ಬೆಂಗಳೂರು[ಆ.10]: ನಗರದಲ್ಲಿ ಕಿಟಕಿ ಮೂಲಕ ಕಳವು ಮಾಡುತ್ತಿರುವ ನಟೋರಿಯಸ್ ಕಳ್ಳನಿಗಾಗಿ ಗಿರಿ ನಗರ ಪೊಲೀಸರು ಬಲೆ ಬೀಸಿದ್ದಾರೆ.  
ಮಂಜುನಾಥ್ ಬಂಧಿತ ಆರೋಪಿ. ಹೆಸರಿಗೆ ಫ್ಲವರ್ ಡೆಕೋರೇಷನ್ ಕೆಲಸ ಮಾಡುತ್ತಿದ್ದ ಈತ ಕಿಟಕಿ ಒಡೆದು ಮನೆಕಳ್ಳತನ ಮಾಡುತ್ತಿದ್ದಾನೆ. ಕೆಲಸ ಮುಗಿಸಿ ತಡರಾತ್ರಿ ಮನೆಯಲ್ಲಿ ಮಲಗಿದ್ದವರ ಕತ್ತಿನಲ್ಲಿದ್ದ ಚೈನ್ ಉಂಗುರ ಕೊನೆಗೆ ಉಡ್ದಾರಾ ದೋಚಿ ಪರಾರಿಯಾಗುತ್ತಾನೆ.

ದಾಸರಹಳ್ಳಿ ಮತ್ತು ಗಿರಿನಗರ ವ್ಯಾಪ್ತಿಗಳಲ್ಲಿ ಆರೋಪಿ  ಕೃತ್ಯ ಎಸಗುತ್ತಿದ್ದಾನೆ. ಪೊಲೀಸರಿಗೆ ಅನುಮಾನ ಬರಬಾರದೆಂಬ ಕಾರಣ ಮಾರು ವೇಷದಲ್ಲಿ ತಿರುಗಾಡುತ್ತಿದ್ದ. ಗಿರಿ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಆರೋಪಿಗಾಗಿ ತೀವ್ರ ಶೋಧ ನಡೆಸಿದ್ದಾರೆ.

ಪ್ರೀತಿ ವಿಚಾರದಲ್ಲಿ ಮೂವರ ನಡುವೆ ಘರ್ಷಣೆ: ಒಬ್ಬನ ಹತ್ಯೆ
ಯುವತಿಯೊಬ್ಬಳನ್ನು ಪ್ರೀತಿಸುವ ವಿಚಾರವಾಗಿ ಮೂವರು ವಿದ್ಯಾರ್ಥಿಗಳ ಮಧ್ಯೆ ಸಂಭವಿಸಿದ ಘರ್ಷಣೆಯಲ್ಲಿ ಒಬ್ಬಾತ ಹತ್ಯೆಯಾಗಿರುವ ಘಟನೆ ವಿವಿಪುರದಲ್ಲಿ ಬುಧವಾರ ರಾತ್ರಿ ನಡೆದಿದೆ.

ಗುಜರಾತ್ ಮೂಲದ ರೋಣಕ್ ಚೌಧರಿ (23) ಮೃತ ವಿದ್ಯಾರ್ಥಿಯಾಗಿದ್ದಾನೆ. ನರ್ಸಿಂಗ್ ಪರೀಕ್ಷೆ ಬರೆಯಲು ಬಂದಿದ್ದ ವಿದ್ಯಾರ್ಥಿಗಳ ಪ್ರೇಮ ವಿಚಾರವಾಗಿ ರಾತ್ರಿ ಗಲಾಟೆ ನಡೆದಿದೆ. ಆಗ ಕಟ್ಟಡದಿಂದ ರೋಣಕ್‌ನನ್ನು ರಾಯಲ್ ಕೆಳಗೆ ತಳ್ಳಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸಂಬಂಧ ಆರೋಪಿ ರಾಯಲ್ ಚೌಧರಿನನ್ನು ಪೊಲೀಸರು ಬಂಧಿಸಿದ್ದಾರೆ. ಆ.2 ರಿಂದ ಆರಂಭವಾಗಿರುವ ನರ್ಸಿಂಗ್ ಪರೀಕ್ಷೆ ಬರೆಯಲು ಗುಜರಾತಿನಿಂದ 130 ವಿದ್ಯಾರ್ಥಿಗಳು ಬಂದಿದ್ದಾರೆ. ಇವರು ನಗರದ ಸಿಎನ್‌ಕೆ ಸ್ಕೂಲ್ ಆಫ್ ನರ್ಸಿಂಗ್‌ನಲ್ಲಿ ಪರೀಕ್ಷೆ ರೆಯುತ್ತಿರುವ ವಿದ್ಯಾರ್ಥಿಗಳು, ವಿ.ವಿ.ಪುರಂನ ಬಸಪ್ಪ ವೃತ್ತದ ತ್ರಿಶೂಲ್ ಲಾಡ್ಜ್‌ನಲ್ಲಿ ಉಳಿದುಕೊಂಡಿದ್ದಾರೆ. ಬುಧವಾರ ಪರೀಕ್ಷೆ ಮುಗಿದ ಬಳಿಕ ಸಹಪಾಠಿ ಪ್ರೇಮ ವಿಚಾರವಾಗಿ ಮೃತ ರೋಣಕ್ ಚೌಧರಿ, ರಾಯಲ್ ಹಾಗೂ ಅಪೂರ್ವ ಚೌಧರಿ ಪರಸ್ಪರ ಜಗಳವಾಡುತ್ತಿದ್ದು, ಈ ಸಂದರ್ಭದಲ್ಲಿ ಈ ಘಟನೆ ನಡೆದಿದೆ.