Asianet Suvarna News Asianet Suvarna News

ರೇಷ್ಮೆ ಕೃಷಿಯಲ್ಲಿ ಮತ್ತಷ್ಟು ಸಂಶೋಧನೆ ಅಗತ್ಯ : ಡಾ.ಎಸ್.ಬಿ. ದಂಡಿನ್

ರೇಷ್ಮೆ ಕೃಷಿಯಲ್ಲಿ ಮತ್ತಷ್ಟು ಸಂಶೋಧನೆ ಅವಶ್ಯಕತೆ ಇದೆ ಎಂದು ರೇಷ್ಮೆ ಕೃಷಿಯಲ್ಲಿ ರೇಷ್ಮೆ ಹುಳು ಗೂಡು ಕಟ್ಟದಿರುವ ಹಾಗೂ ರೇಷ್ಮೆ ಕೃಷಿಯ ಚಟುವಟಿಕೆಗಳ ಬಗ್ಗೆ ಅಧ್ಯಯನ ಮಾಡಲು ರಚಿಸಿರುವ ಉನ್ನತ ಮಟ್ಟದ ಸಮಿತಿ ಅಧ್ಯಕ್ಷ ಡಾ.ಎಸ್.ಬಿ. ದಂಡಿನ್ ತಿಳಿಸಿದರು.

Further research is needed in sericulture: Dr. S.B. Dandin snr
Author
First Published Dec 23, 2023, 10:10 AM IST

  ಮೈಸೂರು : ರೇಷ್ಮೆ ಕೃಷಿಯಲ್ಲಿ ಮತ್ತಷ್ಟು ಸಂಶೋಧನೆ ಅವಶ್ಯಕತೆ ಇದೆ ಎಂದು ರೇಷ್ಮೆ ಕೃಷಿಯಲ್ಲಿ ರೇಷ್ಮೆ ಹುಳು ಗೂಡು ಕಟ್ಟದಿರುವ ಹಾಗೂ ರೇಷ್ಮೆ ಕೃಷಿಯ ಚಟುವಟಿಕೆಗಳ ಬಗ್ಗೆ ಅಧ್ಯಯನ ಮಾಡಲು ರಚಿಸಿರುವ ಉನ್ನತ ಮಟ್ಟದ ಸಮಿತಿ ಅಧ್ಯಕ್ಷ ಡಾ.ಎಸ್.ಬಿ. ದಂಡಿನ್ ತಿಳಿಸಿದರು.

ನಗರದ ಕೇಂದ್ರ ರೇಷ್ಮೆ ಸಂಶೋಧನೆ ಮತ್ತು ತರಬೇತಿ ಸಂಸ್ಥೆಯಲ್ಲಿ ನಡೆದ ಉನ್ನತ ಮಟ್ಟದ ಸಮಿತಿಯ ಸಭೆಯಲ್ಲಿ ಅವರು, ರೇಷ್ಮೆ ಕೃಷಿಯಲ್ಲಿ ರೇಷ್ಮೆ ಹುಳು ಗೂಡು ಕಟ್ಟದಿರುವ, ರೇಷ್ಮೆ ಕೃಷಿಯ ಚಟುವಟಿಕೆಗಳ ಬಗ್ಗೆ ಏನೆಲ್ಲ ಕಾರ್ಯಕ್ರಮಗಳನ್ನು ಕಳೆದ 2 ತಿಂಗಳಿಂದ ಮಾಡಲಾಗಿರುವ ಸರ್ವೇ, ಉದಾಹರಣೆ ಪರಿಶೀಲನೆ ಮುಂತಾದವುಗಳ ಬಗ್ಗೆ ವಿಜ್ಞಾನಿಗಳಿಂದ ಮಾಹಿತಿಯನ್ನು ಪಡೆದರು.

ಬೇರೆ ಬೇರೆ ರೈತರ ಹಿಪ್ಪುನೇರಳೆ ತೋಟಗಳಿಂದ ಮಣ್ಣು ತಂದು ಪರೀಕ್ಷೆ ಮಾಡಬೇಕು, ಎಲ್ಲಾ ಚಾಕಿ ಕೇಂದ್ರಗಳನ್ನು ಪರಿಶೀಲಿಸಬೇಕು. ಚಾಕಿ ಕೇಂದ್ರದ ಪ್ರಾರಂಭದಲ್ಲಿ ನಂತರದಲ್ಲೂ ಪರಿಶೀಲಿಸುತ್ತಿರಬೇಕು ಎಂದರು.

ಕೇಂದ್ರ ರೇಷ್ಮೆ ಮಂಡಳಿಯ ನಿರ್ದೇಶಕ ಡಾ.ಎಸ್. ಮಂಥಿರ ಮೂರ್ತಿ ಮಾತನಾಡಿ, ರೇಷ್ಮೆ ಹುಳು ಗೂಡು ಕಟ್ಟದಿರುವ ಬಗ್ಗೆ ಮತ್ತಷ್ಟು ಸಂಶೋಧನೆ ಮತ್ತು ತಾಂತ್ರೀಕತೆಗಳ ಅವಶ್ಯಕತೆಯಿದೆ. ಎಲ್ಲಾ ವಿಜ್ಞಾನಿಗಳನ್ನು ಪ್ರಯೋಗಿಕವಾದ ವರದಿ ನೀಡಬೇಕು. ನಮಗೆ ಸಂಶೋಧನೆಯ ದಾಖಲೆಗಳು ಬೇಕು, ಆಗ ಮಾತ್ರ ನಾವು ಯಾವುದೇ ನಿರ್ಣಯ ತೆಗೆದುಕೊಳ್ಳಬಹುದು ಎಂದರು.

ಕೇಂದ್ರ ರೇಷ್ಮೆ ಸಂಶೋಧನೆ ಮತ್ತು ತರಬೇತಿ ಸಂಸ್ಥೆಯ ನಿರ್ದೇಶಕ ಡಾ.ಎಸ್. ಗಾಂಧಿ ದಾಸ್ ಮಾತನಾಡಿ, ಸಂಶೋಧನೆಗೆ ಬೇಕಾದ ಎಲ್ಲಾ ನೆರವನ್ನು ವಿಜ್ಞಾನಿಗಳಿಗೆ ನೀಡಲಾಗುವುದು. ಎಲ್ಲಾ ವಿಜ್ಞಾನಿಗಳು ಸಂಶೋಧನೆಯಲ್ಲಿ ತೊಡಗಿ ಈ ಸಮಸ್ಯೆಯನ್ನು ಬಗೆಹರಿಸುವ ಅವಶ್ಯಕತೆಯಿದೆ ಎಂದರು.

ಸಂಸ್ಥೆಯ ವಿಜ್ಞಾನಿಗಳು ರೇಷ್ಮೆ ಹುಳು ಗೂಡು ಕಟ್ಟದಿರುವುದಕ್ಕೆ ಶಿಫಾರಸು ಮಾಡದ ಕೀಟನಾಶಕಗಳನ್ನು, ಹಿಪ್ಪು ನೇರಳೆ ತೋಟಕ್ಕೆ ಮತ್ತು ರೇಷ್ಮೆ ಹುಳುಗಳಿಗೆ ಬಳಸಿರುವುದೇ ಕಾರಣವಾಗಿದೆ. ರೈತರಲ್ಲಿ ಯಾವುದೇ ಸಂಸ್ಥೆಯು ಶಿಫಾರಸು ಮಾಡದ ಕೀಟನಾಶಕಗಳನ್ನು ಮತ್ತು ರಾಸಾಯನಿಕಗಳನ್ನು ತಮ್ಮ ಹಿಪ್ಪುನೇರಳೆ ತೋಟಕ್ಕೆ ಮತ್ತು ರೇಷ್ಮೆ ಹುಳುಗಳಿಗೆ ಬಳಸದಂತೆ ಮನವರಿಕೆ ಮಾಡಿಕೊಡಬೇಕು ಎಂದು ಅವರು ಹೇಳಿದರು.

ಕೇಂದ್ರ ರೇಷ್ಮೆ ಮಂಡಳಿ ವಿಜ್ಞಾನಿ ಡಾ.ಎಚ್.ಕೆ. ಬಸವರಾಜು, ನಿವೃತ್ತ ವಿಜ್ಞಾನಿಗಳಾದ ಡಾ. ಮುನಿರಾಜು, ಎನ್.ವೈ. ಚಿಗರಿ, ಕೇಂದ್ರ ರೇಷ್ಮೆ ಸಂಶೋಧನೆ ಮತ್ತು ತರಬೇತಿ ಸಂಸ್ಥೆಯ ವಿಜ್ಞಾನಿಗಳಾದ ಡಾ.ಕೆ.ಬಿ. ಚಂದ್ರಶೇಖರ್, ಡಾ. ರಘುನಾಥ್, ಡಾ.ಎಸ್. ಬಾಲಸರಸ್ವತಿ, ಡಾ. ಮುತ್ತುಲಕ್ಷ್ಮೀ, ಡಾ.ಸಿ.ಎಂ. ಬಾಬು, ಶ್ಯಾನ್ ಬೋಗ್, ಡಾ.ಎಸ್. ಮಹಿಬಾ ಹೆಲೆನ್, ಡಾ. ಸತೀಶ್, ಡಾ. ಮಲ್ಲಿಕಾರ್ಜನ, ಡಾ. ಜಾಯ್ಸಿರಾಣಿ, ಡಾ. ಧಾನೇಶ್ವರ್ ಪ್ರಧಾನ್ ಮೊದಲಾದವರು ಇದ್ದರು.

Follow Us:
Download App:
  • android
  • ios