ಶಹಾಪುರ(ಆ.03): ತಾಲೂಕಿನ ಚಾಮನಾಳ ಗ್ರಾಮದ ನಾಗಮ್ಮ ಎನ್ನುವವರ ಮನೆಯಲ್ಲಿ ಆಕಸ್ಮಿಕವಾಗಿ ಅಡುಗೆ ಅನಿಲ ಭಾನುವಾರ ಸ್ಫೋಟಗೊಂಡು, ನಾಗಮ್ಮ ಅವರ ತಾಯಿ ಭೀಮವ್ವ ತೀವ್ರವಾಗಿ ಗಾಯಗೊಂಡಿದ್ದು ಶಹಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. 

ಸ್ಫೋಟದ ಸದ್ದಿಗೆ ಅಕ್ಕಪಕ್ಕದ ಮನೆಯ ಜನರು ದಿಕ್ಕಾಪಾಲಾಗಿ ಓಡಿದ್ದಾರೆ. ಕೆಲವರು ಬೆಂಕಿ ನಂದಿಸಿ, ಹೆಚ್ಚಿನ ಅನಾಹುತ ಆಗುವುದನ್ನು ತಪ್ಪಿಸಿದ್ದಾರೆ. ನಂತರ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು. 

ಮದ್ಯ ಸಿಕ್ಕಿಲ್ಲವೆಂದು ಸೋಂಕಿತ ಮಹಿಳೆ ಆಸ್ಪತ್ರೆಯಿಂದ ಎಸ್ಕೇಪ್..!

ಅವಘಡದಲ್ಲಿ ನಾಗಮ್ಮ ಅವರಿಗೆ ಸೇರಿದ ಆಹಾರಧಾನ್ಯ, ಚಿನ್ನಾಭರಣ ಹಾಗೂ 25,000 ರು.ಗಳ ನಗದು ಸೇರಿದಂತೆ ಅಂದಾಜು 2 ಲಕ್ಷ ರು.ಗಳ ಮೌಲ್ಯದ ವಸ್ತುಗಳು ಬೆಂಕಿಗಾಹುತಿಯಾಗಿದೆ. ಹೊಲದ ಕಾಗದ ಪತ್ರಗಳೂ ಭಸ್ಮವಾಗಿವೆ.