ಕೊಪ್ಪಳ: ಅಂಜನಾದ್ರಿ ಬೆಟ್ಟದಲ್ಲಿ ವ್ಯಾಪಾರಸ್ಥ ಮಹಿಳೆಯರ ಮೇಲೆ ಪೊಲೀಸರ ದರ್ಪ

ಅಂಜನಾದ್ರಿ ಬೆಟ್ಟದಲ್ಲಿ ವ್ಯಾಪಾರ ಮಾಡುವ ಮಹಿಳೆಯರಿಗೆ ಪೊಲೀಸರಿಂದ ಹಿಂಸೆ| ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಿರುವ ಅಂಜನಾದ್ರಿ ಬೆಟ್ಟ| ಮಹಿಳೆಯರಿಗೆ ಏಕವಚನದಲ್ಲಿ ನಿಂದಿಸುವ ಪಿ.ಎಸ್.ಐ ದೊಡ್ಡಪ್ಪ|ಗಂಗಾವತಿ ಪೊಲೀಸರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ವ್ಯಾಪಾರ ಮಾಡುವ ಮಹಿಳೆಯರು|

Gangavati Police Swank on Business Women in Anjanadri Hill in Koppal District

ಕೊಪ್ಪಳ(ಡಿ.13): ಪೊಲೀಸರ ಟಾರ್ಚರ್‌ನಿಂದ ಗೂಡಂಗಡಿಯವರ ಬದಕು ಅಕ್ಷರಶಹಃ ಬೀದಿಗೆ ಬಿದ್ದ ಘಟನೆ ಜಿಲ್ಲೆಯ ಗಂಗಾವತಿ ತಾಲೂಕಿನ ಅಂಜನಾದ್ರಿ ಬೆಟ್ಟದಲ್ಲಿ ನಡೆದಿದೆ. ಪಾರ್ಕಿಂಗ್ ನೆಪ ಹೇಳಿ ಗಂಗಾವತಿ ಪೊಲೀಸರು ನಮ್ಮ ಅಂಗಡಿಗಳನ್ನು ತೆರವು ಮಾಡಿಸಿದ್ದಾರೆ ಎಂದು ವ್ಯಾಪಾರಸ್ಥರು ಆರೋಪಿಸಿದ್ದಾರೆ. 

ಅಂಜನಾದ್ರಿ ಬೆಟ್ಟದಲ್ಲಿ ಕಳೆದ 10 ವರ್ಷಗಳಿಂದ ಮಹಿಳೆಯರು ಪೂಜಾ ಸಾಮಗ್ರಿ ಮತ್ತು ಕಾಯಿಗಳು ಮಾರಾಟ‌ ಮಾಡುತ್ತಾ ಬಂದಿದ್ದಾರೆ. ಇದೀಗ ಪೊಲೀಸರು ಏಕಾಏಕಿ ಬಂದು ನಮ್ಮ ಅಂಗಡಿಗಳನ್ನು ಕಿತ್ತು ಹಾಕಿದ್ದಾರೆ. ಇದರಿಂದ ನಮ್ಮ ಬದುಕು ಬೀದಿಗೆ ಬಂದಿದೆ ಎಂದು ಮಹಿಳೆಯರು ತಮ್ಮ ಅಳಲು ತೋಡಿಕೊಂಡಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ತಮಗಾದ ಅನ್ಯಾಯವನ್ನು ಹೇಳಿಕೊಳ್ಳಲು ಮಹಿಳೆಯರು ಗಂಗಾವತಿ ಪೊಲೀಸ್ ಠಾಣೆಗೆ ಬಂದರೆ ಅಲ್ಲೂ ಕೂಡ ಪೊಲೀಸರು ಅವಾಜ್ ಹಾಕಿದ್ದಾರೆ.  ಹೀಗಾಗಿ ಆರಕ್ಷಕರಿಂದ ತಮಗೆ ಸಿಗದಿದ್ದಾಗ ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಅವರ ಮನೆಗೆ ಭೇಟಿ ನೀಡಿದ ಮಹಿಳೆಯರು ತಮಗಾದ ಕಷ್ಟವನ್ನ ಹೇಳಿಕೊಂಡಿದ್ದಾರೆ. 

ಗಂಗಾವತಿ ಗ್ರಾಮಿಣ ಠಾಣೆಯ ಪಿ.ಎಸ್.ಐ ದೊಡ್ಡಪ್ಪ ಅವರು ಮಹಿಳೆಯರಿಗೆ ಏಕವಚನದಲ್ಲಿ ಬೈಯುತ್ತಾರೆ, ಕೇಸ್ ಮಾಡಿ‌ ನಿಮನ್ನ ಒಳಗೆ ಹಾಕುತ್ತೇನೆ ಎಂದು ಬೆದರಿಕೆ ಹಾಕುತ್ತಾರೆ ಎಂದು ಮಹಿಳೆಯರು ಆರೋಪಿಸಿದ್ದಾರೆ. ಇದೇ ವೇಳೆ ವ್ಯಾಪಾರ ಮಾಡುವ ಮಹಿಳೆಯರು ಗಂಗಾವತಿ ಪೊಲೀಸರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.  
 

Latest Videos
Follow Us:
Download App:
  • android
  • ios