ಕಳೆದ ವರ್ಷ ಅಕ್ಟೋಬರ್‌ನಿಂದ ಕೇಂದ್ರ ಸರ್ಕಾರ ನೈಸರ್ಗಿಕ ಅನಿಲ ದರದಲ್ಲಿ ಹಲವು ಬಾರಿ ಏರಿಕೆ ಮಾಡಿರುವ ಹಿನ್ನೆಲೆ ತುಮಕೂರಿನಲ್ಲೂ ನೈಸರ್ಗಿಕ ಅನಿಲ ದರವನ್ನು ಹೆಚ್ಚಿಸಿ ಪ್ರತಿ ಯೂನಿಟ್‌ಗೆ .53 ನಿಗದಿ ಮಾಡಲಾಗಿದೆ ಎಂದು ಮೆಘಾ ಗ್ಯಾಸ್‌ ತಿಳಿಸಿದೆ.

 ಬೆಂಗಳೂರು (ಡಿ. 11 ): ಕಳೆದ ವರ್ಷ ಅಕ್ಟೋಬರ್‌ನಿಂದ ಕೇಂದ್ರ ಸರ್ಕಾರ ನೈಸರ್ಗಿಕ ಅನಿಲ ದರದಲ್ಲಿ ಹಲವು ಬಾರಿ ಏರಿಕೆ ಮಾಡಿರುವ ಹಿನ್ನೆಲೆ ತುಮಕೂರಿನಲ್ಲೂ ನೈಸರ್ಗಿಕ ಅನಿಲ ದರವನ್ನು ಹೆಚ್ಚಿಸಿ ಪ್ರತಿ ಯೂನಿಟ್‌ಗೆ .53 ನಿಗದಿ ಮಾಡಲಾಗಿದೆ ಎಂದು ಮೆಘಾ ಗ್ಯಾಸ್‌ ತಿಳಿಸಿದೆ.

ಈ ಕುರಿತು ಮಾಹಿತಿ ನೀಡಿರುವ ಮೆಘಾ ಗ್ಯಾಸ್‌, ದರ ಏರಿಕೆಗೂ ಮುನ್ನ ಗ್ರಾಹಕರ ಮೊಬೈಲ್‌ಗೆ ಎಸ್‌ಎಂಎಸ್‌ ಮೂಲಕ ತಿಳಿಸಲಾಗಿದೆ. 2022ರಲ್ಲಿ ನೈಸರ್ಗಿಕ ಅನಿಲ ಬೆಲೆಯಲ್ಲಿ ಶೇ.375ರಷ್ಟುಏರಿಕೆ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಮೆಘಾ ಗ್ಯಾಸ್‌ ತುಮಕೂರಿನಲ್ಲೂ ಜನವರಿ 1ರಿಂದ ನೈಸರ್ಗಿಕ ಅನಿಲ ದರಗಳಲ್ಲಿ ಏರಿಕೆ ಮಾಡಿದೆ. ಸದ್ಯ ಯೂನಿಟ್‌ .53 ದರವಿದೆ. ಕಳೆದ ಎಂಟು ತಿಂಗಳಲ್ಲಿ ಇದೇ ಮೊದಲು ಈ ದರ ಏರಿಕೆಯಾಗಿದೆ.

ದೇಶದ ಇತರೆಡೆಗಳಲ್ಲಿ ನೈಸರ್ಗಿಕ ಅನಿಲ ದರ ಯೂನಿಟ್‌ ತುಮಕೂರಿನಲ್ಲಿ ಅತಿ ಕಡಿಮೆ ದರದಲ್ಲಿ ಲಭ್ಯವಿದೆ. ಪ್ರತಿ ಯೂನಿಟ್‌ಗೆ ದೆಹಲಿಯಲ್ಲಿ .53.59, ಮುಂಬೈನಲ್ಲಿ .54, ಹೈದರಾಬಾದ್‌ನಲ್ಲಿ .55, ಬೆಂಗಳೂರಿನಲ್ಲಿ .58, ಹುಬ್ಬಳ್ಳಿ-ಧಾರವಾಡದಲ್ಲಿ .64.5 ಹಾಗೂ ಮೈಸೂರಿನಲ್ಲಿ .60 ದರವಿದೆ.

ದೇಶದ ವಿವಿಧೆಡೆ ಮನೆ ಮನೆಗೆ ಸರಬರಾಜು ಮಾಡಲಾಗುತ್ತಿರುವ ನೈಸರ್ಗಿಕ ಅನಿಲ ದರಗಳಿಗೆ ಹೋಲಿಕೆ ಮಾಡಿದರೆ ನಮ್ಮ ಸಂಸ್ಥೆಯು ತುಮಕೂರಿನಲ್ಲಿ ಅತಿ ಕಡಿಮೆ ಬೆಲೆಗೆ ನೈಸರ್ಗಿಕ ಅನಿಲ ಸರಬರಾಜು ಮಾಡುತ್ತಿದೆ ಎಂದು ಸಂಸ್ಥೆಯ ಮಾರುಕಟ್ಟೆವಿಭಾಗದ ಉಪಾಧ್ಯಕ್ಷ ನಿತೀಶ್‌ ಅಗರ್ವಾಲ್‌ ತಿಳಿಸಿದ್ದಾರೆ.

ಗ್ಯಾಸ್ ಏಜೆನ್ಸಿ ಪ್ರಭಾವಕ್ಕೆ ಮಣಿಯಿತೇ ಪೊಲೀಸ್

ಯಾದಗಿರಿ(ಜ.07): ಜಿಲ್ಲೆಯ ಶಹಾಪುರ ತಾಲೂಕಿನ ದೋರನಹಳ್ಳಿಯ ಕೃಷ್ಣಾ ಮೇಲ್ದಂಡೆ ಯೋಜನೆ (ಯುಕೆಪಿ) ಕ್ಯಾಂಪಿನ ಮನೆಯೊಂದರಲ್ಲಿ, ಕಳೆದ ವರ್ಷ ಫೆ.25ರಂದು ಸಂಭವಿಸಿದ್ದ ಭೀಕರ ಅಡುಗೆ ಅನಿಲ ಸೋರಿಕೆಯಿಂದಾದ ಅಗ್ನಿ ಅನಿಲ ದುರಂತದಲ್ಲಿ, ಗ್ಯಾಸ್‌ ಏಜೆನ್ಸಿ ವಿರುದ್ಧ ದೂರು ದಾಖಲಾದರೂ, ನೊಂದವರಿಗೆ ನ್ಯಾಯ ಕೊಡಿಸಬೇಕಾದ ಖಾಕಿಪಡೆ ಪ್ರಭಾವಿಗಳ ಒತ್ತಡಕ್ಕೆ ಮಣಿದು ದೂರು ನೀಡಿದ ಸಂತ್ರಸ್ತರನ್ನೇ ದೋಷರನ್ನಾಗಿಸಿ, ಏಜೆನ್ಸಿಗೆ ಕ್ಲೀನ್‌ ಚಿಟ್‌ ನೀಡಿದೆ ಎಂಬ ಆರೋಪಗಳು ಇಲ್ಲೀಗ ಕೇಳಿಬರುತ್ತಿವೆ.

ಇಂಡಿಯನ್‌ ಕಂಪನಿಯ, ಶಹಾಪುರದ ವಿಜಯ ಗ್ಯಾಸ್‌ ಏಜೆನ್ಸಿಯಿಂದ ಈ ಸಿಲಿಂಡರ್‌ ಗ್ರಾಹಕರಿಗೆ ನೀಡಿತ್ತಾದರೂ, ಇದರ ಮಾಲೀಕತ್ವದಲ್ಲಿರುವ ಪ್ರಭಾವಿಗಳ ‘ಕೈ’ವಾಡದಿಂದಾಗಿ ಗ್ಯಾಸ್‌ ಏಜೆನ್ಸಿಯ ಪರ ಅಧಿಕಾರಿಗಳು ವರದಿ ಬರೆದು, ದುರಂತದ ಕುರಿತ ದೂರು ನೀಡಿದ್ದ ಸಾಹೇಬಗೌಡ ಎಂಬಾತನ ಮೇಲೆಯೇ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಿ, ದೂರು ದಾಖಲಿಸಿರುವುದು ಅಚ್ಚರಿ ಮೂಡಿಸಿದೆ ಎಂಬುದಾಗಿ ನೊಂದ ದೋರನಹಳ್ಳಿ ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.
ಕಳಪೆ ಗುಣಮಟ್ಟದ ಸಿಲಿಂಡರ್‌ ನೀಡಿದ್ದರಿಂದ ಹೀಗಾಗಿದೆ, ಇದು ಎಲ್ಲರಿಗೂ ಗೊತ್ತಿದ್ದ ವಿಚಾರ. ಆದರೆ, ಈ ದುರಂತದಲ್ಲಿ ಸತ್ತವರಿಗೆ ಕಂಪನಿ ಮತ್ತೆಲ್ಲಿ ಕೋಟ್ಯಂತರ ರುಪಾಯಿಗಳ ಪರಿಹಾರ ನೀಡಬೇಕಾದೀತೋ ಎಂಬ ಕಾರಣಕ್ಕೆ ಇಡೀ ಪ್ರಕರಣವನ್ನೇ ಬದಲಿಸಲು ಹೊರಟಂತಿದೆ ಎಂದು ರಾಜ್ಯ ರೈತ ಸಂಘ ಹಾಗೂ ರೈತ ಸೇನೆ ರಾಜ್ಯ ಉಪಾಧ್ಯಕ್ಷ ಲಕ್ಷ್ಮೇಕಾಂತ ಎ. ಪಾಟೀಲ್‌ ಶಂಕೆ ವ್ಯಕ್ತಪಡಿಸಿದರು.

ನ್ಯಾ. ಸದಾಶಿವ ಆಯೋಗ ವರದಿ ಗೌಪ್ಯ ಜಾರಿ ಆರೋಪ, ಸಿಡಿದೆದ್ದ ಬಂಜಾರ ಸಮುದಾಯ

ಈ ದುರಂತದಲ್ಲಿ ನೊಂದವರಿಗೆ ನ್ಯಾಯ ಕೊಡಿಸಬೇಕಾದ ಪೊಲೀಸರು ಹಾಗೂ ಅಧಿಕಾರಿಗಳು ಕಂಪನಿಯ ಪರವಾಗಿ ವಶೀಲಿ ನಡೆಸುತ್ತಿದ್ದು, ವರದಿಯನ್ನು ತಿರುಚಲು ಹೊರಟಿದ್ದಾರೆ. ದುರಂತದಲ್ಲಿ ತಾಯಿ ಹಾಗೂ ಅಳಿಯನನ್ನು ಕಳೆದುಕೊಂಡ ದೂರುದಾರ ಸಾಹೇಬಗೌಡ ವಿರುದ್ಧವೇ ಇಲ್ಲಿ ಆರೋಪಿ ಎಂದು ದೂರು ದಾಖಲಿಸಿ, ಪ್ರಕರಣಕ್ಕೆ ತೇಪೆ ಸಾರಿಸಲು ಹೊರಟಂತಿದೆ. ಈ ಪ್ರಕರಣದ ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು ಎಂದು ಶುಕ್ರವಾರ ಮಧ್ಯಾಹ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ ಲಕ್ಷ್ಮೇಕಾಂತ ಪಾಟೀಲ್‌ ತಿಳಿಸಿದರು.

ಕಾಂಗ್ರೆಸ್‌ ಮುಖಂಡರೊಬ್ಬರಿಗೆ ಸೇರಿದ ಈ ಗ್ಯಾಸ್‌ ಏಜೆನ್ಸಿ ವಿರುದ್ಧ ಕಳಪೆ ಮಟ್ಟದ ಸಿಲಿಂಡರ್‌ ಸರಬರಾಜು ಮಾಡಿದ ಆರೋಪವಿದೆ. ಘಟನೆಯ ನಂತರ ಈ ಬಗ್ಗೆ ಎಲ್ಲ ವರದಿಗಳಿವೆ. ಸ್ಥಳ ಪರಿಶೀಲನೆ ಹಾಗೂ ಸಿಎಂ ಭೇಟಿ ವೇಳೆ ಎಲ್ಲವನ್ನೂ ಈ ಬಗ್ಗೆ ಅವರೇ ವಿವರಿಸಿದ್ದಾರೆ. ಹೀಗಿರುವಾಗ, ಈಗ ಏಜೆನ್ಸಿ ಪರ ಮೃದು ಧೋರಣೆ ಅನುಮಾನಕ್ಕೆ ಕಾರಣವಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದ ದೋರನಹಳ್ಳಿ ಗ್ರಾಮದ ಷಣ್ಮುಖಪ್ಪ ದೂರಿದರು.

ಈ ಪ್ರಕರಣ ನ್ಯಾಯಾಂಗ ತನಿಖೆ ಒಪ್ಪಿಸಬೇಕು, ಮೃತ ಕುಟುಂಬಗಳಿಗೆ ಕಂಪನಿಯಿಂದ ಪರಿಹಾರ ನೀಡಿಸಬೇಕು ಸೇರಿದಂತೆ ಇನ್ನಿತರ ಕೋರಿಕೆಗಳ ಈಡೇರಿಸಲು ಆಗ್ರಹಿಸಿ ಜ.10ರಂದು ಜಿಲ್ಲಾಡಳಿತ ಕಚೇರಿಯೆದುರು ಪ್ರತಿಭಟನೆಗೆ ಗ್ರಾಮಸ್ಥರು ನಿರ್ಧರಿಸಿದ್ದಾರೆ ಎಂದು ಹೇಳಿದರ ಲಕ್ಷ್ಮೇಕಾಂತ ಪಾಟೀಲ್‌, ಸಾವು-ನೋವಿನ ಆಘಾತ ಅನುಭವಿಸಿದ ಕುಟುಂಬಸ್ಥರಿಗೆ ಚಾಜ್‌ರ್‍ಶೀಟ್‌ ವರದಿ ಮತ್ತಷ್ಟೂಆಘಾತ ಮೂಡಿಸಿದೆ ಎಂದರು.