ಮೈಸೂರು(ಜ.25): ಪ್ರತಿದಿನ ಹುಳು ಮತ್ತು ಕಲ್ಲು ಮಿಶ್ರಿತ ಆಹಾರ ನೀಡುತ್ತಿದ್ದಾರೆ ಎಂದು ಆರೋಪಿಸಿ ಇಡೀ ರಾತ್ರಿ ವಿದ್ಯಾರ್ಥಿನಿಯರು ಧರಣಿ ನಡೆಸಿರುವ ಘಟನೆ ಕೆ.ಆರ್‌. ನಗರ ತಾಲೂಕಿನ ಹೆಬ್ಸೂರು ಗ್ರಾಮದಲ್ಲಿರುವ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ನಡೆದಿದೆ.

ವಿದ್ಯಾರ್ಥಿನಿಯರಿಗೆ ಸರಿಯಾಗಿ ಆಹಾರ ನೀಡುತ್ತಿಲ್ಲ, ನೀಡುತ್ತಿರುವ ಆಹಾರವೂ ಕೂಡಾ ಕಲುಷಿತವಾಗಿದೆ. ವಸತಿ ಶಾಲೆಯಲ್ಲಿ ಪ್ರಾಂಶುಪಾಲರು, ವಾರ್ಡನ್‌, ಶುಶ್ರೂಶಕಿ ಸೇರಿದಂತೆ ರಾತ್ರಿ ಪಾಳೆಯದಲ್ಲಿ ಕರ್ತವ್ಯ ನಿರ್ವಹಿಸುವವರೂ ಸಹ ಯಾರೂ ಇಲ್ಲ, ನಮ್ಮ ರಕ್ಷಣೆ ಯಾರು ಮಾಡುತ್ತಾರೆ ಎಂದು ವಿದ್ಯಾರ್ಥಿನಿಯರು ಸಂಬಂಧಿಸಿದ ಅಧಿಕಾರಿಗಳನ್ನು ಪ್ರಶ್ನೆ ಮಾಡಲು ಯಾವೊಬ್ಬ ಅಧಿಕಾರಿ ಕೂಡಾ ತಿರುಗಿ ನೋಡಿಲ್ಲ ಎಂದು ಗುರುವಾರ ರಾತ್ರಿ 10ಕ್ಕೆ ವಸತಿ ಶಾಲೆಯ ಆವರಣದಲ್ಲಿ ಧರಣಿ ನಡೆಸಿದ್ದಾರೆ.

ಕನ್ನಡ ಚಂದದ ಭಾಷೆ ಎಂದ ಮಧ್ಯಪ್ರದೇಶ ಮೂಲದ IPS ಅಧಿಕಾರಿ ಇಶಾ ಪಂತ್

ಗುರುವಾರ ಬೆಳಗ್ಗೆಯಿಂದಲೇ ಉಪಾಹಾರ ಸೇವಿಸದೇ ವಿದ್ಯಾರ್ಥಿನಿಯರು ರಾತ್ರಿ 10ಕ್ಕೆ ತಮ್ಮ ಪೋಷಕರಿಗೆ ದೂರವಾಣಿ ಮೂಲಕ ಸರಿಯಾಗಿ ನಮಗೆ ಆಹಾರ ನೀಡುತ್ತಿಲ್ಲ, ಮನೆಯಿಂದ ಆಹಾರ ತನ್ನಿ ಎಂದು ತಿಳಿಸಿದಾಗ ಪೋಷಕರ ದಂಡೇ ವಸತಿ ಶಾಲೆಯಲ್ಲಿ ಜಮಾಯಿಸಿತು.

ಈ ವಸತಿ ಶಾಲೆಯ ಬಗ್ಗೆ ದೂರಿನ್ವಯ ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷ ಸಾ.ರಾ. ನಂದೀಶ್‌ ಅವರು ಭೇಟಿ ನೀಡಿ ಪ್ರಾಂಶುಪಾಲರಿಗೆ ಹಾಗೂ ವಾರ್ಡನ್‌ಗೆ ಎಚ್ಚರಿಕೆ ನೀಡಿದ್ದರೂ ಸಹ ತಮ್ಮ ಚಾಳಿಯನ್ನು ಮುಂದುವರಿಸಿದ್ದಾರೆ ಎಂದು ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ.

ಹುನಗುಂದ: ಮರೋಳ ಹನಿ ನೀರಾವರಿ ಯೋಜನೆಯಲ್ಲಿ ಅವ್ಯವಹಾರ, ತನಿಖೆಗೆ ಆದೇಶ

ರಾತ್ರಿ ವೇಳೆಯಲ್ಲಿ ನಮಗೆ ರಕ್ಷಣೆ ಇಲ್ಲದೆ ಭಯದ ವಾತಾರಣದಲ್ಲಿ ನಮ್ಮ ಮಕ್ಕಳು ಇದ್ದಾರೆ ಎಂದು ಕೆಲ ಪೋಷಕರು ದೂರಿದ್ದಾರೆ, ಇನ್ನೂ ಕೆಲ ಪೋಷಕರು ಹಿರಿಯ ಪೊಲೀಸ್‌ ಅಧಿಕಾರಿಗಳಿಗೆ ದೂರವಾಣಿ ಮೂಲಕ ಪೋನ್‌ ಮಾಡಿ ರಕ್ಷಣೆ ಕೋರಿದ್ದಾರೆ. ರಾತ್ರಿ 11.30ರ ಸಮಯದಲ್ಲಿ ಸಾಲಿಗ್ರಾಮ ಪೊಲೀಸ್‌ ಠಾಣೆಯ ಎಸ್‌ಐ ಮಾದಪ್ಪ ಭೇಟಿ ನೀಡಿ ಸಮಸ್ಯೆಯನ್ನು ಆಲಿಸಿ ಮೇಲಾಧಿಕಾರಿಗಳ ಗಮನಕ್ಕೆ ತರುತ್ತೇನೆ ಎಂದು ತಿಳಿಸಿ ಒಬ್ಬ ಪೇದೆಯನ್ನು ರಕ್ಷಣೆಗಾಗಿ ನೇಮಕ ಮಾಡುತ್ತೇನೆ ಎಂದು ತಿಳಿಸಿದರು.

ಮೇಲ್ವಿಚಾರಕರ ನಿರ್ವಕ್ಷ್ಯ

ಕಳಪೆ ಮತ್ತು ಹುಳು, ಕಲ್ಲು ಆಹಾರ ಮಿಶ್ರಿತ ಆಹಾರ ನೀಡುತ್ತಿದ್ದಾರೆ. ಎಷ್ಟುಬಾರಿ ಹೇಳಿದರೂ ಶಾಲೆಯ ಶಿಕ್ಷಕರು ಅಥವಾ ಮೇಲ್ವಿಚಾರಕರು ಕೇಳುತ್ತಿಲ್ಲ ಎಂದು ಪೋಷಕರ ಎದುರು ತಮ್ಮ ಅಳಲನ್ನು ಹೇಳಿಕೊಂಡ ವಿದ್ಯಾರ್ಥಿನಿಯರು, ಶಾಲೆಯಲ್ಲಿ ಅಡುಗೆಗೆ ಹುಳು ಮಿಶ್ರಿತ ಪದಾರ್ಥಗಳನ್ನೇ ಉಪಯೋಗಿಸಲಾಗುತ್ತದೆ, ಇದರಿಂದಾಗಿ 14 ವಿದ್ಯಾರ್ಥಿನಿಯರು ಆಸ್ಪತ್ರೆ ಸೇರಿದ್ದಾರೆ. ಈಗಿರುವ ವಿದ್ಯಾಥಿನಿಯರಲ್ಲಿ ಕೆಲವರು ಅನಾರೋಗ್ಯಕ್ಕೆ ಒಳಗಾಗಿದ್ದಾರೆ. ಆದರೆ ಔಷಧಿ ಕೊಡಲು ಯಾರು ಇಲ್ಲ ಎಂದು ವಸತಿ ಶಾಲೆಯ ಅವ್ಯವಸ್ಥೆ ಬಗ್ಗೆ ಸಂಕ್ಷಿಪ್ತವಾಗಿ ಪೋಷಕರಿಗೆ ಮನದಟ್ಟು ಮಾಡಿದರು.