ಗದಗ(ಏ.12): ಮಹಾಮಾರಿ ಕೊರೋನಾದಿಂದ ಗದಗದಲ್ಲಿ ಪ್ರಥಮ ಸಾವು ಸಂಭವಿಸಿ 3 ದಿನ ಕಳೆದಿದೆ, ಆದರೆ ಇದುವರೆಗೂ ಸೋಂಕಿನ ಮೂಲವನ್ನು ಪತ್ತೆ ಮಾಡುವಲ್ಲಿ ಜಿಲ್ಲಾಡಳಿತಕ್ಕೆ ಸಾಧ್ಯವಾಗಿಲ್ಲ, ಇದರ ಮೂಲ ದಿನದಿಂದ ದಿನಕ್ಕೆ ನಿಗೂಢವಾಗುತ್ತಿದೆ. ಮೂಲ ಹುಡುಕುವುದು ಜಿಲ್ಲಾಡಳಿತಕ್ಕೆ ಸವಾಲಾಗಿದೆ.

80 ವರ್ಷದ ವೃದ್ಧೆ ಗದಗ ನಗರದ ರಂಗನವಾಡಾ ಪ್ರದೇಶದ ನಿವಾಸಿಯಾಗಿದ್ದು, ಏ.4 ರಂದು ಚಿಕಿತ್ಸೆಗೆಂದು ಜಿಲ್ಲಾಸ್ಪತ್ರೆಗೆ ದಾಖಲಾಗಿ ಏ.7 ರಂದು ಕಾಯಿಲೆ ದೃಢಪಟ್ಟಿತ್ತು. ಏ.9 ರಂದು ಬೆಳಗಿನ ಜಾವ ವೃದ್ಧೆ ತೀವ್ರ ಹೃದಯಾಘಾತದಿಂದ ಸಾವನ್ನಪ್ಪಿದ್ದಳು.

ಯಾವುದೇ ಲಿಂಕ್‌ ಇಲ್ಲದ ಗದಗದ 80ರ ಅಜ್ಜಿಗೆ ಕೊರೋನಾ! 3ನೇ ಹಂತಕ್ಕೆ ಕರ್ನಾಟಕ?

ಈ ಅಜ್ಜಿಗೆ ಚಿಕಿತ್ಸೆ ನೀಡಿದ ವೈದ್ಯರು, ದಾದಿಯರು, ಆಶಾ ಕಾರ್ಯಕರ್ತೆಯರು, ವೃದ್ಧೆಯ ಸಂಪರ್ಕದಲ್ಲಿದ್ದವರು, ನೆಂಟರು, ಬಂಧುಗಳು ಸೇರಿದಂತೆ 47 ಜನರನ್ನು ಪ್ರತ್ಯೇಕವಾಗಿರಿಸಿ ವರದಿ ಪಡೆಯಲಾಗಿದೆ. ಎಲ್ಲವೂ ನೆಗೆಟಿವ್‌ ಬಂದಿದೆ.