ಕೋಲಾರದಲ್ಲಿ ಉಚಿತ ಫ್ಯಾಷನ್ ಡಿಸೈನಿಂಗ್ ತರಬೇತಿಗಾಗಿ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ. ಎಸ್‌ಎಸ್‌ಎಲ್‌ಸಿ ಮೇಲ್ಪಟ್ಟು ಹಾಗೂ ತಾಂತ್ರಿಕತೆಯಲ್ಲಿ ವಿದ್ಯಾಭ್ಯಾಸ ಮಾಡಿರುವ ಪರಿಶಿಷ್ಟಜಾತಿ ಹಾಗೂ ಪಂಗಡದ ಮಹಿಳಾ ಪಲಾನುಭಾವಿಗಳಿಗೆ 21 ದಿನಗಳ ಫ್ಯಾಶನ್ ಡಿಸೈನ್‌ಗೆ ಸಂಬಂಧಿಸಿದ ಉದ್ಯಮಶೀಲತಾ ಕೌಶಲ್ಯ ಅಭಿವೃದ್ಧಿ ತರಬೇತಿ ನೀಡಲಾಗುತ್ತದೆ.
ಚಿಕ್ಕಬಳ್ಳಾಪುರ(ಆ.02): ಅವೇಕ್ ಸಂಸ್ಥೆ ಸೂಕ್ಷ್ಮ ಮತ್ತು ಸಣ್ಣ ಮಧ್ಯಮ ಕೈಗಾರಿಕಾ ನಿರ್ದೇಶನಾಲಯ ಜಿಲ್ಲಾ ಕೈಗಾರಿಕಾ ಕೇಂದ್ರದ ಪ್ರಾಯೋಜಕತ್ವದ್ದಲ್ಲಿ ಸ್ವಂತ ಉದ್ಯಮ ಪ್ರಾರಂಭ ಮಾಡಲು ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.
ಎಸ್‌ಎಸ್‌ಎಲ್‌ಸಿ ಮೇಲ್ಪಟ್ಟು ಹಾಗೂ ತಾಂತ್ರಿಕತೆಯಲ್ಲಿ ವಿದ್ಯಾಭ್ಯಾಸ ಮಾಡಿರುವ ಪರಿಶಿಷ್ಟಜಾತಿ ಹಾಗೂ ಪಂಗಡದ ಮಹಿಳಾ ಪಲಾನುಭಾವಿಗಳಿಗೆ 21 ದಿನಗಳ ಫ್ಯಾಶನ್ ಡಿಸೈನ್‌ಗೆ ಸಂಬಂಧಿಸಿದ ಉದ್ಯಮಶೀಲತಾ ಕೌಶಲ್ಯ ಅಭಿವೃದ್ಧಿ ತರಬೇತಿಯನ್ನು ಆ.20 ರವರೆಗೆ ಜಿಲ್ಲಾ ಸಾಂತ್ವನ ಮಹಿಳಾ ಸಹಾಯವಾಣಿ ಕೇಂದ್ರದಲ್ಲಿ ಏರ್ಪಡಿಸಲಾಗುವುದು.
ಬ್ರೇಕ್ ಕೆ ಬಾದ್; ಉದ್ಯೋಗಕ್ಕೆ ಮರಳಲು ಹೀಗೆ ತಯಾರಿ ನಡೆಸಿ!
ತರಬೇತಿಯಲ್ಲಿ ಫ್ಯಾಶನ್ ಡಿಸೈನ್‌ಗೆ ಸಂಬಂಧಿಸಿದ ಉದ್ಯಮಶೀಲತಾ ವಿಷಯಗಳಿಗೆ ಸಂಬಂಧಿಸಿ ತರಬೇತಿ ನೀಡಲಾಗುವುದು. ಮಾಹಿತಿಗಾಗಿ ಜಿಲ್ಲಾ ಸಾಂತ್ವನ ಮಹಿಳಾ ಸಹಾಯವಾಣಿ ಕೇಂದ್ರ, ರೈಲ್ವೆ ಸ್ಟೇಷನ್ ಮುಂಭಾಗ, ಚಾಮರಾಜಪೇಟೆ, ಚಿಕ್ಕಬಳ್ಳಾಪುರ ಸದಾಶಿವ- 9880041360, 08156 27119 ಸಂಪರ್ಕಿಸಬಹುದು.
