ಟೇಕಲ್ (ನ.03) : ರಾಜ್ಯದ ವಿವಿಧೆಡೆ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಗುತ್ತಿದೆ. ನವೆಂಬರ್ ತಿಂಗಳಿನಲ್ಲಿ  ಕನ್ನಡ ಹಬ್ಬ ಮಾಡಲಾಗುತ್ತಿದೆ.  ಕೋಲಾರದ ಟೇಕಲ್‌ನಲ್ಲಿಯೂ ಕನ್ನಡ ಹಬ್ಬ ಮಾಡಲಾಗಿದೆ. 

ಕನ್ನಡನಾಡಿನ ಏಕೀಕರಣಕ್ಕಾಗಿ ಹಲವರು ದುಡಿದಿದ್ದಾರೆ. ಅವರನ್ನು ಸ್ಮರಿಸುವ ಕೆಲಸವಾಗಬೇಕಾಗಿದೆ ಎಂದು ಕರ್ನಾಟಕ ಜನಸೇವಕ ಸಂಘದ ರಾಜ್ಯಾಧ್ಯಕ್ಷ ಮಂಜುನಾಥಗೌಡ ಅಭಿಪ್ರಾಯಪಟ್ಟರು.

ಮಹಿಳೆಯರಿಂದ ಮಹಿಳೆಯರಿಗಾಗಿ: ಯೆಮನ್‌ನ ಈ ಕೆಫೆ ನೋಡಿ ...

 ಅವರು ಇಲ್ಲಿನ ಕೇಂದ್ರ ಕಚೇರಿಯಲ್ಲಿ 65ನೇ ಕನ್ನಡ ರಾಜ್ಯೋತ್ಸವ ಅಂಗವಾಗಿ ಕನ್ನಡದ ಬಾವುಟ ಹಾರಿಸಿ, ಬಡ ಮಹಿಳೆಯರಿಗೆ ಉಚಿತ ಸೀರೆ ವಿತರಿಸಿ ಅವರು ಮಾತನಾಡಿದರು.

ಟೇಕಲ್‌ ಶಾಖೆಯ ಅಧ್ಯಕ್ಷ ಮುರುಗೇಶ್‌, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಎಚ್‌.ಎಂ. ಸೊಣ್ಣಪ್ಪ, ಪ್ರಧಾನ ಕಾರ್ಯದರ್ಶಿ ವೆಂಕಟೇಶ್‌, ಜಿಲ್ಲಾ ಉಪಾಧ್ಯಕ್ಷ ಮಂಜುನಾಥ, ಶಶಿಧರ, ರಾಜೇಂದ್ರ ಉಪಸ್ಥಿತರಿದ್ದರು.