ಹಾಸನ(ಫೋ.25): ಫೋಟೋಗ್ರಾಫರ್‌ಗಳೇ ಫೋಟೋಶೂಟ್‌ ಬುಕ್ಕಿಂಗ್ ತಗೊಳೋ ಮುನ್ನ ಎಚ್ಚರ. ಸ್ವಲ್ಪ ಯಾಮಾರಿದ್ರೂ ನಿಮ್ಮ ಬೆಲೆ ಬಾಳೋ ಕ್ಯಾಮೆರಾಗಳನ್ನು ಕಳ್ಕೊಳ್ಬೇಕಾಗುತ್ತೆ.

ಪ್ರೀ ವೆಡ್ಡಿಂಗ್ ಶೂಟ್ ಹೆಸರಲ್ಲಿ ದರೋಡೆ ಪ್ರಕರಣ ನಡೆದಿದ್ದು,  ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಹೊಸಕೋಟೆ ಮೂಲದ ಮಲ್ಲಿಕಾರ್ಜುನ, ಆನಂದ್, ದಶರಥ, ಕೋಲಾರದ ಬಾಬು ಬಂಧಿತರು.

ಚಾಮರಾಜನಗರದಲ್ಲಿ ಮಹದೇಶ್ವರ ರಥೋತ್ಸವ

ಬಂಧಿತರ ಮೇಲೆ‌ ಹಿಂದೆ ಹಲವು ಕೇಸ್‌ಗಳಿವೆ. ಪ್ರಮುಖ ಆರೋಪಿ ಛಲಪತಿ ತಲೆಮರೆಸಿಕೊಂಡಿದ್ದಾನೆ. ದರೋಡೆ ಬಗ್ಗೆ ಪ್ರಮುಖ ಆರೋಪಿ ಛಲಪತಿ ಎಲ್ಲವನ್ನೂ ಪ್ಲಾನ್ ಮಾಡಿದ್ದ. ಪ್ಲಾನ್‌ ಪ್ರಕಾರವೇ ಫೆ.15 ರಂದು ಹಾಸನ ತಾಲೂಕು ಜವೇನಹಳ್ಳಿ ಸಮೀಪ ಘಟನೆ ನಡೆದಿತ್ತು. ಪ್ರಮುಖ ಆರೋಪಿ ಛಲಪತಿಗಾಗಿ ಪೋಲಿಸರು ಬಲೆ ಬೀಸಿದ್ದರು.

ಮೈಸೂರು ಸೇರಿ ಹಲವೆಡೆ ಜಸ್ಟ್ ಡಯಲ್ ಮೂಲಕ ಪ್ರೀ ವೆಡ್ಡಿಂಗ್ ಶೂಟ್ ಬುಕ್ ಮಾಡಿ ವಂಚಿಸುತ್ತಿದ್ದ ಗ್ಯಾಂಗ್ ದುಬಾರಿ ಕ್ಯಾಮೆರಾಗಳನ್ನು ದರೋಡೆ ಮಾಡುತ್ತಿದ್ದರು. ಆರೋಪಿಗಳಿಂದ ಒಂದು ಕ್ಯಾಮೆರಾ, 1 ಡ್ರೋನ್ ಹಾಗೂ ಮೊಬೈಲ್ ವಶಕ್ಕೆ ಪಡೆಯಲಾಗಿದೆ.

ನಾಮಪತ್ರ ಹಿಂಪಡೆದ BJP ಬೆಂಬಲಿಗರು: ಹಾಪ್‌ಕಾಮ್ಸ್‌ ಮತ್ತೆ ಕಾಂಗ್ರೆಸ್‌ ತೆಕ್ಕೆಗೆ

ದರೋಡೆಕೋರರು ಉಮೇಶ್ ಹಾಗೂ ವಿಕ್ಕಿ ಎಂಬುವವರ ಮೇಲೆ ಹಲ್ಲೆ ನಡೆಸಿದ್ದರು. ಗೊರೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಎಸ್ಪಿ ಆರ್.ಶ್ರೀನಿವಾಸ್ ಗೌಡ ಘಟನೆ ಬಗ್ಗೆ ಮಾಹಿತಿ ನೀಡಿದ್ದಾರೆ.