ಗದಗ: ಏಷ್ಯಾನೆಟ್ ಸುವರ್ಣ ನ್ಯೂಸ್‌ನ ಆ್ಯಂಕರ್ ಅರುಣ್ ಹೂಗಾರ್‌ಗೆ ಗೌರವ ಸನ್ಮಾನ
Gadag District Silver Jubilee: ಮುನ್ಸಿಪಾಲ್‌ಕಾಲೇಜು ಆವರಣದಲ್ಲಿ ಜಯಕರ್ನಾಟಕ ಸಂಘಟನೆ ವತಿಯಿಂದ ಗದಗ ಜಿಲ್ಲೆಯ ಬೆಳ್ಳಿ ಹಬ್ಬ ಹಾಗೂ ಕನ್ನಡ ರಾಜ್ಯೋತ್ಸವ ಅದ್ಧೂರಿಯಾಗಿ ಜರುಗಿತು.
ಗದಗ (ಡಿ. 12): ನಗರದ ಮುನ್ಸಿಪಾಲ್‌ಕಾಲೇಜು ಆವರಣದಲ್ಲಿ ಜಯಕರ್ನಾಟಕ ಸಂಘಟನೆ (Jaya Karnataka) ವತಿಯಿಂದ ಗದಗ (Gadag) ಜಿಲ್ಲೆಯ ಬೆಳ್ಳಿ ಹಬ್ಬ ಹಾಗೂ ಕನ್ನಡ ರಾಜ್ಯೋತ್ಸವ (Kannada Rajyotsava) ಅದ್ಧೂರಿಯಾಗಿ ಜರುಗಿತು. ಕಾರ್ಯಕ್ರಮದಲ್ಲಿ ಏಷ್ಯಾನೆಟ್ ಸುವರ್ಣ ನ್ಯೂಸ್ ಆ್ಯಂಕರ್ ಅರುಣ್ ಹೂಗಾರ್ (Arun Hugar) ಅವರನ್ನು ಸನ್ಮಾನಿಸಲಾಯ್ತು. ಗದಗ ಜಿಲ್ಲೆಯಾಗಿ ರೂಪುಗೊಂಡು 25 ವರ್ಷ ಪೂರೈಸಿದ ನಿಮಿತ್ತ ಬೆಳ್ಳಿ ಹಬ್ಬ ಆಚರಿಸಲಾಗುತ್ತಿದೆ. ಆಗಸ್ಟ್ 24, 1997 ರಂದು ‘ಗದಗ’ ಹೊಸ ಜಿಲ್ಲೆಯಾಗಿ ಹೊರಹೊಮ್ಮಿತು. ಕಲೆ, ಸಾಹಿತ್ಯ, ಸಂಸ್ಕೃತಿ, ಆಧ್ಯಾತ್ಮಿಕ ಮತ್ತು ಉದ್ಯಮದ ಕ್ಷೇತ್ರಗಳಲ್ಲಿ ಗದಗ ತನ್ನದೇ ಆದ ಛಾಪನ್ನು ಮೂಡಿಸಿದೆ. ನಗರದ ಮುನಿಸಿಪಲ್ ಕಾಲೇಜು ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನ ಮಾಡಲಾಯ್ತು.
ಕಾರ್ಯಕ್ರಮದ ಸಾನ್ನಿಧ್ಯವನ್ನು ಡಾ. ತೋಂಟದ ಸಿದ್ಧರಾಮ ಸ್ವಾಮಿಗಳು ಹಾಗೂ ಜೈ ಭಾರತ್ ಸೇವಾ ಸಮಿತಿ ಸಂಸ್ಥಾಪಕ ಹವಾಮಲ್ಲಿನಾಥ ಮಹಾರಾಜರು ವಹಿಸಿದ್ದರು. ವಿಪ ಸದಸ್ಯ ಎಸ್.ವಿ. ಸಂಕನೂರ ಕಾರ್ಯಕ್ರಮ ಉದ್ಘಾಟಿಸಿದರು. ವೇದಿಕೆಯಲ್ಲಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನ (Asianet Suvarna News) ಆ್ಯಂಕರ್ ಅರುಣ್ ಕುಮಾರ್ ಹೂಗಾರ್ ಅವರಗೂ ಸನ್ಮಾನ ಮಾಡಿ ಗೌರವಿಸಲಾಯ್ತು.
ಇದನ್ನೂ ಓದಿ: ಏಷ್ಯಾನೆಟ್ ಸುವರ್ಣನ್ಯೂಸ್ ಡಿಜಿಟಲ್‌ನ ನಿರುಪಮಾ ಕೆಎಸ್‌ಗೆ ಮೆಟಾ ಫೆಲೋಶಿಪ್
ಮಾಜಿ ಶಾಸಕ ಜಿ.ಎಸ್. ಪಾಟೀಲ, ರಾಜ್ಯಾಧ್ಯಕ್ಷ ಬಿ.ಎನ್. ಜಗದೀಶ, ಎಚ್. ರಾಮಚಂದ್ರಯ್ಯ, ಕೃಷ್ಣಗೌಡ ಪಾಟೀಲ, ಸಿದ್ದು ಪಾಟೀಲ, ಐ.ಎಸ್. ಪೂಜಾರ, ರವಿಕಾಂತ ಅಂಗಡಿ, ಮಹೇಶ ದಾಸರ, ವೀರಣ್ಣ ಗುರುಸಿದ್ಧಪ್ಪ ಶೆಟ್ಟರ, ಎಫ್.ಎಸ್. ಕರಿದುರಗಣ್ಣವರ, ಶರಣಪ್ಪ ಚಳಗೇರ, ಈಶಪ್ಪ ನಾಯ್ಕರ, ರಫೀಕ ತೊರಗಲ್, ಬಾಷಾಸಾಬ ಮಲ್ಲಸಮುದ್ರ, ಇಸ್ಮಾಯಿಲ್ ಆಡೂರು, ಬಸವರಾಜ ತಾವರೆ, ಇಸಾಕ್ ಅಹ್ಮದ್, ರಮೇಶ ಹಂಗನಕಟ್ಟೆ, ಅಬ್ಬೂ ರಾಟಿ, ಕಳಕಪ್ಪ ಪೋತ ಅಲ್ತಾಫ್, ಸಾಧಿಕ್, ರಮೇಶ್ ರಾಠೋಡ್, ಈಶ್ವರ ಲಕ್ಷ್ಮೇಶ್ವರ, ವಿಕಾಸ್ ಕ್ಷೀರಸಾಗರ, ವಿಠ್ಠಲ್ ಪೂಜಾರ್, ರಶಿದಾ ನದಾಫ್, ಚಂದ್ರಕಾಂತ ಚವ್ಹಾಣ ಮುಂತಾದವರು ಕಾರ್ಯಕ್ರಮದಲ್ಲಿ ಇದ್ದರು.