Asianet Suvarna News Asianet Suvarna News

ಗಂಗಾವತಿ ಪ್ರಾಣೇಶ್ ಕಾಮಿಡಿಗೆ ಬಿದ್ದು ಬಿದ್ದು ನಕ್ಕ ಪ್ರೇಕ್ಷಕರು!

ದಸರಾ ಮಹೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪ್ರೇಕ್ಷಕರು ನಗೆಗಡಲಲ್ಲಿ ತೇಲಾಡಿದರು| ಪ್ರಾಣೇಶ್‌ ಮತ್ತು ತಂಡದವರಿಂದ ನಡೆದ ನಗೆಹಬ್ಬ ಕಾರ್ಯಕ್ರಮದಲ್ಲಿ ಹಾಸ್ಯಭರಿತ ಮಾತುಗಳಿಂದ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿದರು| ಡಾ. ಕಾ. ರಾಮೇಶ್ವರಪ್ಪ ಮತ್ತು ತಂಡದವರು ಜಾನಪದ ಹಾಡು ಮತ್ತು ನೃತ್ಯ ಪ್ರದರ್ಶನ| 

Gangavati Pranesh and His Team Held Comedy Programme at Chamarajnagar
Author
Bengaluru, First Published Oct 3, 2019, 3:44 PM IST

ಚಾಮರಾಜನಗರ(ಅ.3): ವಿಶ್ವವಿಖ್ಯಾತ ಮೈಸೂರು ದಸರಾ ಪ್ರಯುಕ್ತ ಜಿಲ್ಲಾ ಕೇಂದ್ರದಲ್ಲಿ ಹಮ್ಮಿಕೊಂಡಿರುವ ದಸರಾ ಮಹೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪ್ರೇಕ್ಷಕರು ನಗೆಗಡಲಲ್ಲಿ ತೇಲಾಡಿದರು.

ನಗರದ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ವೇದಿಕೆಯಲ್ಲಿ ಸಂಜೆ 6.30ರಿಂದ 7.30ರ ವರಗೆ ಪ್ರಾಣೇಶ್‌ ಮತ್ತು ತಂಡದವರಿಂದ ನಡೆದ ನಗೆಹಬ್ಬ ಕಾರ್ಯಕ್ರಮದಲ್ಲಿ ಹಾಸ್ಯಭರಿತ ಮಾತುಗಳಿಂದ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿದರು.

ಗಂಗಾವತಿ ಪ್ರಾಣೇಶ್‌ ಅವರು ವೇದಿಕೆಗೆ ಆಗಮಿಸಿ ಮೊಬೈಲ್‌ ಕುರಿತು ಹಾಸ್ಯ ನಡೆಸಿ ಪೊಲೀಸರು ನನ್ನನು ಸೆಲ್ಪಿ ತೆಗೆದುಕೊಳ್ಳುವ ಡಕಾಯಿತರಿಂದ ರಕ್ಷಿಸಿ ವೇದಿಕೆಗೆ ಕರೆತಂದರು ಎಂದು ಪ್ರೇಕ್ಷಕರಿಗೆ ಮುಖದಲ್ಲಿ ನಗೆ ತರಿಸಿ ಮತ್ತೆ ಬರುತ್ತೇನೆ ಎಂದು ವೇದಿಕೆಯ ಬದಿಗೆ ಸರಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ  

ಪ್ರಾಣೇಶ್‌ ತಂಡದ ನರಸಿಂಹ ಜೋಷಿ ವೇದಿಕೆಗೆ ಆಗಮಿಸಿ ಇದ್ದ ಮನಸ್ಸು ಇದ್ದಂಗೆ ಕಾಣುವುದು ಇಂಥ ವೇದಿಕೆಯಲ್ಲಿ ಎಂದು ಮಾತು ಪ್ರಾರಂಭಿಸಿ ಶಾಲೆಯಲ್ಲಿ ಮುಖ್ಯಶಿಕ್ಷಕನ ಮುಂದೆ ಪ್ರತಿಭೆ ತೋರಿಸಿದವರಿಗೆ ರಜೆ ನೀಡುವ ಮುಖ್ಯ ಶಿಕ್ಷಕನ ಮುಂದೆ ಮಕ್ಕಳು ಉತ್ತರ ಕೊಡಲಾಗದೇ ನಡೆದ ಸಂದರ್ಭವನ್ನು ಹಾಸ್ಯಭರಿತವಾಗಿ ರಚಿಸಿ ನಗೆಯೊಂದಿಗೆ ಸಿಳ್ಳೆ ಚಪ್ಪಳೆಗಳು ಪ್ರೇಕ್ಷಕರಿಂದ ಗಿಟ್ಟಿಸಿಕೊಂಡರು.

ನಂತರ ಬಂದ ಬಸವರಾಜ್‌ ಮಹಾಮನಿಯೊಂದಿಗೆ ನರಸಿಂಹ ಜೋಷಿ ಒಬ್ಬರ ಕಾಲು ಒಬ್ಬರು ಎಳೆಯುತ್ತಾ ಪ್ರೇಕ್ಷಕರನ್ನು ನಗೆಗಡಲಿಗೆ ಜಾರಿಸಿದರು. ಗಂಗಾವತಿ ಪ್ರಾಣೇಶ್‌ ವೇದಿಕೆಗೆ ಬರುತ್ತಿದ್ದಂತೆ ಸಿಳ್ಳೆ, ಚಪ್ಪಾಳೆಗಳು ಮಾತಿಗೆ ಮುಂಚೆ ಬೇಡ ಎಂದು ಹೇಳಿ ಪ್ರೇಕ್ಷಕರು ನಾನು ಆಡುವ ಮಾತಿನಲ್ಲಿರುವ ಸಂದೇಶವನ್ನು ಅರಿತುಕೊಳ್ಳಿ ಎಂದು ಹೇಳಿ ಪ್ರೇಕ್ಷಕರನ್ನು ಮೊದಲಿಗೆ ಮನವರಿಕೆ ಮಾಡಿ ಹಾಸ್ಯದೊಂದಿಗೆ ಸಂದೇಶವನ್ನು ಜನರಿಗೆ ಹೇಳಿ ಮಾತಿನ ಮೋಡಿಯಲ್ಲಿ ನಗಿಸಿದರು.
ಮಾತೃಭಾಷೆಯಲ್ಲೇ ಶಿಕ್ಷಣ ಪಡೆಯಬೇಕು, ಮಾತೃಭಾಷೆಯಲ್ಲಿ ಶಿಕ್ಷಣ ಪಡೆದರೆ ಹೊಸ ಹೊಸ ಪದಗಳನ್ನು ಕಲಿಯಬಹುದು. ಪದಗಳನ್ನು ಎಲ್ಲಿ ಹೇಗೆ ಬಳಸಬೇಕು ಎಂಬುದನ್ನು ಕಲಿಯಬಹುದು. ಅದು ಮನುಷ್ಯ ನಿಧನ ಹೊಂದಿದರೆ ಎಷ್ಟುರೀತಿ ಹೇಳಬಹುದು ಎಂಬುದನ್ನು ಹೇಳುತ್ತಾ ಸಂದೇಶವನ್ನು ಹಾಸ್ಯದ ಮೂಲಕ ಹೇಳಿ ಪ್ರೇಕ್ಷಕರಲ್ಲಿ ನಗೆ ಚಲ್ಲಿದರು.

ವಿದ್ಯಾರ್ಥಿಗಳ ನೃತ್ಯ ಪ್ರದರ್ಶನ ಮೊಟಕು

ವಿಶ್ವವಿಖ್ಯಾತ ಮೈಸೂರು ದಸರಾ ಪ್ರಯುಕ್ತ ಚಾಮರಾಜನಗರದಲ್ಲಿ ಆಯೋಜಿಸಿರುವ ಚಾಮರಾಜನಗರ ದಸರಾ ಕಾರ್ಯಕ್ರಮದಲ್ಲಿ ಮೊದಲ ದಿನ ಚಂದನ್‌ ಶೆಟ್ಟಿಗಾಯನ ಕಾರ್ಯಕ್ರಮಕ್ಕಾಗಿ ಉದ್ಘಾಟನಾ ಭಾಷಣ ಮೊಟಕುಗೊಳಿಸಲಾಗಿತ್ತು.

ಎರಡನೇಯ ದಿನ ಪ್ರಾಣೇಶ್‌ ಕಾರ್ಯಕ್ರಮಕ್ಕಾಗಿ ವಿವಿಧ ಕಾಲೇಜುಗಳ ಕಾರ್ಯಕ್ರಮ ಮೊಟಕು ಮಾಡಲಾಯಿತು. ವಿವಿಧ ಕಾಲೇಜು ವಿದ್ಯಾರ್ಥಿಗಳ ನೃತ್ಯ ಕಾರ್ಯಕ್ರಮದ ಸಮಯದಲ್ಲಿ $ಸ್ಥಳೀಯ ಕಲಾವಿದರ ಸಾಂಸ್ಕೃತಿಕ ಕಾರ್ಯಕ್ರಮ ನಡೆದಿದ್ದರಿಂದ ಕಾಲೇಜು ವಿದ್ಯಾರ್ಥಿಗಳಿಗೆ ಸಮಯವನ್ನು ಮುಂದೂಡಿದ್ದರಿಂದ ತಡವಾಗಿ ವಿವಿಧ ಕಾಲೇಜುಗಳ ನೃತ್ಯ ಆರಂಭವಾಗಿತ್ತು. ಆದರೆ ಸರಿಯಾದ ಸಮಯಕ್ಕೆ ಪ್ರಾಣೇಶ್‌ ತಂಡಕ್ಕೆ ಅವಕಾಶ ಮಾಡಿಕೊಡಬೇಕಿದ್ದರಿಂದ ಕಾಲೇಜು ವಿದ್ಯಾರ್ಥಿಗಳ ನೃತ್ಯ ಕಾರ್ಯಕ್ರಮವನ್ನು ಮೊಟಕುಗೊಳಿಸಲಾಯಿತು.

ಪ್ರಖ್ಯಾತರಿಗೆ ಅವಕಾಶ ನೀಡಲು ಇತರೆ ಕಾರ್ಯಕ್ರಮಗಳನ್ನು ಮೊಟಕು ಮಾಡುತ್ತಿರುವುದು ನಡೆಯುತ್ತಿದ್ದು, ಸಮಯದಲ್ಲಿ ಅವಕಾಶ ಇರುವವರಿಗೆ ಅವಕಾಶ ಕಲ್ಪಿಸುವಂತಾಗಬೇಕು ಎಂಬುದು ಪ್ರೇಕ್ಷಕರ ಆಗ್ರಹವಾಗಿದೆ.
ಚಾಮರಾಜನಗರದ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಏರ್ಪಡಿಸಲಾಗಿದ್ದ ದಸರಾ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಡಾ. ಕಾ. ರಾಮೇಶ್ವರಪ್ಪ ಮತ್ತು ತಂಡದವರು ಜಾನಪದ ಹಾಡು ಮತ್ತು ನೃತ್ಯ ಪ್ರದರ್ಶನ ಮಾಡಿದರು.
 

Follow Us:
Download App:
  • android
  • ios