ರಾಮಮೂರ್ತಿ ನವಲಿ

ಗಂಗಾವತಿ(ಮೇ.13): ಕಳೆದ ಒಂದು ವಾರದ ಹಿಂದೆ ಗಂಗಾವತಿಯಿಂದ ಬಳ್ಳಾರಿ ಜಿಲ್ಲೆಯ ಕಂಪ್ಲಿಗೆ ತೆರಳಿದ್ದ ಕಾರ್ಮಿಕರೊಬ್ಬರಿಗೆ  ಕೊರೋನಾ ಸೊಂಕು ಧೖಢವಾಗಿದ್ದು, ಈ ವ್ಯಕ್ತಿಯನ್ನು ಅಟೋದಲ್ಲಿ  ಕರೆದುಕೊಂಡು ಹೋಗಿದ್ದ ಅಟೋ ಚಾಲಕನ್ನು ಕ್ವಾರಂಟೈನಲ್ಲಿದ್ದರಿಂದ ಈಗ ನಗರದ ಜನತೆ ಭಯದ ಭೀತಿಯಲ್ಲಿದ್ದಾರೆ.  

ಮೇ.5 ರಂದು ಬೆಂಗಳೂರಿನಿಂದ ಗಂಗಾವತಿಗೆ ಆಗಮಿಸಿದ್ದ 29 ಕಾರ್ಮಿಕರು ಸೇರಿದಂತೆ  ಒಟ್ಟು 33 ಜನರನ್ನು ಸಹ ಕ್ವಾರಂಟೈನಲ್ಲಿದ್ದಾರೆ. ಇದರಲ್ಲಿ ಕಂಪ್ಲಿ ನಗರದ ಓರ್ವ ವ್ಯಕ್ತಿ ಗಂಗಾವತಿಯಿಂದ ಕಂಪ್ಲಿಗೆ ಅಟೋದಲ್ಲಿ ತೆರಳಿದ್ದರಿಂದ ಈಗ ಅಟೋ ಚಾಲಕನ ಬಗ್ಗೆ ಶಂಕೆ ವ್ಯಕ್ತ ಪಡಿಸುತ್ತಿದ್ದಾರೆ.

ಲಾಕ್‌ಡೌನ್‌ ಎಫೆಕ್ಟ್‌: ಹೊಲದಲ್ಲಿ ರಂಟೆ ಹೊಡೆದ ಶಾಸ​ಕ ಬಸವರಾಜ ದಡೇಸ್ಗೂರು..!

ಅಟೋ ಚಾಲಕನ ಪತ್ತೆಗೆ ಜಾಲಾಡಿದ ಪೊಲೀಸರು

ಗಂಗಾವತಿಯಿಂದ ಕಂಪ್ಲಿ ನಗರಕ್ಕೆ ಅಟೋದಲ್ಲಿ ಕಾರ್ಮಿಕನ ಬಗ್ಗೆ ಯಾವುದೇ ರೀತಿಯಲ್ಲಿ ಸೊಂಕಿನ ಬಗ್ಗೆ  ಶಂಕೆ ಇದ್ದಿಲ್ಲ. ಬೆಂಗಳೂರಿನಿಂದ ಗಂಗಾವತಿಗೆ ಆಗಮಿಸಿದ್ದ ಪ್ರಯಾಣಿಕರಲ್ಲಿ ಕುಷ್ಟಗಿ, ಕಾರಟಗಿ, ಕನಕಗಿರಿ ಸೇರಿದಂತೆ ಗಂಗಾವತಿಯ 29 ಕಾರ್ಮಿಕರು ಇದ್ದರು. ಇವರನ್ನು ಪ್ರಥಮ ಹಂತವಾಗಿ ವೈದ್ಯಕೀಯ ಪರಿಕ್ಷೆಗೆ ಒಳಪಡಿಸಲಾಗಿತ್ತು. ಆದರೆ ಆ ಸಂದರ್ಭದಲ್ಲಿ ಯಾವುದೇ ರೀತಿಯ ಸೋಕು ಕಂಡು ಬಂದಿಲ್ಲ. ಆದರೆ ಈ ಪ್ರಯಾಣಿಕರ ಬಸ್ಸಿನಲ್ಲಿ ಕಂಪ್ಲಿಯ ವ್ಯಕ್ತಿಯನ್ನು  ಕಂಪ್ಲಿ ನಗರದಲ್ಲಿ ಎರಡು ದಿನಗಳ ಮೇಲೆ ಪರಿಕ್ಷೆಗೆ ಒಳಪಡಿಸಿದ್ದ ಸಂದರ್ಭದಲ್ಲಿ ಸೊಂಕು ಕಂಡು ಬಂದಿದೆ. ಆದರೆ ಈ ವ್ಯಕ್ತಿಯನ್ನು ಕರೆದು ಕೊಂಡು ಹೇಗೆ ಬಂದರು, ಯಾರು ಕರೆದು  ಕೊಂಡು ಬಂದರು ಎಂಬ ಪ್ರಶ್ನೆ  ಹರಿದಾಡುತ್ತಿರುವಾಗಲೆ ಗಂಗಾವತಿಯ ಅಟೋ ಎನ್ನುವ ಮಾಹಿತಿಯನ್ನು  ಪೊಲೀಸರು ಪಡೆದಿದ್ದಾರೆ.

ಮಾಹಿತಿ ಪಡೆದು ಅಟೋ ಚಾಲಕನ ಹುಡಕಾಟ ಪ್ರಾರಂಭಿಸಿದಾಗ  ಗಂಗಾವತಿ ನಗರದ ಕಿಲ್ಲಾ ಏರಿಯಾದ ಮಹೆಬೂಬ್ ಅಟೋ( ನಂ ಕೆ.ಎ.25, 67190 ) ಗುರಿತಿಸಿ ಆನೆಗೊಂದಿ ರಸ್ತೆಯ ಮಾರ್ಗದಲ್ಲಿರುವ ಎಂಜನೀಯರಿಂಗ್ ಕಾಲೇಜಿನಲ್ಲಿ ಸ್ಥಾಪಿಸಿರುವ  ಕ್ವಾರಂಟಯನ್‌ನಲ್ಲಿರಿಸಲಾಗಿದೆ.

ತಪಾಸಣೆ ನಂತರ ನಂತರ ಮತ್ತೇ ಹುಡಕಾಟ 

ಈಗಾಗಲೇ  ಕಂಪ್ಲಿಯ  ಕೊರೋನಾ ಸೊಂಕಿತ ವ್ಯಕ್ತಿಯ ಜೊತೆಗೆ  ಇದ್ದ 33 ಜನರನ್ನು ಮೊದಲನೇ ಹಂತವಾಗಿ ತಪಾಸಣೆ ಮಾಡಲಾಗಿದ್ದು, ಎರಡನೇ ಹಂತದಲ್ಲಿ ಇವರ ಕಾರ್ಮಿಕದಲ್ಲಿದ್ದವರ  ಹುಡಕಾಟ ನಡೆಯಬೇಕಾಗಿದೆ.   ಅಟೋ ಚಾಲಕ ಕೊರೋನಾ ಸೊಂಕಿತನನ್ನು ಕಳೆದು ಕೊಂಡು ಬಂದು ಈಗಾಗಲೇ  ವಾರ ಕಳೆದಿವೆ. ಈ ಅಟೋ ಚಾಲಕ ಯಾವ ಪ್ರದೇಶಕ್ಕೆ, ಯಾರನ್ನು ಕರೆದು ಕೊಂಡು ಹೋಗಿರ ಬೇಕೆನ್ನುವದರ ಬಗ್ಗೆ  ಪತ್ತೆ ಹಚ್ಚ ಬೇಕಾಗಿದೆ.

ಮಾಸ್ಕ್ ಇಲ್ಲದವರೇ ಹೆಚ್ಚು

ಈ ಮೊದಲು ನಗರದ ಜನರು ಮಾಸ್ಕ್, ಸೈನೇಟರೇಷನ್ ಸೇರಿದಂತೆ  ಲಾಕ್ ಡೌನ್‌ ನಿಯಮ ಪಾಲಿಸುತ್ತಿದ್ದರು. ಈಗ  ಲಾಕ್ ಡೌನ್ ಸಡಿಲಗೊಳಿಸುತ್ತಿದ್ದಂತಯೇ ಶೇ.50 ರಷ್ಟು ಜನರು ಮಾಸ್ಕ್ ಧರಿಸದೆ ವಾಹನಗಳ ಮೇಲೆ ಸಂಚರಿಸುತ್ತಿದರುವದು ಸಾಮನ್ಯವಾಗಿದೆ, ಪ್ರಮುಖವಾಗಿ ಬ್ಯಾಂಕ್‌ಗಳು, ಬಟ್ಟೆ ಅಂಗಡಿಗಳು, ಗ್ಯಾರೇಜುಗಳು,  ಹಣ್ಣು ಹೂ ಮಾರಟಗಾರರಲ್ಲಿ ಬರುವವರು ಮಾಸ್ಕ್ ಧರಿಸದೇ ಹಾಗೇ ತಿರುಗಾಡುತ್ತಿದ್ದಾರೆ. ಪ್ರಮುಖವಾಗಿ ಅಟೋ ಚಾಲಕರು ಸಹ ಮಾಸ್ಕ್‌ ಗಳನ್ನು ಧರಿಸದೇ ಸಂಚರಿಸುತ್ತಿರುವದು ಸಾಮಾನ್ಯವಾಗಿದೆ.

ಅಲ್ಲದೇ ಹೊರ ಜಿಲ್ಲೆಗಳಿಂದಲು ಸಹ ಬೈಕ್‌ ಮತ್ತು ಕಾರುಗಳಲ್ಲಿ ಜನರು ಆಗಮಿಸುತ್ತಿದ್ದಾರೆ. ಏನೇ ಇದ್ದರು ಈಗ ಕೊರೋನಾ ಸೊಂಕಿತನ ಜೊತೆಯಲ್ಲಿ ಬಂದವರು ಕ್ವಾರಂಟೈನಲ್ಲಿರುವದರಿಂದ ಜನರಲ್ಲಿ ಭಯ ಬೀತಿ ಹುಟ್ಟಿಸಿದೆ.
 ಈಗಾಗಲೇ ಕಂಪ್ಲಿ ನಗರದ ಕೊರೋನಾ ಸೊಂಕಿತನ ಜೊತೆಗಿದ್ದ 33 ಜನರನ್ನು ಕ್ವಾರಂಟೈನಲ್ಲಿರಿಸಲಾಗಿದೆ. ಪ್ರಥಮ ಹಂತವಾಗಿ ತಪಾಸಣೆ ನಡೆದಿದ್ದು ಇವರ ಗಂಟಲು ದ್ರವವನ್ನು ಪರೀಕ್ಷೆಗೆ ಕಳಿಸಿಕೊಡಲಾಗುತ್ತದೆ. ಇದರ ಫಲಿತಾಂಶ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು  ತಾಲೂಕ ವೈದ್ಯಾಧಿಕಾರಿ ಡಾ.ಶರಣಪ್ಪ ಚೆಕೋಟಿ ಅವರು ಹೇಳಿದ್ದಾರೆ.

ಕಂಪ್ಲಿಯ ಕೊರೋನಾ ಸೊಂಕಿತನ ಸಂಪಕ೯ದಲ್ಲಿದ್ದ ಗಂಗಾವತಿ ಅಟೋ ಚಾಲಕನ್ನು ಕ್ವಾರಂಟೈನಲ್ಲಿ ಬಿಡಲಾಗಿದೆ. ಈತನ ತಪಾಸಣೆ ನಡೆದಿದ್ದು,  ಪರೀಕ್ಷೆಯ ಫಲಿತಾಂಶ  ಬಂದ ನಂತರ  ಅಟೋ ಚಾಲಕನ ಸಂಪಕ೯ದಲ್ಲಿದ್ದವರ ಬಗ್ಗೆ ಮಾಹಿತಿ ಪಡೆಯಲಾಗುತ್ತದೆ. ಈಗ ತಪಾಸಣೆ ನಡೆದಿದ್ದು,  ನಿಗಾವಹಿಸಲಾಗಿದೆ ಎಂದು  ಗಂಗಾವತಿ ಡಿವೈಎಸ್ಪಿಡಾ. ಬಿ.ಪಿ. ಚಂದ್ರಶೇಖರ ಅವರು ತಿಳಿಸಿದ್ದಾರೆ.