ಹುಬ್ಬಳ್ಳಿ (ಫೆ.02): ಮಹಾನಗರ ಪಾಲಿಕೆಯ ಮನೆ ಮನೆ ಕಸ ಸಂಗ್ರಹಿಸುವ 9 ವಾಹನಗಳ ಬ್ಯಾಟರಿಯನ್ನು ಕಿಡಿಗೇಡಿಗಳು ಕದ್ದೊಯ್ದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

 ಪರಿಣಾಮ ಹಲವು ಪ್ರದೇಶಗಳ ಮನೆ ಮನೆ ಕಸ ಸಂಗ್ರಹಿಸಲು ವಾಹನಗಳು ತೆರಳಲು ಸಾಧ್ಯವಾಗದೇ ಶೆಡ್‌ನಲ್ಲಿಯೇ ಉಳಿಯುವಂತಾಗಿದೆ. ಭಾನುವಾರ ಕಸ ಸಂಗ್ರಹಣೆ ಬಳಿಕ ಎಂದಿನಂತೆ ಇಂದಿರಾ ನಗರ ನ್ಯೂ ಇಂಗ್ಲಿಷ್‌ ಸ್ಕೂಲ್‌ ಬಳಿಯ ವಲಯ ಕಚೇರಿ -11ರ ಕಂಪ್ಯಾಕ್ಟರ್‌ ಸ್ಟೇಷನ್‌ನಲ್ಲಿ ವಾಹನಗಳನ್ನು ನಿಲ್ಲಿಸಲಾಗಿತ್ತು.

ಬೆಂಗಳೂರಿನ ಪಿಜಿ ಮಾಲೀಕರು, ಪಿಜಿಯಲ್ಲಿ ಇರುವವರು ನೋಡಲೇಬೇಕು! ... 

ಸೋಮವಾರ ಬೆಳಗ್ಗೆ ಚಾಲಕರು ದೈನಂದಿನ ಕರ್ತವ್ಯಕ್ಕೆ ಹಾಜರಾದಾಗ ಗಾಡಿಗಳು ಸ್ಟಾರ್ಟ್‌ ಆಗಿಲ್ಲ. ಪರಿಶೀಲಿಸಿದಾಗ ಬ್ಯಾಟರಿ ಕಳುವಾಗಿರುವುದು ಕಂಡುಬಂದಿದೆ. ಕಸಬಾಪೇಟ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.