಿ ಠಾಣೆಯ ಪೊಲೀಸರು ಬಂಧಿಸಿ,  4.15 ಲಕ್ಷ ರು. ಬೆಲೆಬಾಳುವ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.

ಕುಂಬಾರಕೊಪ್ಪಲು ಸುಭಾಷ್‌ ನಗರ ನಿವಾಸಿ ರಾಮಕೃಷ್ಣೇಗೌಡ ಎಂಬವರ ಪುತ್ರಿ ಆಶ್ರಿತಾ(21) ಬಂಧಿತ ಆರೋಪಿ. ಸುಭಾಷ್‌ನಗರದ ರಮೇಶ್‌ ಎಂಬವವರ ಮನೆಯಲ್ಲಿ ಭಾನುವಾರ ಅವರ ಮಗಳ ನಿಶ್ಚಿತಾರ್ಥ ಕಾರ್ಯಕ್ರಮವಿದ್ದು, ಕಾರ್ಯಕ್ರಮ ಮುಗಿದ ನಂತರ ಚಿನ್ನಾಭರಣಗಳನ್ನು ಅಲ್ಮೇರಾದಲ್ಲಿ ಇರಿಸಿದ್ದರು. 

ಪಿಶಾಚಿಯೂ ನಾಚುವಂಥ ಹೀನ ಕೃತ್ಯ! ಕೊಲೆ ಮಾಡಿ ರೇಪ್, ಸಿಸಿಟಿವಿಯಲ್ಲಿ ಸೆರೆ...

ನಂತರ ನೋಡಿದಾಗ ಒಡವೆಗಳು ಇರಲಿಲ್ಲ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಕಾರ್ಯಕ್ರಮಕ್ಕೆ ಮನೆಗೆ ಬಂದಿದ್ದ ಮದುಮಗಳ ಪರಿಚಿತಳಾದ ಆಶ್ರಿತಾ ಎಂಬವರನ್ನು ಮಂಗಳವಾರ ಬಂಧಿಸಿ ವಿಚಾರಣೆಗೊಳಪಡಿಸಿದಾಗ, ಚಿನ್ನಾಭರಣಗಳನ್ನು ಕದ್ದು ತನ್ನ ಮನೆಯಲ್ಲಿ ಇರಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ. ಬಂಧಿತಳಿಂದ 85 ಗ್ರಾಂ ತೂಕದ ಎರಡು ನಕ್ಲೇಸ್‌ಗಳು ಮತ್ತು ಒಂದು ಜೊತೆ ಓಲೆಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

139 ಜನರಿಂದ 5000ಕ್ಕೂ ಹೆಚ್ಚು ಬಾರಿ ಲೈಂಗಿಕ ಕಿರುಕುಳ, ರೇಪ್‌ ಆರೋಪ!...

ಪೊಲೀಸ್‌ ಆಯುಕ್ತ ಡಾ. ಚಂದ್ರಗುಪ್ತ, ಡಿಸಿಪಿ ಗೀತ ಪ್ರಸನ್ನ, ಎನ್‌.ಆರ್‌. ಉಪ ವಿಭಾಗದ ಎಸಿಪಿ ಶಿವಶಂಕರ್‌ ಅವರ ಮಾರ್ಗದರ್ಶನದಲ್ಲಿ ಮೇಟಗಳ್ಳಿ ಠಾಣೆಯ ಇನ್ಸ್‌ಪೆಕ್ಟರ್‌ ಎ. ಮಲ್ಲೇಶ್‌, ಎಸ್‌ಐ ವಿಶ್ವನಾಥ್‌, ಎಎಸ್‌ಐ ಪೊನ್ನಪ್ಪ, ಸಿಬ್ಬಂದಿ ಲಿಂಗರಾಜಪ್ಪ, ದಿವಾಕರ್‌, ಕೃಷ್ಣ, ಆಶಾ ಈ ಪತ್ತೆ ಮಾಡಿದ್ದಾರೆ.

ಎರಡನೇ ಹೆಂಡತಿ ಜೊತೆ ಸೇರಿ ಮೊದಲ ಹೆಂಡತಿ ಮಗಳನ್ನೇ ಕೊಂದ ಪಾಪಿ ತಂದೆ

"