ಚರ್ಚ್ ಸ್ಟ್ರೀಟ್​​ನಲ್ಲಿ ಯುವತಿಯೊಬ್ಬಳು ಫ್ರೀ ಹಗ್ (Free hug) ಅಭಿಯಾನ ನಡೆಸಿ ಸುದ್ದಿಯಾಗಿದ್ದಾಳೆ. ಯುವತಿಯೊಬ್ಬಳು Free Hug ಎಂದು ಪೋಸ್ಟರ್ ಹಿಡಿದು ನಿಂತಿದ್ದಾಳೆ. ಬೋರ್ಡ್​​ ನೋಡಿದ ಕೆಲ ಯುವಕ-ಯುವತಿಯರು ಮುಂದೆ ಬಂದು ತಬ್ಬಿಕೊಂಡಿದ್ದಾರೆ. 

ಬೆಂಗಳೂರು (ಡಿ.31): ಎರಡು ವರ್ಷಗಳ ಬಳಿಕ ಅತ್ಯಂತ ವಿಜೃಂಭಣೆ, ಮೋಜು ಮಸ್ತಿಯೊಂದಿಗೆ ಹೊಸ ವರ್ಷವನ್ನು ಸ್ವಾಗತಿಸಲು ರಾಜಧಾನಿ ಬೆಂಗಳೂರು ಸಜ್ಜಾಗಿದೆ. ‘ಕ್ಯಾಲೆಂಡರ್‌ ವರ್ಷ 2023’ ಆರಂಭವಾಗುವ ಕ್ಷಣವನ್ನು ಸ್ಮರಣೀಯ ವಾಗಿಸಲು ನಗರದ ಪಬ್‌, ಕ್ಲಬ್‌, ಬಾರ್‌ ಅಂಡ್‌ ರೆಸ್ಟೋರಂಟ್‌ ಹಾಗೂ ಇನ್ನಿತರೆ ಪ್ರದೇಶಗಳಲ್ಲಿ ಭಿನ್ನ ಭಿನ್ನ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಹೀಗಾಗಿ, ಶನಿವಾರ ಮಧ್ಯರಾತ್ರಿ 12 ಗಂಟೆಗೆ ಹೊಸ ವರ್ಷವನ್ನು ಸ್ವಾಗತಿಸಲು ಜನರು, ತಮ್ಮ ಅಭಿರುಚಿಗೆ ತಕ್ಕಂತೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಸ್ನೇಹಿತರು ಹಾಗೂ ಕುಟುಂಬಸ್ಥರು, ಮನೆ ಹಾಗೂ ಕಚೇರಿಗಳಲ್ಲಿ ಪಾರ್ಟಿಗಳನ್ನು ಆಯೋಜಿಸಲು ತಯಾರಿ ನಡೆಸಿದ್ದಾರೆ. 

ನಗರದ ಪ್ರಮುಖ ಕಟ್ಟಡಗಳು, ತಾರಾ ಹೋಟೆಲ್‌ಗಳು, ಮಾಲ್‌ಗಳು, ಪಬ್‌, ಕ್ಲಬ್‌, ಬಾರ್‌ ಮತ್ತು ರೆಸ್ಟೋರಂಟ್‌ಗಳು ಹಾಗೂ ಪ್ರವಾಸಿ ತಾಣಗಳಿಗೆ ವಿದ್ಯುತ್‌ ದೀಪಾಲಂಕಾರ ಮಾಡಲಾಗಿದೆ. ಈ ದೀಪಗಳು ರಾತ್ರಿ ಹೊತ್ತು ಝಗಮಗಿಸುತ್ತ ನಗರದ ಸೌಂದರ್ಯವನ್ನು ಹೆಚ್ಚಿಸಿವೆ. ಇದೀಗ ಚರ್ಚ್ ಸ್ಟ್ರೀಟ್​​ನಲ್ಲಿ ಯುವತಿಯೊಬ್ಬಳು ಫ್ರೀ ಹಗ್ (Free hug) ಅಭಿಯಾನ ನಡೆಸಿ ಸುದ್ದಿಯಾಗಿದ್ದಾಳೆ. ಯುವತಿಯೊಬ್ಬಳು Free Hug ಎಂದು ಪೋಸ್ಟರ್ ಹಿಡಿದು ನಿಂತಿದ್ದಾಳೆ. ಬೋರ್ಡ್​​ ನೋಡಿದ ಕೆಲ ಯುವಕ-ಯುವತಿಯರು ಮುಂದೆ ಬಂದು ತಬ್ಬಿಕೊಂಡಿದ್ದಾರೆ. ಇದನ್ನು ಗಮನಿಸಿದ ಪೊಲೀಸರು ಕೂಡಲೇ ಎಚ್ಚೆತ್ತುಕೊಂಡು ಯುವತಿಗೆ ಬುದ್ಧಿ ಹೇಳಿದ್ದಾರೆ. ಈ ಮೂಲಕ ಅನಾಹುತ ಆಗುವ ಮುನ್ನ ಕಬ್ಬನ್ ಪಾರ್ಕ್ ಪೊಲೀಸರು ಎಚ್ಚೆತ್ತುಕೊಂಡಿದ್ದಾರೆ.

ಮನ್‌ಮುಲ್‌ಗೆ 1 ಲಕ್ಷ ಲೀಟರ್ ಹಾಲು ಸಂಗ್ರಹ ಸಾಮರ್ಥ್ಯ: ಸಚಿವ ಎಸ್‌.ಟಿ.ಸೋಮಶೇಖರ್‌

ಎರಡು ವರ್ಷದ ಬಳಿಕ ಅವಕಾಶ: ಬೆಂಗಳೂರಿನ ಹೊಸ ವರ್ಷ ಆಚರಣೆಯ ಕೇಂದ್ರ ಬಿಂದುವಾದ ಎಂ.ಜಿ.ರಸ್ತೆ, ಬ್ರಿಗೇಡ್‌ ರಸ್ತೆ ಹಾಗೂ ಚರ್ಚ್‌ ಸ್ಟ್ರೀಟ್‌ಗೆ ಸಾರ್ವಜನಿಕರಿಗೆ ಕಳೆದ ವರ್ಷಗಳಲ್ಲಿಯೂ ಡಿ.31 ಮಧ್ಯರಾತ್ರಿ ನಿರ್ಬಂಧ ವಿಧಿಸಲಾಗಿತ್ತು. ಆದರೆ, ಈ ಬಾರಿ ಅನುಮತಿ ನೀಡಿದ್ದು, ತಯಾರಿ ಜೋರಾಗಿದೆ. ಈ ರಸ್ತೆಗಳ ಪ್ರತಿ ಅಂಗಡಿಯನ್ನೂ ದೀಪಗಳಿಂದ ಅಲಂಕರಿಸಲಾಗಿದೆ. ಕೊರೋನಾ ಪೂರ್ವದಂತೆಯೇ ಲಕ್ಷಾಂತರ ಮಂದಿ ಈ ರಸ್ತೆಗಳಿಗೆ ಆಗಮಿಸುವ ನಿರೀಕ್ಷೆ ಇದೆ. ಈ ಹಿನ್ನೆಲೆಯಲ್ಲಿ ಬ್ರಿಗೇಡ್‌ ರಸ್ತೆ, ಎಂ.ಜಿ.ರಸ್ತೆ, ರಿಚ್ಮಂಡ್‌ ರಸ್ತೆ ಹಾಗೂ ರೆಸಿಡೆನ್ಸಿ ರಸ್ತೆ ವ್ಯಾಪ್ತಿಯಲ್ಲಿ ಶನಿವಾರ ರಾತ್ರಿ ಮೂರು ಸಾವಿರ ಪೊಲೀಸರು ಭದ್ರತೆಗೆ ನಿಯೋಜಿಸಲಾಗಿದೆ.

ಮಧ್ಯಾಹ್ನದಿಂದಲೇ ವಾಹನ ಸಂಚಾರಕ್ಕೆ ಅವಕಾಶವಿಲ್ಲ: ಎಂ.ಜಿ.ರಸ್ತೆ ಹಾಗೂ ಬ್ರಿಗೇಡ್‌ ರಸ್ತೆಗಳಲ್ಲಿ ಶನಿವಾರ ಮಧ್ಯಾಹ್ನ 3 ರಿಂದ ರಾತ್ರಿ 1 ಗಂಟೆವರೆಗೆ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಅಲ್ಲದೆ ಬ್ರಿಗೇಡ್‌ ರಸ್ತೆಯಲ್ಲಿ ಜನರಿಗೆ ಏಕಮುಖ ಪ್ರವೇಶಕ್ಕೆ ಮಾತ್ರ ಅವಕಾಶ ನೀಡಲಾಗಿದೆ. ಈ ಎರಡು ರಸ್ತೆಗಳ ಜಂಕ್ಷನ್‌ನಲ್ಲಿ ಪ್ರವೇಶ ದ್ವಾರ ನಿರ್ಮಾಣ ಮಾಡಲಾಗುತ್ತಿದೆ. ಪ್ರವೇಶ ದ್ವಾರದಲ್ಲಿ ಮೆಟಲ್‌ ಡಿಟೆಕ್ಟರ್‌ ಉಪಕರಣವನ್ನು ಅಳವಡಿಸ ಲಾಗಿದ್ದು, ಪ್ರತಿಯೊಬ್ಬರ ತಪಾಸಣೆ ನಡೆಸಲಾಗುತ್ತದೆ.

ಮುಂಗಡ ಬುಕ್ಕಿಂಗ್‌:ಎಂ.ಜಿ.ರಸ್ತೆ, ಇಂದಿರಾನಗರ, ರೆಸಿಡೆನ್ಸಿ ರಸ್ತೆ, ಕಮರ್ಷಿಯಲ್ಸ್ಟ್ರೀಲ್‌, ಮಲ್ಲೇಶ್ವರದ ಸಂಪಿಗೆ ರಸ್ತೆ, ಕೋರಮಂಗಲ ಸೇರಿದಂತೆ ಪ್ರಮುಖ ನಗರಗಳ ಬಾರ್‌ ಮತ್ತು ರೆಸ್ಟೋರಂಟ್‌ಗಳು, ಪಬ್‌, ಡಿಸ್ಕೋಥೆಕ್‌ಗಳಲ್ಲಿ ಡಿ.ಜೆ.ಗಳು ಹಾಗೂ ಗಾಯಕರ ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಶನಿವಾರ ಸಂಜೆ 6 ಗಂಟೆಯಿಂದಲೇ ಆರಂಭಗೊಳ್ಳಲಿವೆ. ಅಂತೆಯೇ ಗ್ರಾಹಕರನ್ನು ತಮ್ಮತ್ತ ಸೆಳೆಯಲು ಹಲವು ಪಬ್ ಹಾಗೂ ರೆಸ್ಟೋರೆಂಟ್‌ಗಳು ರಿಯಾಯಿತಿ ದರಗಳನ್ನು ಘೋಷಿಸಿವೆ. ಈಗಾಗಲೇ ಆ ಕಾರ್ಯಕ್ರಮಗಳ ಟಿಕೆಟ್‌ಗಳನ್ನು ಜನರು, ಮುಂಗಡವಾಗಿಯೇ ಕಾಯ್ದಿರಿಸಿದ್ದಾರೆ.

ಎಚ್‌ಡಿಕೆ ನಡವಳಿಕೆಗೆ ಬೇಸತ್ತು ಜೆಡಿಎಸ್‌ ಬಿಟ್ಟೆ: ಬಾಲಕೃಷ್ಣ

ಬಿಎಂಟಿಸಿ ಮತ್ತು ಮೆಟ್ರೋ ಸೇವೆ: ಶನಿವಾರ ಮಧ್ಯರಾತ್ರಿ 2ಗಂಟೆವರೆಗೂ ಎಂ.ಜಿ ರಸ್ತೆಯಿಂದ ನಗರದ ವಿವಿಧ ಭಾಗಗಳಿಗೆ ಬಿಎಂಟಿಸಿ ಬಸ್‌ ಸೌಲಭ್ಯವಿದೆ. ಜತೆಗೆ ಮೆಟ್ರೋ ರೈಲು ಸೇವೆಯು ರಾತ್ರಿ 2ಗಂಟೆವರೆಗೂ ಇರಲಿದ್ದು, ಮೆಜೆಸ್ಟಿಕ್‌ನಿಂದ ಬೈಯ್ಯ ಪ್ಪನಹಳ್ಳಿ, ಕೆಂಗೇರಿ, ರೇಷ್ಮೆ ಮಂಡಳಿ ಹಾಗೂ ನಾಗಸಂದ್ರ ಮಾರ್ಗಕ್ಕೆ ರಾತ್ರಿ 2ಕ್ಕೆ ಕೊನೆಯ ರೈಲು ಹೊರಡಲಿದೆ.