Asianet Suvarna News Asianet Suvarna News

ಗದಗ ಜಿಲ್ಲೆಯಲ್ಲಿ ಆತಂಕ ಮೂಡಿಸಿದ ಕೊರೋನಾ ಸೋಂಕಿತರ ಟ್ರಾವೆಲ್‌ ಹಿಸ್ಟರಿ..!

ತೀವ್ರ ಆತಂಕದಲ್ಲಿವೆ ಗದಗ ಜಿಲ್ಲೆಯ 5 ಗ್ರಾಮಗಳು| ಈಗಾಗಲೇ ಸೋಂಕಿತರು ಭೇಟಿ ನೀಡಿದ ಮನೆ, ಸ್ಥಳಗಳ ಮಾಹಿತಿ ಸಂಗ್ರಹಿಸುತ್ತಿರುವ ಆರೋಗ್ಯ ಇಲಾಖೆ| ಪಿ-607ರ 23 ವರ್ಷದ ಗರ್ಭಿಣಿಯಿಂದ ಪಾಸಿಟಿವ್‌ ಬಂದಿರುವ ಕೆಲ ರೋಗಿಗಳ ಪೈಕಿ ಡಾಣಕಶಿರೂರ ಗ್ರಾಮದ ಪಿ-681, ಪಿ-683, ಪಿ-684, ಪಿ-688, ಪಿ-691 ಸೋಂಕಿತರು ರೋಣ ತಾಲೂಕಿನ ಬಸರಕೋಡ, ಶಾಂತಗೇರಿ, ಹೊಸಹಳ್ಳಿ, ಮುಶಿಗೇರಿ, ಹೊಳೆಹಡಗಲಿ, ಕೊತಬಾಳ, ಹಿರೇಹಾಳ, ಸರ್ಜಾಪೂರ ಗ್ರಾಮಗಳಲ್ಲಿ ಓಡಾಡಿದ್ದಾರೆ|

Gadag District People in Anxiety for Coronavirus Positive Patients Travel History
Author
Bengaluru, First Published May 9, 2020, 9:04 AM IST
  • Facebook
  • Twitter
  • Whatsapp

ಗದಗ(ಮೇ.09):  ಕೊರೋನಾ ರಣಕೇಕೆಯಿಂದ ತತ್ತರಿಸಿರುವ ಬಾಗಲಕೋಟೆ ಜಿಲ್ಲೆಯ ಡಾಣಕಶಿರೂರು ಗ್ರಾಮದ ಸೋಂಕಿತ ಗರ್ಭಿಣಿಯ ಪ್ರಾಥಮಿಕ ಸಂಪರ್ಕದಿಂದ ಸೋಂಕು ತಗಲಿಸಿಕೊಂಡಿರುವ ವ್ಯಕ್ತಿಗಳು ಗದಗ ಜಿಲ್ಲೆಯ 5ಕ್ಕೂ ಹೆಚ್ಚಿನ ಗ್ರಾಮಗಳಲ್ಲಿ ಸಂಚರಿಸಿ ಹೋಗಿರುವ ಟ್ರಾವೆಲ್‌ ಹಿಸ್ಟರಿ ಪತ್ತೆ ಮಾಡಿರುವ ಬಾಗಲಕೋಟೆ ಪೊಲೀಸ್‌ ಇಲಾಖೆಯ ವರದಿಯಿಂದ ಈಗ ಬೆಚ್ಚಿಬೀಳುವ ಸರದಿ ಗದಗ ಜಿಲ್ಲೆಯದ್ದಾಗಿದೆ.

ಟ್ರಾವೆಲ್‌ ಹಿಸ್ಟರಿ ಆತಂಕ

ಪಿ-607ರ 23 ವರ್ಷದ ಗರ್ಭಿಣಿಯಿಂದ ಪಾಸಿಟಿವ್‌ ಬಂದಿರುವ ಕೆಲ ರೋಗಿಗಳ ಪೈಕಿ ಡಾಣಕಶಿರೂರ ಗ್ರಾಮದ ಪಿ-681, ಪಿ-683, ಪಿ-684, ಪಿ-688, ಪಿ-691 ಸೋಂಕಿತರು ರೋಣ ತಾಲೂಕಿನ ಬಸರಕೋಡ, ಶಾಂತಗೇರಿ, ಹೊಸಹಳ್ಳಿ, ಮುಶಿಗೇರಿ, ಹೊಳೆಹಡಗಲಿ, ಕೊತಬಾಳ, ಹಿರೇಹಾಳ, ಸರ್ಜಾಪೂರ ಗ್ರಾಮಗಳಲ್ಲಿ ಓಡಾಡಿದ್ದಾರೆ. ಇದರಿಂದಾಗಿ ರೋಣ ತಾಲೂಕಿನ 5ಕ್ಕೂ ಹೆಚ್ಚಿನ ಗ್ರಾಮಗಳಿಗೆ ಕೊರೋನಾ ಭೀತಿ ತೀವ್ರವಾಗಿ ಆವರಿಸಿದೆ. ಮೊದಲೇ ಭಯದಲ್ಲಿರುವ ಜನರಿಗೆ ಈಗ ಮತ್ತಷ್ಟು ಆತಂಕ ಶುರುವಾಗಿದೆ. ರೋಣ ತಾಲೂಕಿನಲ್ಲಿ ಈ 5 ಜನರ ಪ್ರಾಥಮಿಕ ಸಂಪರ್ಕದಲ್ಲಿದ್ದ 13 ಜನ, ದ್ವಿತೀಯ ಸಂಪರ್ಕದಲ್ಲಿದ್ದ 139 ಜನರ ಸ್ಕ್ವಾಬ್‌ ಟೆಸ್ವ್‌ಗೆ ಜಿಲ್ಲಾಡಳಿತ ಈಗಾಗಲೇ ರವಾನಿಸಿದ್ದು, ಇದರೊಟ್ಟಿಗೆ ಈ 8 ಗ್ರಾಮಗಳಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ರೋಗಿಗಳ ಪ್ರಥಮ ಸಂಪರ್ಕ ಮತ್ತು ದ್ವಿತೀಯ ಸಂಪರ್ಕ ಹೊಂದಿದವರ ವಿವರ ಹಾಗೂ ಟ್ರಾವೆಲ್‌ ಹಿಸ್ಟರಿ ಸಂಗ್ರಹಕ್ಕೆ ಮುಂದಾಗಿದೆ. 

ಮಹಾಮಾರಿ ಕೊರೋನಾ ಸಂಕಷ್ಟದಲ್ಲೂ ಸಾಲ ವಸೂಲಿಗಿಳಿದ ಬ್ಯಾಂಕುಗಳು!

ಶಾಂತಗೇರಿ, ಹೊಸಹಳ್ಳಿ, ಹಿರೇಹಾಳ ಗ್ರಾಮದಲ್ಲಿ ಗ್ರಾಪಂ ಕಾರ್ಯಪಡೆ ಮೂಲಕ ಸಭೆ ನಡೆಸಿ ಜನರಲ್ಲಿ ಕೊರೋನಾ ಸೋಂಕಿತರು ಎಲ್ಲೆಲ್ಲಿ ಸಂಚರಿಸಿದ್ದು, ಯಾರನ್ನ ಸಂಪರ್ಕಿಸಿದ್ದು ಎಂಬುದರ ಚಲನ- ವಲನ ಕುರಿತು ಮಾಹಿತಿ ನೀಡುವಂತೆ ತಿಳಿಸಿದ್ದಾರೆ.
 

Follow Us:
Download App:
  • android
  • ios