ಉಡುಪಿ(ಏ.14): ಶಾಲಾ ವಿದ್ಯಾ​ರ್ಥಿನಿ ಆತ್ಮ​ಹತ್ಯೆ ಮಾಡಿಕೊಂಡ ಘಟನೆ ಪಡುಬಿದ್ರೆ ಸಮೀಪದ ಅದಮಾರುನಲ್ಲಿ ಸೋಮ​ವಾರ ಸಂಭವಿಸಿದೆ. ಪಡುಬಿದ್ರೆ ಅದಮಾರು ನಿವಾಸಿ ಕಂಚಿನಡ್ಕ ಶಾಲೆಯಲ್ಲಿ ಓದುತ್ತಿದ್ದ ಪ್ರತಿಭಾವಂತ ವಿದ್ಯಾರ್ಥಿನಿ ಸೃಜನ್ಯ (13) ಆತ್ಮ​ಹತ್ಯೆ ಮಾಡಿ​ಕೊಂಡವಳು.

ಮೊಬೈಲ್‌ ಕೊಡದಿದ್ದಕ್ಕೆ ಬೇಸರಗೊಂಡು ಬಾಲಕಿ ಆತ್ಮಹತ್ಯೆಕೊಂಡಿ​ದ್ದಾಳೆಂದು ದೂರಿನಲ್ಲಿ ತಿಳಿಸಿದ್ದಾರೆ. ಮೃತಳ ತಾಯಿ ಮಾನಂಪಾಡಿ ಶಾಲೆಯಲ್ಲಿ ಟೀಚರ್‌ ಆಗಿದ್ದು, ತಂದೆ ಹಳೆಯಂಗಡಿ ಬೊಳ್ಳುರು ಶಾಲೆಯಲ್ಲಿ ಶಿಕ್ಷಕರಾಗಿ ಆಗಿ ಕಾರ್ಯ​ನಿ​ರ್ವ​ಹಿ​ಸು​ತ್ತಿ​ದ್ದಾರೆ. ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆನ್‌ಲೈನ್‌ನಲ್ಲೇ ಎಣ್ಣೆ ಬುಕ್‌ ಮಾಡಿ ಎಂದ, ನಂಬಿದ ಕುಡುಕರ ಕಥೆ ಗೋವಿಂದಾ!

[ಸಮಸ್ಯೆಗಳು ಜೀವನದ ಅವಿಭಾಜ್ಯ ಅಂಗ. ಸಮಸ್ಯೆಯಿಲ್ಲದ ಮನುಷ್ಯನಿಲ್ಲ. ಯಾವುದೇ ಸಮಸ್ಯೆ ಜೀವನದ ಅಂತ್ಯವಲ್ಲ. ಆತ್ಮಹತ್ಯೆ ಆಲೋಚನೆ ಹೊಳೆದರೆ ಸರ್ಕಾರದ ಸಹಾಯವಾಣಿಗೆ ಕರೆ ಮಾಡಿ: 080 25497777 ಅಥವಾ ಆರೋಗ್ಯ ಸಹಾಯವಾಣಿ 104 ಗೆ ಕರೆ ಮಾಡಿ]