ಚಿತ್ರದುರ್ಗ(ಫೆ.01): ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ಅರುಣ್ ಅವರ ವರ್ಗಾವಣೆಯಾಗಿದ್ದು, ಅವರ ಸ್ಥಾನಕ್ಕೆ ನೂತನ ಎಸ್ಪಿಯಾಗಿ ಜಿ.ರಾಧಿಕಾರನ್ನು ನೇಮಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. 

ಅರುಣ್ ಅವರನ್ನು ಬೆಂಗಳೂರು ಮೆಟ್ರೋ ಪಾಲಿಟಿಯನ್‌ಗೆ ವರ್ಗಾಯಿಸಲಾಗಿದೆ. ರಾಧಿಕಾರ ಪ್ರವೇಶದಿಂದಾಗಿ ಓಬವ್ವನ ನಾಡು ಚಿತ್ರದುರ್ಗ ವನಿತೆಯರ ಸಾಮಾಜ್ಯವಾದಂತಾಗಿದೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಜಿಲ್ಲೆಯ ಆಯಾ ಕಟ್ಟಿನ ಹುದ್ದೆಗಳಲ್ಲಿ ಈಗಾಗಲೇ ಜಿಲ್ಲಾಧಿಕಾರಿ ವಿನೋತ್ ಪ್ರಿಯಾ, ಜಿಪಂ ಸಿಇಒ ಆಗಿ ಸಿ.ಸತ್ಯಭಾಮ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದೀಗ ಕಾಕತಾಳೀಯ ಎಂಬಂತೆ ನೂತನ ಎಸ್ಪಿಯಾಗಿ ರಾಧಿಕಾ ಅವರು ನೇಮಕಗೊಂಡಿದ್ದು, ಜಿಲ್ಲಾಡಳಿತದ ಪ್ರಮುಖರೆಲ್ಲ ವನಿತೆಯರೇ ಆದಂತಾಗಿದೆ.