Asianet Suvarna News Asianet Suvarna News

ದಾವಣಗೆರೆ ವಿಶ್ವಾರಾಧ್ಯ ಕ್ಯಾನ್ಸರ್ ಆಸ್ಪತ್ರೆಯಿಂದ ಉಚಿತ ಆರೋಗ್ಯ ಶಿಬಿರ

ದಾವಣಗೆರೆ ನಗರದ ವಿಶ್ವಾರಾಧ್ಯ ಕ್ಯಾನ್ಸರ್ ಆಸ್ಪತ್ರೆ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಎಲ್ಲ ರೀತಿಯ ಕ್ಯಾನ್ಸರ್ ಗಳಿಗೂ ಚಿಕಿತ್ಸೆ ನೀಡಲಾಗುತ್ತಿದ್ದು, ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಸಲುವಾಗಿ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಉಚಿತ ಆರೋಗ್ಯ ಶಿಬಿರವನ್ನು ಹಮ್ಮಿಕೊಳ್ಳುತ್ತಿದೆ.

Free Health Camp by Vishwaradhya Cancer Hospital and Research Institute Davangere gow
Author
First Published Jan 31, 2023, 6:37 PM IST

ವರದಿ : ವರದರಾಜ್, ಏಷ್ಯಾನೆಟ್ ಸುವರ್ಣನ್ಯೂಸ್

ದಾವಣಗೆರೆ (ಜ.31): ದಾವಣಗೆರೆ ನಗರದ ವಿಶ್ವಾರಾಧ್ಯ ಕ್ಯಾನ್ಸರ್ ಆಸ್ಪತ್ರೆ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಎಲ್ಲ ರೀತಿಯ ಕ್ಯಾನ್ಸರ್ ಗಳಿಗೂ ಚಿಕಿತ್ಸೆ ನೀಡಲಾಗುತ್ತಿದ್ದು, ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಸಲುವಾಗಿ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಉಚಿತ ಆರೋಗ್ಯ ಶಿಬಿರವನ್ನು ಹಮ್ಮಿಕೊಳ್ಳತ್ತಾ ಬರುತ್ತಿದೆ ಎಂದು ಡಾ. ಜಗದೀಶ್ ತುಬಚಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಆಸ್ಪತ್ರೆಯಲ್ಲಿ ಈ ಮೊದಲು ಸಣ್ಣ ಪ್ರಮಾಣದ ಕ್ಯಾನ್ಸರ್ ಚಿಕಿತ್ಸೆಗಳನ್ನು ಮಾಡಲಾಗುತ್ತಿತ್ತು ಈಗ ಸಮಗ್ರ ಕ್ಯಾನ್ಸರ್ ಚಿಕಿತ್ಸೆ ನೀಡುತ್ತಿದ್ದು, ವಿಶೇಷ ತಜ್ಞರ ತಂಡವನ್ನು ಹೊಂದಿದೆ ಎಂದರು.

ಗರ್ಭಕಂಠದ ಕ್ಯಾನ್ಸರ್‌ನಿಂದ ಪ್ರತಿ ವರ್ಷ 74,000ಕ್ಕೂ ಹೆಚ್ಚು ಮಹಿಳೆಯರು ಸಾವು

ಹಿರಿಯ ತಜ್ಞ ಡಾ. ಇಬ್ರಾಹಿಂ ನಾಗನೂರು ಮಾತನಾಡಿ, ಸಂಸ್ಥೆ ವತಿಯಿಂದ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಕ್ಯಾನ್ಸರ್ ರೋಗದ ಕುರಿತು, ಜಾಗೃತಿ ಮೂಡಿಸುವ ಹಾಗೂ ತಪಾಸಣೆ ಶಿಬಿರವನ್ನು ಹಮ್ಮಿಕೊಳ್ಳಲಾಗುತ್ತಿದೆ.  ಅರಿವಿನ ಕೊರತೆ, ಹಣದ ಅಲಭ್ಯತೆ, ಹಾಗೂ ಮುಜುಗರದಿಂದ ರೋಗಿಗಳು ಚಿಕಿತ್ಸೆಗೆ ಮುಂದಾಗುವುದಿಲ್ಲ. ಇದನ್ನು  ಅರಿತು ಶಿಬಿರಗಳನ್ನು ಏರ್ಪಡಿಸಲಾಗುತ್ತಿದೆ ಎಂದರು.

 

Davanagere: ಹೊರಗುತ್ತಿಗೆ ಪದ್ಧತಿ ರದ್ದುಗೊಳಿಸಲು ಒತ್ತಾಯಿಸಿ ಪ್ರತಿಭಟನೆ

ಸಂಸ್ಥೆ 2019 ರಲ್ಲಿ ಪ್ರಾರಂಭವಾಗಿದ್ದು, ಇಲ್ಲಿ ಸಮಗ್ರ ಕ್ಯಾನ್ಸರ್ ಚಿಕಿತ್ಸೆಯನ್ನು ನೀಡುತ್ತಾ ಬಂದಿದ್ದು, ಅದರಲ್ಲಿ ಸ್ತನ ಕ್ಯಾನ್ಸರ್, ಗರ್ಭಕೋಶ ಕ್ಯಾನ್ಸರ್, ಗುದ ಕ್ಯಾನ್ಸರ್, ಅನ್ನನಾಳ ಕ್ಯಾನ್ಸರ್, ಕಿಡ್ನಿ ಕ್ಯಾನ್ಸರ್, ಬಾಯಿ ಮತ್ತು ಕುತ್ತಿಗೆ, ಗಂಟಲು ಕ್ಯಾನ್ಸರ್‌ಗಳು ಸೇರಿದಂತೆ ಸರ್ಜರಿ, ಕೀಮೋ ಥೆರಪಿ, ಅತ್ಯಾಧುನಿಕ ರೆಡಿಯೇಷನ್‌ ಸೌಲಭ್ಯವಿದ್ದು, ಇದರಲ್ಲಿ ಸರ್ಕಾರ ಬಿ.ಪಿ.ಎಲ್.ಕಾರ್ಡ್, ಇ.ಎಸ್.ಐ. ಮತ್ತು ಎಲ್ಲಾ ತರಹದ ಖಾಸಗಿ ಇನ್ಸುರೆನ್ಸ್ ಒಳಗೊಂಡಂತೆ ಇನ್ನು ಅನೇಕ ತರಹದ ಚಿಕಿತ್ಸೆಯನ್ನು ನೀಡುತ್ತಿದ್ದೇವೆ ಎಂದರು. ಸುದ್ದಿಗೋಷ್ಠಿಯಲ್ಲಿ ಸರ್ಜಿಕಲ್‌ ಅಂಕೋಲಜಿ ಡಾ. ಸಿ.  ಅಜೇಯ್ ಪ್ರಾತ್ಯಕ್ಷಿಕೆ ನೀಡಿದರು., ಡಾ. ವಿಘ್ನೇಶ್ ಉಪಸ್ಥಿತರಿದ್ದರು.

Follow Us:
Download App:
  • android
  • ios