ದೊಡ್ಡಮ್ಮನ ಮಗನಿಂದ್ಲೆ 5 ತಿಂಗಳ ಗರ್ಭಿಣಿಯಾಗಿದ್ದ ಬಾಲಕಿ ಹೆದರಿ ಆತ್ಮಹತ್ಯೆ
ಗರ್ಭಿಣಿಯಾಗಿದ್ದ ಬಾಲಕಿ ಮನೆಯವರಿಗೆ ವಿಷಯ ತಿಳಿಯುತ್ತದೆ ಎಂದು ಹೆದರಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ
ರಿಪ್ಪನ್‌ಪೇಟೆ (ಅ.02): ಐದು ತಿಂಗಳ ಗರ್ಭಿಣಿಯಾಗಿದ್ದ ಬಾಲಕಿ ಮನೆಯವರಿಗೆ ವಿಷಯ ತಿಳಿಯುತ್ತದೆ ಎಂದು ಹೆದರಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಘಟನೆ ಸಮೀಪದ ಕೋಡೂರು ಸಾಕುವಳ್ಳಿ ಗ್ರಾಮದಲ್ಲಿ ಬುಧವಾರ ನಡೆದಿದೆ.
ಬಾಲಕಿಯ ದೊಡ್ಡಮ್ಮನ ಮಗ ರಾಘು ಯಾನೆ ರಾಘವೇಂದ್ರ ಲೈಂಗಿಕ ದೌರ್ಜನ್ಯ ಎಸಗಿದ್ದಾಗಿ ಮೃತ ಬಾಲಕಿ ಡೆತ್‌ನೋಟ್ ಬರೆದಿರುವುದರಿಂದಾಗಿ ತಿಳಿದು ಬಂದಿದೆ.
ಐದು ತಿಂಗಳ ಗರ್ಭೀಣಿ ಎಂದು ವಿಷಯ ಗೊತ್ತಾಗುತ್ತಿದ್ದಂತೆ ಪರಾರಿಯಾಗಿದ್ದ ಆರೋಪಿಯನ್ನು ಹೊಸನಗರ ವೃತ್ತ ನಿರೀಕ್ಷಕ ಮಧುಸೂದನ್ ಮತ್ತು ರಿಪ್ಪನ್‌ಪೇಟೆ ಪಿಎಸ್‌ಐ ಪಾರ್ವತಿಬಾಯಿ ಸಿಬ್ಬಂದಿ ವರ್ಗ ತೀರ್ಥಹಳ್ಳಿ ತಾಲೂಕಿನ ಅರಳಸುರಳಿ ಹತ್ತಿರ ಬುಧವಾರ ಬಂಧಿಸಿದ್ದಾರೆ.
ಲಾಕ್‌ಡೌನ್: ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ನೇಕಾರ ಆತ್ಮಹತ್ಯೆ .
ಈಗಾಗಲೇ ದೇಶದಲ್ಲಿ ಇಂತಹ ದುಷ್ಕೃತ್ಯಗಳು ಬೆಳಕಿಗೆ ಬರುತ್ತಲೇ ಇದ್ದು, ಅಮಾನವೀಯ ಘಟನೆಗಳು ಬೆಳಕಿಗೆ ಬಂದಿವೆ.