ಉಚಿತ ಪಂಪ್ ಸೆಟ್ ಯೋಜನೆ : ಮತ್ತೆ ಮುಂದುವರೆಸಲು ಡಿಮ್ಯಾಂಡ್
ರಾಜ್ಯ ಸರ್ಕಾರ ಹೊಸದಾಗಿ ತಂದಿರುವ ಕೃಷಿ ಪಂಪ್‌ಸೆಟ್‌ಗಳಿಗೆ ಉಚಿತ ಟ್ರಾನ್ಸ್‌ಫಾರ್ಮರ್ ನೀಡುತ್ತಿರುವ ಯೋಜನೆ ರದ್ದುಗೊಳಿಸಿರುವುದನ್ನು ವಾಪಸ್ ಪಡೆಯುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಧರಣಿ ಸತ್ಯಾಗ್ರಹ ನಡೆಸಿತು.
ಶಿರಾ : ರಾಜ್ಯ ಸರ್ಕಾರ ಹೊಸದಾಗಿ ತಂದಿರುವ ಕೃಷಿ ಪಂಪ್‌ಸೆಟ್‌ಗಳಿಗೆ ಉಚಿತ ಟ್ರಾನ್ಸ್‌ಫಾರ್ಮರ್ ನೀಡುತ್ತಿರುವ ಯೋಜನೆ ರದ್ದುಗೊಳಿಸಿರುವುದನ್ನು ವಾಪಸ್ ಪಡೆಯುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಧರಣಿ ಸತ್ಯಾಗ್ರಹ ನಡೆಸಿತು.
ನಿರಂತರ ಸರ್ಕಾರದಿಂದ ಒಂದರ ಮೇಲೊಂದರಂತೆ ಹೊಸ ಕಾನೂನು ಜಾರಿ ಮಾಡುತ್ತ ರೈತರನ್ನು ಕೃಷಿಯಿಂದ ಒಕ್ಕಲೆಬ್ಬಿಸುತ್ತಿದ್ದಾರೆ ಎಂದು ಜಿಲ್ಲಾ ರೈತ ರೈತ ಸಂಘದ ಕಾರ್ಯಾಧ್ಯಕ್ಷ ಕೆ.ಎಸ್.ಧನಂಜಯರಾಧ್ಯ ಆರೋಪಿಸಿದರು.
ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯಿಂದ ಬೆಸ್ಕಾಂ ಮುಂಭಾಗ ರಾಜ್ಯ ಸರ್ಕಾರ ಹೊಸದಾಗಿ ತಂದಿರುವ ಕೃಷಿ ಪಂಪ್‌ಸೆಟ್‌ಗಳಿಗೆ ಉಚಿತ ಟ್ರಾನ್ಸ್‌ಫಾರ್ಮರ್ ನೀಡುತ್ತಿರುವ ಯೋಜನೆ ರದ್ದುಗೊಳಿಸಿರುವುದನ್ನು ವಾಪಸ್ ಪಡೆಯುವಂತೆ ಒತ್ತಾಯಿಸಿ ಹಮ್ಮಿಕೊಂಡಿದ್ದ ಧರಣಿಯಲ್ಲಿ ಭಾಗವಹಿಸಿ ಮಾತನಾಡಿದರು.
ಹೊಸ ಆದೇಶದ ಪ್ರಕಾರ ಕನಿಷ್ಠ 3 ಲಕ್ಷ ಹೆಚ್ಚುವರಿಯಾಗಿ ರೈತರಿಗೆ ಭರಿಸಬೇಕಾಗುತ್ತದೆ. ರೈತರು ಸಂಪರ್ಕ ಕೊಳವೆ ಬಾವಿ ಕೊರೆಸಿ ವಿದ್ಯುತ್ ಪಡೆಯಲು 10 ಲಕ್ಷ ರು. ಖರ್ಚು ಹೆಚ್ಚಾಗುತ್ತದೆ. ರೈತರಿಗೆ ಭರಿಸಲಾಗದ ಕಾರಣ ಸರ್ಕಾರ ಹೊಸದಾಗಿ ಮಾಡಿರುವ ಆದೇಶವನ್ನು ರದ್ದುಪಡಿಸಬೇಕು ಎಂದು ಒತ್ತಾಯಿಸಿದರು.
ರೈತ ಸಂಘದ ತಾಲೂಕು ಅಧ್ಯಕ್ಷ ಸಣ್ಣದ್ಯಾಮಪ್ಪ, ಜಯರಾಮಣ್ಣ, ನಾಗರಾಜು, ಮಹಂತೇಶ, ಲಕ್ಕಪ್ಪ, ಜುಂಜಯ್ಯ, ಕೃಷ್ಣಪ್ಪ, ಡಿ.ಕರೇಗೌಡ, ಹೆಚ್.ರಾಮಕೃಷ್ಣಪ್ಪ, ನಾರಾಯಣಪ್ಪ, ಜೆ.ಎಸ್.ಮಲ್ಲಿಕಾರ್ಜುನಯ್ಯ ಭಾಗವಹಿಸಿದ್ದರು.
ಆಧಾರ್ ಲಿಂಕ್ ಕಡ್ಡಾಯ - ತೀವ್ರ ಆಕ್ರೋಶ
ಬೆಂಗಳೂರು (ಮೇ.12) : ರಾಜ್ಯದಲ್ಲಿ ನೀರಾವರಿ ಕೃಷಿ ಪಂಪ್‌ಸೆಟ್‌ಗಳ ಆರ್.ಆರ್. ಸಂಖ್ಯೆಗಳನ್ನು ಸಂಬಂಧಿಸಿದ ಗ್ರಾಹಕರ ಆಧಾರ್ ನಂಬರ್ ಜತೆಗೆ ಆರು ತಿಂಗಳೊಳಗಾಗಿ ಲಿಂಕ್ ಮಾಡಬೇಕು. ಇಲ್ಲದಿದ್ದರೆ ಅಂತಹ ಆರ್.ಆರ್. ಸಂಖ್ಯೆಗಳಿಗೆ ಸಹಾಯಧನ ಬಿಡುಗಡೆ ಮಾಡುವುದಿಲ್ಲ ಎಂದು ಕೆಇಆರ್‌ಸಿ ಶುಕ್ರವಾರ ಆದೇಶ ಹೊರಡಿಸಿದೆ. ಇದು ರೈತ ವಲಯದಲ್ಲಿ ತೀವ್ರ ಆತಂಕ ಸೃಷ್ಟಿಸಿದೆ.
ಶುಕ್ರವಾರ ಪ್ರಕಟಿಸಿರುವ ವಿದ್ಯುತ್ ದರ ಪರಿಷ್ಕರಣೆ ಆದೇಶದಲ್ಲಿ ಈ ಷರತ್ತನ್ನು ವಿಧಿಸಿದ್ದು, ಎಸ್ಕಾಂಗಳು ಕಡ್ಡಾಯವಾಗಿ ಕೃಷಿ ಪಂಪ್‌ಸೆಟ್‌ಗಳ ಗ್ರಾಹಕರಾಗಿರುವ ರೈತರ ಆಧಾರ್ ಸಂಖ್ಯೆ(Farmers adhar number)ಯನ್ನು ಸಂಬಂಧಪಟ್ಟಕೃಷಿ ಪಂಪ್‌ಸೆಟ್(Agriculture pumpset) ಆರ್.ಆರ್. ಸಂಖ್ಯೆಗೆ ಲಿಂಕ್ ಮಾಡಬೇಕು. ಇದನ್ನು 6 ತಿಂಗಳ ಒಳಗಾಗಿ ಮಾಡದಿದ್ದರೆ ಅಂತಹ ಆರ್.ಆರ್. ಸಂಖ್ಯೆಯ ಸಹಾಯಧನ ಸರ್ಕಾರದಿಂದ ಎಸ್ಕಾಂಗಳಿಗೆ ಬಿಡುಗಡೆಯಾಗುವುದಿಲ್ಲ ಎಂದು ಎಚ್ಚರಿಕೆ ನೀಡಿದೆ.
ಅನಧಿಕೃತ ಕೃಷಿ ನೀರಾವರಿ ಪಂಪ್‌ಸೆಟ್ ಬಳಕೆ ಸಕ್ರಮ
ಈ ಬಗ್ಗೆ ರೈತ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಇದು ಕೃಷಿ ಪಂಪ್‌ಸೆಟ್‌ಗಳಿಗೆ ಇರುವ ಉಚಿತ ವಿದ್ಯುತ್ ಸೌಲಭ್ಯಗಳನ್ನು ಕಸಿದುಕೊಳ್ಳುವ ಹುನ್ನಾರ. ಯಾವುದೇ ಕಾರಣಕ್ಕೂ ರೈತರ ಆಧಾರ್ ಸಂಖ್ಯೆಯನ್ನು ಆರ್.ಆರ್. ಸಂಖ್ಯೆಗೆ ಲಿಂಕ್ ಮಾಡುವುದನ್ನು ಒಪ್ಪುವುದಿಲ್ಲ. ಒಂದು ವೇಳೆ ಬಲವಂತವಾಗಿ ಲಿಂಕ್ ಮಾಡಲು ಮುಂದಾದರೆ ಯಾವುದೇ ಸರ್ಕಾರ ಅಧಿಕಾರಕ್ಕೆ ಬರಲಿ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿವೆ.
ಈ ಬಗ್ಗೆ ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಪ್ರತಿಕ್ರಿಯಿಸಿದ್ದು, ಇದು ರೈತರ ಕೃಷಿ ಪಂಪ್‌ಸೆಟ್‌ಗೆ ನೀಡುತ್ತಿರುವ ಉಚಿತ ವಿದ್ಯುತ್ ಸೌಲಭ್ಯ ರದ್ದುಪಡಿಸುವ ಕೇಂದ್ರ ಸರ್ಕಾರದ ಹುನ್ನಾರ. ಕೇಂದ್ರದ ಹೊಸ ವಿದ್ಯುತ್ ನೀತಿ ಅನ್ವಯ ಕೃಷಿ ಪಂಪ್‌ಸೆಟ್‌ಗಳಿಗೆ ಮೀಟರ್ ಅಳವಡಿಕೆ ಮಾಡಬೇಕು. ಮೊದಲು ಕೃಷಿ ಪಂಪ್‌ಸೆಟ್‌ಗಳ ವಿದ್ಯುತ್ ಶುಲ್ಕವನ್ನು ರೈತರು ಪಾವತಿಸಿದರೆ ಬಳಿಕ ಸಬ್ಸಿಡಿ ಹಣವನ್ನು ಸರ್ಕಾರ ಪಾವತಿಸಬೇಕು ಎಂದು ಹೇಳಲಾಗಿದೆ. ಇದಕ್ಕೆ ದೇಶಾದ್ಯಂತ ರೈತ ವಲಯದಿಂದ ಆಕ್ರೋಶ ವ್ಯಕ್ತವಾಗಿದೆ ಎಂದರು.