ಹೈದರಾಬಾದ್(ಆ.26)‌: ತೆಲುಗು ಚಿತ್ರರಂಗದ ಸದಸ್ಯರು, ವಿದ್ಯಾರ್ಥಿ ಸಂಘಟನೆಗಳ ಮುಖಂಡರು ಸೇರಿದಂತೆ 139 ಮಂದಿ ತನ್ನ ಮೇಲೆ ಹಲವು ವರ್ಷಗಳಿಂದ ಅತ್ಯಾಚಾರ ಹಾಗೂ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ 25 ವರ್ಷದ ಮಹಿಳೆಯೊಬ್ಬಳು ಹೈದರಾಬಾದ್‌ನಲ್ಲಿ ಪೊಲೀಸ್‌ ದೂರು ದಾಖಲಿಸಿದ್ದಾಳೆ.

ಸೆಕ್ಸ್‌ ರಾಕೆಟ್‌ನಲ್ಲಿ ಅರೆಸ್ಟ್‌ ಆದ ಯುವತಿಗೆ ಕೊರೋನಾ, ಪೊಲೀಸರಿಗೆ ನಡುಕ!

ತನ್ನ ಮೇಲೆ 5000ಕ್ಕೂ ಹೆಚ್ಚು ಬಾರಿ ಲೈಂಗಿಕ ದೌರ್ಜನ್ಯ ಹಾಗೂ ಹಲವು ಬರಿ ಸಾಮೂಹಿಕ ಅತ್ಯಾಚಾರ ಎಸಗಲಾಗಿದೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾಳೆ. ಅಲ್ಲದೇ ದೂರಿನಲ್ಲಿ ರಾಜಕಾರಣಿಗಳು, ವಕೀಲರು, ಮಾಧ್ಯಮ ಪ್ರತಿನಿಧಿಗಳನ್ನು ಹೆಸರಿಸಿದ್ದಾಳೆ.

ಪ್ರೇಯಸಿಗಾಗಿ ಗ್ರಾಹಕರ 31 ಕೋಟಿ ರೂ ಉಡಾಯಿಸಿದ ಬ್ಯಾಂಕ್ ಮ್ಯಾನೇಜರ್!

2009ರಲ್ಲಿ ತನ್ನ ಮದುವೆ ಆದಾಗಿನಿಂದಲೂ ಪತಿಯ ಸಂಬಂಧಿಗಳಿಂದ ನಿರಂತರ ಲೈಂಗಿಕ ದೌರ್ಜನ್ಯ ಎದುರಿಸಿದ್ದೇನೆ. ಅನೇಕರು ತನ್ನನ್ನು ಲೈಗಿಂಕವಾಗಿ ಬಳಸಿಕೊಂಡು ವಿಡಿಯೋ ಚಿತ್ರೀಕರಣ ಮಾಡಿ ಬೆದರಿಕೆ ಹಾಕಿದ್ದರು ಎಂದು ಮಹಿಳೆ ಆರೋಪಿಸಿದ್ದಾರೆ. ಈ ಸಂಬಂಧ ಪೊಲೀಸರು ವಿವಿಧ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಪಾಕ್‌ ಪ್ರೇಮಿ ಕಾನ್ಸ್‌ಸ್ಟೇಬಲ್; ಹಿಂದೂ ಹುಡುಗಿಯರೇ ಟಾರ್ಗೆಟ್..!

"