Asianet Suvarna News Asianet Suvarna News

ಕೊಪ್ಪಳ : ಜನರ ಅನುಕೂಲಕ್ಕಾಗಿ ಜಿಲ್ಲಾಡಳಿತದಿಂದ ಉಚಿತ ಬಸ್ ಸೇವೆ

ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತದಿಂದ ಉಚಿತ ಬಸ್ ಸೇವೆ ಕಲ್ಪಿಸಿ ಜಿಲ್ಲಾಡಳಿತ ಸೂಚನೆ ನೀಡಿದೆ.  ಅಲ್ಲದೇ ಹೆಚ್ಚುವರಿ ಬಸ್ ಸೌಲಭ್ಯವನ್ನೂ ಕಲ್ಪಿಸಲಾಗಿದೆ. 

Free Bus Service To Koppal Anegundi Utsav
Author
Bengaluru, First Published Jan 5, 2020, 2:58 PM IST

ಕೊಪ್ಪಳ (ಜ.05): ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗೊಂದಿ ಉತ್ಸವಕ್ಕೆ ಭಾಗವಹಿಸಲು ಅನುಕೂಲವಾಗುವಂತೆ ಸಾರ್ವಜನಿಕರ ಪ್ರಯಾಣಕ್ಕೆ ಉಚಿತ ಮತ್ತು ಹೆಚ್ಚುವರಿ ಬಸ್‌ಗಳ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಆನೆಗೊಂದಿ ಉತ್ಸವ ಸಮಿತಿ ಅಧ್ಯಕ್ಷ ಹಾಗೂ ಜಿಲ್ಲಾಧಿಕಾರಿ ಪಿ.ಸುನೀಲ್‌ಕುಮಾರ್ ತಿಳಿಸಿದ್ದಾರೆ. 

ಜ. 9 ಮತ್ತು 10 ರಂದು ನಡೆಯಲಿರುವ ಉತ್ಸವಕ್ಕೆ ಆಗಮಿಸುವ ಸಾರ್ವಜನಿಕರ ಪ್ರಯಾಣಕ್ಕೆ 14 ಉಚಿತ ಬಸ್ ಗಳ ವ್ಯವಸ್ಥೆ ಮಾಡಲಾಗಿದೆ. ಉತ್ಸವ ಮುಕ್ತಾ ಯದ ವರೆಗೆ ಕಡೇಬಾಗಿಲುದಿಂದ ಆನೆಗೊಂದಿಗೆ, ಅಂಜನಾದ್ರಿಯಿಂದ ಆನೆಗೊಂದಿಗೆ ಪ್ರತಿ 10 ನಿಮಿಷಕ್ಕೆ ಒಂದರಂತೆ ತಲಾ 3 ಬಸ್‌ಗಳಂತೆ ವ್ಯವಸ್ಥೆ ಮಾಡಲಾಗಿದೆ. ಕೊಪ್ಪಳದಿಂದ ಆನೆಗೊಂದಿಗೆ ಪ್ರತಿ ಒಂದೂವರೆ ಗಂಟೆಗೆ ಒಂದರಂತೆ 4 ಬಸ್‌ಗಳನ್ನು ಹಾಗೂ ಗಂಗಾವತಿಯಿಂದ  ಆನೆಗೊಂದಿಗೆ ಪ್ರತಿ 30 ನಿಮಿಷಕ್ಕೆ ಒಂದರಂತೆ 4 ಬಸ್‌ಗಳ ಕಲ್ಪಿಸಲಾಗಿದೆ ಎಂದರು.

ಮದ್ಯ ಮಾರಾಟ ನಿಷೇಧ : ಜಿಲ್ಲಾಧಿಕಾರಿ ಆದೇಶ...

ಉಚಿತ ಬಸ್ ಗಳ ಸೇವೆ ಹೊರತುಪಡಿಸಿ ಸಮಾರಂಭ ಮುಕ್ತಾಯವಾದ ಆನಂತರ ಆನೆಗೊಂದಿಯಿಂದ ಸಾರ್ವ ಜನಿಕರ ಸೌಲಭ್ಯಕ್ಕಾಗಿ ಕೊಪ್ಪಳ, ಕುಷ್ಟಗಿ, ಕನಕಗಿರಿ, ಕಾರಟಗಿ, ಯಲಬುರ್ಗಾ, ಹೊಸ ಪೇಟೆ, ಕುಕನೂರ ಕಡೆಗೆ ಅವಶ್ಯಕತೆಗೆ ಅನುಗುಣವಾಗಿ ಹೆಚ್ಚುವರಿ ಬಸ್ ಸೌಲಭ್ಯವನ್ನು ಟಿಕೆಟ್ ಪಡೆದು ಪ್ರಯಾಣಿಸಲು ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow Us:
Download App:
  • android
  • ios