* ಮೈಸೂರಿನ ಹೊರವಲಯದ ಹೂಟಗಳ್ಳಿಯಲ್ಲಿ ನಡೆದ ಘಟನೆ* ಬಾಲಕಿಗೆ ರಾಮನಗರ ಮೂಲದ ಯುವಕನೊಂದಿಗೆ ಮದುವೆಗೆ ಸಿದ್ಧತೆ * ಈ ಸಂಬಂಧ ವಿಜಯನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು

ಮೈಸೂರು(ಜೂ.13): ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಗೆ ಕಾನೂನು ಬಾಹಿರವಾಗಿ ನಿಶ್ಚಯವಾಗಿದ್ದ ಮದುವೆಯನ್ನು ಆಕೆಯ ಸ್ನೇಹಿತೆ ತಡೆದ ಘಟನೆ ಮೈಸೂರಿನ ಹೊರವಲಯದ ಹೂಟಗಳ್ಳಿಯಲ್ಲಿ ನಡೆದಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬಾಲಕಿಗೆ ರಾಮನಗರ ಮೂಲದ ಯುವಕನೊಂದಿಗೆ ಮದುವೆಗೆ ಸಿದ್ಧತೆ ನಡೆದಿತ್ತು. ಆದರೆ ಈ ವಿಚಾರ ತಿಳಿದಿದ್ದ ಮದ್ವೆಗೆ ನಿಶ್ಚಯವಾಗಿದ್ದ ಬಾಲಕಿಯ ಸ್ನೇಹಿತೆ ತಮ್ಮ ಶಾಲೆಯ ಶಿಕ್ಷಕಿಗೆ ಮಾಹಿತಿ ನೀಡಿದ್ದಳು. ಶಿಕ್ಷಕಿಯು ಈ ಮಾಹಿತಿಯನ್ನು ಒಡನಾಡಿ ಸಂಸ್ಥೆಯ ಸ್ಟ್ಯಾನ್ಲಿ ಅವರಿಗೆ ತಿಳಿಸಿದ್ದರು. 

ಲಾಕ್‌ಡೌನ್‌ ಅವಧಿಯಲ್ಲಿ ಬಾಲ್ಯ ವಿವಾಹ ಹೆಚ್ಚಳ..?

ಈ ಸಂಸ್ಥೆಯು ಪೊಲೀಸರಿಗೆ ಮಾಹಿತಿ ನೀಡುವ ಮೂಲಕ ಬಾಲ್ಯ ವಿವಾಹವನ್ನು ತಡೆಯಲಾಗಿದೆ. ಈ ವೇಳೆ ಪರಿಶೀಲನೆಗೆಂದು ಪೊಲೀಸರು ಬಂದಾಗ ಪೋಷಕರು ಬಾಲಕಿಯನ್ನು ಮಂಚದ ಕೆಳಗೆ ಬಚ್ಚಿಟ್ಟಿರುವ ನಾಟಕೀಯ ಬೆಳವಣಿಗೆಯೂ ನಡೆದಿದೆ. ಅಲ್ಲದೆ ಈ ಸಂಬಂಧ ವಿಜಯನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.