ಮುಷ್ಕರ ಕೊನೆಯಾಗುವವರೆಗೂ ಈ ಬಸ್ ಓಡಾಟ| ಶ್ರೀ ಸಿದ್ಧೇಶ್ವರ ಶಿಕ್ಷಣ ಸಂಸ್ಥೆಯ ಪಾಟೀಲ ಕಾನ್ವೆಂಟ್ ಶಾಲೆಯಿಂದ ರೋಗಿಗಳಿಗೆ ಉಚಿತ ಬಸ್ ಸೇವೆ| ಪ್ರತಿದಿನ ಬೆಳಗ್ಗೆ 10ಗಂಟೆಯಿಂದ ಸಂಜೆ 6ರವರೆಗೆ ಈ ಸಾರಿಗೆ ಸೇವೆ ಲಭ್ಯ|
ಹುಬ್ಬಳ್ಳಿ(ಏ.10): ಸಾರಿಗೆ ನೌಕರರ ಮುಷ್ಕರದಿಂದಾಗಿ ಕಿಮ್ಸ್‌ಗೆ ಬರುವ ರೋಗಿಗಳಿಗೆ ಸಮಸ್ಯೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಇಲ್ಲಿನ ಶ್ರೀ ಸಿದ್ಧೇಶ್ವರ ಶಿಕ್ಷಣ ಸಂಸ್ಥೆಯ ಪಾಟೀಲ ಕಾನ್ವೆಂಟ್ ಶಾಲೆಯಿಂದ ಸಿಬಿಟಿಯಿಂದ ಕಿಮ್ಸ್‌ವರೆಗೆ ಉಚಿತ ಬಸ್ ಸೇವೆಯನ್ನು ಶುಕ್ರವಾರದಿಂದ ಪ್ರಾರಂಭಿಸಲಾಗಿದೆ.
ಪ್ರತಿದಿನ ಬೆಳಗ್ಗೆ 10ಗಂಟೆಯಿಂದ ಸಂಜೆ 6ರವರೆಗೆ ಈ ಸಾರಿಗೆ ಸೇವೆ ಲಭ್ಯವಿದೆ. ಆಸ್ಪತ್ರೆಗೆ ತೆರಳುವವ ರೋಗಿಗಳು, ಸಿಬಿಟಿ, ಚೆನ್ನಮ್ಮ ವೃತ್ತ, ಹಳೇ ಬಸ್ ನಿಲ್ದಾಣ, ಹೊಸೂರು ಸರ್ಕಲ್, ಹೊಸೂರು ಬಸ್ ನಿಲ್ದಾಣಗಳಿಂದ ಸೇವೆ ಪಡೆದುಕೊಳ್ಳಬಹುದಾಗಿದೆ.
4ನೇ ದಿನಕ್ಕೆ ಸಾರಿಗೆ ಮುಷ್ಕರ: ಖಾಸಗಿ ಬಸ್ಸುಗಳ ದರ್ಬಾರ್, KSRTC ಸಿಬ್ಬಂದಿ ಅಮಾನತು
ಸಾರಿಗೆ ನೌಕರರ ಮುಷ್ಕರ ಕೊನೆಗೊಳ್ಳುವವರೆಗೂ ಸಿಬಿಟಿಯಿಂದ ಕಿಮ್ಸ್ ಆಸ್ಪತ್ರೆವರೆಗೆ ಉಚಿತ ಬಸ್ ಸಂಚಾರ ನೀಡಲಾಗುತ್ತದೆ. ಬೇರೆ, ಬೇರೆ ಜಿಲ್ಲೆ, ತಾಲೂಕುಗಳಿಂದ ಬರುವ ರೋಗಿಗಳಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಈ ಸೇವೆ ಸಲ್ಲಿಸಲಾಗುತ್ತಿದೆ ಎಂದು ಪಾಟೀಲ ಕಾನ್ವೆಂಟ್ ಶಾಲೆಯ ಸಂಸ್ಥಾಪಕ ಶಿವನಗೌಡ ರುದ್ರಗೌಡ ಪಾಟೀಲ ತಿಳಿಸಿದ್ದಾರೆ.
