Asianet Suvarna News Asianet Suvarna News

ಚರಂಡಿ ನೀರನ್ನು ಕುಡಿಯುವ ನೀರಾಗಿಸುವ ಯಂತ್ರ ಬಂತು..!

ಕರ್ನಾಟಕದಲ್ಲಿ ಮೊದಲ ಬಾರಿಗೆ ಪ್ರದರ್ಶನ, ಬೊಮ್ಮನಹಳ್ಳಿಯಲ್ಲಿ ಪ್ರಾತ್ಯಕ್ಷಿಕೆ ನೀಡಿದ ಗಾಲ್‌ ಮೊಬೈಲ್‌ ಯಂತ್ರ

Gal Mobile Water Processing Machine Demonstration in Bengaluru grg
Author
Bengaluru, First Published Aug 10, 2022, 7:23 AM IST

ಬೆಂಗಳೂರು(ಆ.10):  ಚರಂಡಿ ನೀರನ್ನು ಕ್ಷಣಾರ್ಧದಲ್ಲಿ ಸಂಸ್ಕರಿಸಿ ಶುದ್ಧ ಕುಡಿಯುವ ನೀರು ನೀಡುವ ‘ಗಾಲ್‌ ಮೊಬೈಲ್‌’ ನೀರು ಸಂಸ್ಕರಣೆ ಯಂತ್ರದ ಪ್ರಾತ್ಯಕ್ಷಿಕೆಯನ್ನು ಬೊಮ್ಮನಹಳ್ಳಿಯಲ್ಲಿ ನೀಡಿದ್ದು, ಶಾಸಕ ಎಂ.ಸತೀಶ್‌ ರೆಡ್ಡಿ ವೀಕ್ಷಿಸಿದರು. ಈ ವೇಳೆ ಮಾತನಾಡಿದ ಶಾಸಕ ಸತೀಶ್‌ ರೆಡ್ಡಿ ‘ಪ್ರಧಾನಿ ನರೇಂದ್ರ ಮೋದಿ ಅವರು ಇಸ್ರೇಲ್‌ಗೆ ಭೇಟಿ ನೀಡಿದ್ದಾಗ, ಗಾಲ್‌ ಮೊಬೈಲ್‌ ಉಪಯುಕ್ತತತೆ ಬಗ್ಗೆ ಮಾಹಿತಿ ಪಡೆದು ಈ ಯಂತ್ರಗಳನ್ನು ಭಾರತಕ್ಕೆ ತರಲು ಆಸಕ್ತಿ ತೋರಿದ್ದರು. ಇದೀಗ ಗುಜರಾತಿನಲ್ಲಿ 15 ಯಂತ್ರಗಳು ಕೆಲಸ ನಿರ್ವಸುತ್ತಿದ್ದು, ರಾಜ್ಯದಲ್ಲಿ ಮೊದಲ ಬಾರಿಗೆ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಈ ಯಂತ್ರದ ಪ್ರಾತ್ಯಕ್ಷಿಕೆ ನೀಡಲಾಗುತ್ತಿದೆ ಎಂದು ತಿಳಿಸಿದರು.

ನೆರೆ ಸಂಭವಿಸಿ ನೀರಿಗೆ ತೊಂದರೆ ಆದಾಗ ಯಂತ್ರ ಬಳಸಿ ಸ್ಥಳದಲ್ಲೇ ಶುದ್ಧ ನೀರು ಒದಗಿಸಬಹುದು. ಕುಡಿಯುವ ನೀರಿನ ಅಭಾವವಿರುವ ಬಡಾವಣೆ, ಶಾಲೆ-ಕಾಲೇಜುಗಳಲ್ಲಿ ಮತ್ತು ಹಳ್ಳಿಗಳಿಗೂ ಈ ಯಂತ್ರವನ್ನು ಸುಲಭವಾಗಿ ಕೊಂಡೊಯ್ಯಬಹುದಾಗಿದೆ. ಈ ಯಂತ್ರಕ್ಕೆ .1.25 ಕೋಟಿ ಬೆಲೆ ಇದ್ದು, ಕಂಪನಿಯೇ ಇದರ ನಿರ್ವಹಣೆ ಮಾಡುತ್ತದೆ. ಶೀಘ್ರದಲ್ಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಈ ಬಗ್ಗೆ ಮನವರಿಕೆ ಮಾಡಿ, ಈ ಯಂತ್ರವನ್ನು ‘ಮೇಕ್‌ ಇನ್‌ ಕರ್ನಾಟಕ’ ಯೋಜನೆಯಡಿ ಉತ್ಪಾದಿಸಲು ಕೋರುತ್ತೇನೆ’ ಎಂದರು.

ಬಿಬಿಎಂಪಿ ವಾರ್ಡ್ ಮೀಸಲಾತಿ: ಸುಪ್ರೀಂ ಕೋರ್ಟ್‌ ಕದತಟ್ಟಿದವರಿಗೆ ಶಾಕ್!

ಈ ಸಂದರ್ಭದಲ್ಲಿ ಬಿಬಿಎಂಪಿ ಬೊಮ್ಮನಹಳ್ಳಿ ವಲಯ ಜಂಟಿ ಆಯುಕ್ತ ಕೃಷ್ಣಮೂರ್ತಿ, ಬಿಜೆಪಿ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.

ನಿತ್ಯ 20 ಸಾವಿರ ನೀರು ಸಂಸ್ಕರಣೆ

ಕೊಳವೆಯ ಮೂಲಕ ಚರಂಡಿ ನೀರನ್ನು ಹೀರಿಕೊಳ್ಳುವ ಯಂತ್ರವು, ನಾಲ್ಕು ಹಂತದ ಸಂಸ್ಕರಣೆಯಲ್ಲಿ ಬಳಕೆಗೆ ಯೋಗ್ಯವಲ್ಲದ ಚರಂಡಿಯ ನೀರನ್ನು ಸ್ಥಳದಲ್ಲೇ ಶುದ್ಧ ಕುಡಿಯುವ ನೀರನ್ನಾಗಿ ಪರಿವರ್ತಿಸುತ್ತದೆ. ಕಿರಿದಾದ ಪ್ರದೇಶಗಳಿಗೂ ಕೊಂಡೊಯ್ಯಬಹುದಾದ ಚಿಕ್ಕ ವಾಹನದಲ್ಲಿ ಯಂತ್ರವನ್ನು ಅಳವಡಿಸಲಾಗಿದೆ.

ನಾಲ್ಕು ಶೋಧಕ ಕೊಳಾಯಿಗಳು ಮೊದಲಿಗೆ ತ್ಯಾಜ್ಯ ನೀರಿನ ಸಣ್ಣ ಕಣಗಳನ್ನು ಹೊರಹಾಕಿ, ನಂತರ ದೊಡ್ಡ ಕಣಗಳನ್ನು ಶೋಧಿಸುತ್ತದೆ. ಮೂರು ಮತ್ತು ನಾಲ್ಕನೇ ಶೋಧಕಗಳು ನೀರಿನ ದುರ್ಗಂಧವನ್ನು ತೆಗೆದು, ಅಂತಿಮವಾಗಿ ಕುಡಿಯಲು ಯೋಗ್ಯವಾದ ನೀರನ್ನಾಗಿಸುತ್ತದೆ.

ಕೈಕಟ್ಟಿ ಕುಳಿತ ಬಿಬಿಎಂಪಿ, ರಸ್ತೆಗುಂಡಿಯನ್ನು ಮುಚ್ಚಿದ ಟ್ರಾಫಿಕ್ ಪೊಲೀಸ್ರು

ಕೃತಕ ಬುದ್ಧಿಮತ್ತೆಯ ತಾಂತ್ರಿಕತೆಯನ್ನು ಬಳಸಿ ಈ ಯಂತ್ರವನ್ನು ತಯಾರಿಸಲಾಗಿದ್ದು, ದಿನಕ್ಕೆ 15ರಿಂದ 20 ಸಾವಿರ ಲೀಟರ್‌ ನೀರನ್ನು ಸಂಸ್ಕರಿಸುತ್ತದೆ. ಇದೇ ಮಾದರಿಯ ದೊಡ್ಡ ಯಂತ್ರ 80 ಸಾವಿರ ಲೀಟರ್‌ ನೀರನ್ನು ಸಂಸ್ಕರಿಸುತ್ತದೆ, ಇದಕ್ಕೆ ವಿಶ್ವ ಆರೋಗ್ಯ ಸಂಸ್ಥೆ ಮಾನ್ಯತೆ ನೀಡಿದೆ ಎಂದು ತಾಂತ್ರಿಕ ಸಲಹೆಗಾರ ಡಾ. ಮೂರ್ತಿ ಹೇಳುತ್ತಾರೆ.

ಈಗಾಗಲೇ ಮಿಲಿಟರಿ, ಎನ್‌ಡಿಆರ್‌ಎಫ್‌ನಲ್ಲಿ ಬಳಸಲಾಗುತ್ತಿದ್ದು, ನಿರ್ವಹಣಾ ವೆಚ್ಚವೂ ಕಡಿಮೆ ಇದೆ. ಫೆä್ಲೕರೇಡ್‌ ಯುಕ್ತ ನೀರು ಕುಡಿದು ಅನೇಕ ಖಾಯಿಲೆಗಳಿಗೆ ತುತ್ತಾಗುತ್ತಿರುವ ಕುರಿತು ವರದಿಗಳಿದ್ದು, ಅಂತಹ ಪ್ರದೇಶಗಳಿಗೆ ಈ ಯಂತ್ರ ಸಹಾಯಕವಾಗಲಿದೆ.
 

Follow Us:
Download App:
  • android
  • ios