ಹುಬ್ಬಳ್ಳಿ: ಕೊರೋನಾ ರೋಗಿಗೆ ಗ್ಯಾಂಗ್ರಿನ್‌, ಯಶಸ್ವಿ ಶಸ್ತ್ರಚಿಕಿತ್ಸೆ

ಕೊರೋನಾ ಕಾರಣದಿಂದ 69 ವರ್ಷದ ವೃದ್ಧ ದಾವಣಗೆರೆ ಆಸ್ಪತ್ರೆಯಲ್ಲಿ ದಾಖಲಾಗಿದ್ದರು| ನಾಲ್ಕು ದಿನದ ಹಿಂದೆ ಕಾಲುನೋವು ಹೆಚ್ಚಾಗಿ ಕಪ್ಪು ಬಣ್ಣಕ್ಕೆ ತಿರುಗಿತ್ತು| ಹೀಗಾಗಿ ಕಿಮ್ಸ್‌ಗೆ ಕರೆತಂದು ದಾಖಲಿಸಲಾಗಿತ್ತು. ಇಲ್ಲಿ ತಪಾಸಣೆ ಮಾಡಿದಾಗ ಗ್ಯಾಂಗ್ರಿನ್‌ ಆಗಿರುವುದು ಪತ್ತೆಯಾಗಿತ್ತು|ಇಲ್ಲಿನ ವೈದ್ಯರಿಂದ ಅಗತ್ಯ ಶಸ್ತ್ರಚಿಕಿತ್ಸೆ| 

Gangrene surgery Successful to Coronavirus Patient in KIMS in Hubballi

ಹುಬ್ಬಳ್ಳಿ(ಜೂ.01): ಕೊರೋನಾ ತಗುಲಿ ದಾವಣಗೆರೆ ಆಸ್ಪತ್ರೆಗೆ ದಾಖಲಾಗಿ ಬಳಿಕ ಗ್ಯಾಂಗ್ರಿನ್‌ ಕಾಣಿಸಿಕೊಂಡಿದ್ದ ರೋಗಿಯೊಬ್ಬರಿಗೆ ಇಲ್ಲಿನ ಕಿಮ್ಸ್‌ನಲ್ಲಿ ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆ ನಡೆಸಲಾಗಿದೆ.

ಕೊರೋನಾ ಕಾರಣದಿಂದ 69 ವರ್ಷದ ವೃದ್ಧರೊಬ್ಬರು ದಾವಣಗೆರೆ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ನಾಲ್ಕು ದಿನದ ಹಿಂದೆ ಕಾಲುನೋವು ಹೆಚ್ಚಾಗಿ ಕಪ್ಪು ಬಣ್ಣಕ್ಕೆ ತಿರುಗಿತ್ತು. ಹೀಗಾಗಿ ಕಳೆದ ಗುರುವಾರ ಕಿಮ್ಸ್‌ಗೆ ಕರೆತಂದು ದಾಖಲಿಸಲಾಗಿತ್ತು. ಇಲ್ಲಿ ತಪಾಸಣೆ ಮಾಡಿದಾಗ ಗ್ಯಾಂಗ್ರಿನ್‌ ಆಗಿರುವುದು ಪತ್ತೆಯಾಗಿತ್ತು. ಹೀಗಾಗಿ ಇಲ್ಲಿನ ವೈದ್ಯರು ಅಗತ್ಯ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. 

ಕಳ್ಳದಾರಿ ತಡೆಯಲು ಗಡಿಯಲ್ಲಿ ಚೆಕ್‌ಪೋಸ್ಟ್‌: ಸಚಿವ ಬಸವರಾಜ ಬೊಮ್ಮಾಯಿ

ಸಧ್ಯ ರೋಗಿ ಗುಣಮುಖರಾಗಿದ್ದಾರೆ ಎಂದು ಕಿಮ್ಸ್‌ ತಿಳಿಸಿದೆ. ಡಾ. ಎಸ್‌.ವೈ. ಮುಲ್ಕಿಪಾಟೀಲ್‌, ಡಾ. ಸಂಜಯ ಜಿ., ಡಾ. ರಾಕೇಶ ಪಾಟೀಲ್‌, ಹಾಗೂ ಡಾ. ಅಭಿಚಂದ್ರನ್‌ ಶಸ್ತ್ರಚಿಕಿತ್ಸೆ ನಡೆಸಿದ್ದರು.
 

Latest Videos
Follow Us:
Download App:
  • android
  • ios