ಸತತ ಮೂರು ವರ್ಷದಿಂದ ಮಹಿಳೆಯರ ದರ್ಬಾರ್

ಸತತ ಮೂರು ವರ್ಷದಿಂದಲೂ ಮೈಸೂರು ಮಹಾ ನಗರ ಪಾಲಿಕೆಯ ನೇತೃತ್ವವನ್ನು ಮಹಿಳೆಯರೇ ವಹಿಸಿಕೊಂಡಿದ್ದಾರೆ. ಮಹಿಳೆಯರೇ ಆಡಳಿತ ನಡೆಸುತ್ತಿದ್ದಾರೆ. 

From 2018 Continuously 3 Women Leads Mysuru city corporation snr

ವರದಿ :  ಅಂಶಿ ಪ್ರಸನ್ನಕುಮಾರ್‌

  ಮೈಸೂರು (ಮಾ.08):  ಮೈಸೂರು ನಗರಪಾಲಿಕೆಯು 1983 ರಿಂದಲೂ ಅಸ್ತಿತ್ವದಲ್ಲಿದೆ. ಆದರೆ ಇದೇ ಪ್ರಥಮ ಬಾರಿಗೆ ಒಂದೇ ಅವಧಿಯಲ್ಲಿ ಸತತ ಮೂರು ವರ್ಷWಳಿಂದ ಮಹಿಳೆಯರೇ ಮೇಯರ್‌ ಆಗಿ ಆಯ್ಕೆಯಾಗುತ್ತಿರುವುದು ವಿಶೇಷ.

ಈ ಹಿಂದೆ ಐದು ವರ್ಷಗಳ ಅವಧಿಯಲ್ಲಿ ಇಬ್ಬರು (2011-12 ರಲ್ಲಿ ಪುಷ್ಪಲತಾ ಚಿಕ್ಕಣ್ಣ, 2012-13 ರಲ್ಲಿ ಎಂ.ಸಿ. ರಾಜೇಶ್ವರಿ ಪುಟ್ಟಸ್ವಾಮಿ), ನಂತರ ಮತ್ತೊಂದು ಅವಧಿಗೆ ಚುನಾವಣೆ ನಡೆದಾಗಲೂ ಪ್ರಥಮ ವರ್ಷ (2013-14 ರಲ್ಲಿ ಎನ್‌.ಎಂ. ರಾಜೇಶ್ವರಿ ಸೋಮು) ಮಹಿಳೆಯರೇ ಮೇಯರ್‌ ಆಗಿದ್ದಾರೆ. ಆದರೆ ಒಂದೇ ಅವಧಿಯಲ್ಲಿ ಸತತ ಮೂರು ವರ್ಷ ಮಹಿಳೆಯರು ಮೇಯರ್‌ ಆಗಿರಲಿಲ್ಲ.

ಮಹಿಳೆಯರ ಪೈಕಿ ಮೊದಲ ಮೇಯರ್‌ ಎನಿಸಿಕೊಂಡವರ ಮೋದಾಮಣಿ ಹಾಗೂ ಉಪ ಮೇಯರ್‌ ಎನಿಸಿಕೊಂಡವರು ಲೀಲಾ ಚನ್ನಯ್ಯ.

ಅಲ್ಪಸಂಖ್ಯಾತರಿಗೂ ಸತತ ಮೂರು ವರ್ಷಗಳಿಂದ ಅಧಿಕಾರ

ಮುಂದುವರಿದ JDS-ಕೈ ಮೈತ್ರಿ : ಮೈಸೂರು ಮೇಯರ್ ಆಗಿ ರುಕ್ಮಿಣಿ ಮಾದೇಗೌಡ .

ಅದೇ ರೀತಿ ಸತತ ಮೂರು ವರ್ಷಗಳಿಂದ ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯದವರು ಮೇಯರ್‌ ಇಲ್ಲವೇ ಉಪ ಮೇಯರ್‌ ಆಗುತ್ತಿದ್ದಾರೆ. 2018-19 ರಲ್ಲಿ ಜೆಡಿಎಸ್‌ನ ಶಫಿ ಅಹ್ಮದ್‌- ಉಪ ಮೇಯರ್‌, 2020-21 ರಲ್ಲಿ ಜೆಡಿಎಸ್‌ನ ತಸ್ನೀಂ- ಮೇಯರ್‌, 2021-22 ರಲ್ಲಿ ಕಾಂಗ್ರೆಸ್‌ನ ಅನ್ವರ್‌ ಬೇಗ್‌- ಉಪ ಮೇಯರ್‌ ಆಗಿದ್ದಾರೆ.

ಈ ಹಿಂದೆ 1998-99 ರಲ್ಲಿ ಎ. ಆರೀಫ್‌ ಹುಸೇನ್‌, 2008-09 ರಲ್ಲಿ ಅಯೂಬ್‌ಖಾನ್‌- ಮೇಯರ್‌ ಆಗಿದ್ದರು. 1983- 84 ರಲ್ಲಿ ಮೀರ್‌ ಹುಮಾಯೂನ್‌. 90-91 ರಲ್ಲಿ ಜಮ್ರುದಾಖಾನಂ, 1997-98 ರಲ್ಲಿ ಅನ್ವರಿ ನೂರ್‌, 2003-04 ರಲ್ಲಿ ಅಯೂಬ್‌ಖಾನ್‌- ಉಪ ಮೇಯರ್‌ ಆಗಿದ್ದರು.

ಈವರೆಗೆ ಮೇಯರ್‌ ಆಗಿರುವ ಮಹಿಳೆಯರು

2003-04- ಮೋದಾಮಣಿ

2005-06- ಭಾರತಿ

2011-12- ಪುಷ್ಪಲತಾ ಚಿಕ್ಕಣ್ಣ

2012-13- ಎಂ.ಸಿ. ರಾಜೇಶ್ವರಿ ಪುಟ್ಟಸ್ವಾಮಿ

2013-14- ಎನ್‌.ಎಂ. ರಾಜೇಶ್ವರಿ ಸೋಮು

2017-18- ಭಾಗ್ಯವತಿ ಸುಬ್ರಹ್ಮಣ್ಯ

2018-19- ಪುಷ್ಪಲತಾ ಜಗನ್ನಾಥ್‌

2020-21- ತಸ್ನೀಂ

2021-22- ರುಕ್ಮಿಣಿ ಮಾದೇಗೌಡ

ಉಪ ಮೇಯರ್‌ ಆಗಿರುವ ಮಹಿಳೆಯರು

87-88- ಲೀಲಾ ಚನ್ನಯ್ಯ

90-91- ಜಮ್ರುದಾ ಖಾನಂ

92-93- ಟಿ. ಶಾರದಮ್ಮ

96-97- ಎಚ್‌.ಎಂ. ಶಾಂತಕುಮಾರಿ

97-98- ಅನ್ವರಿ ನೂರ್‌

99- 2000- ವೆಂಕಟಲಕ್ಷ್ಮಮ್ಮ

2001-02- ಆರ್‌. ಪುಷ್ಪವಲ್ಲಿ

2004-05- ಎಂ. ಮಂಜುಳಾ

2008-09- ಕಮಲಾ ಜೆ. ವೆಂಕಟೇಶ್‌

2009-10- ಶಾರದಮ್ಮ

2010-11- ಪುಷ್ಪಲತಾ ಜಗನ್ನಾಥ್‌

2014-15- ಎಂ. ಮಹದೇವಮ್ಮ

2015-16- ಜಿ.ಎಚ್‌. ವನಿತಾ ಪ್ರಸನ್ನ

2016-17- ರತ್ನಾ ಲಕ್ಷ್ಮಣ

2017-18- ಇಂದಿರಾ ಮಹೇಶ್‌

Latest Videos
Follow Us:
Download App:
  • android
  • ios