Asianet Suvarna News Asianet Suvarna News

ಕೊಪ್ಪಳದಲ್ಲಿ ವಿಂಡ್‌ಮಿಲ್‌ ಕಂಪೆನಿಗಳಿಂದ ರೈತರಿಗೆ ವಂಚನೆ ?

ತಾಲೂಕಿನ ನಾನಾ ಗ್ರಾಮಗಳಲ್ಲಿ ವಿಂಡ್‌ಮಿಲ್‌ (ವಿದ್ಯುತ್‌ ಉತ್ಪಾದನೆ) ನಿರ್ಮಾಣ ಆಗುತ್ತಿದ್ದು, ವಿದ್ಯುತ್‌ ಉತ್ಪಾದನೆ ವಿಂಡ್‌ಮೀಲ್‌ಗಳ ಸುತ್ತಲೂ ವಂಚನೆ ಆರೋಪ ಕೇಳಿ ಬರುತ್ತಿದೆ!

Fraud to farmers by windmill companies at koppal district rav
Author
First Published Jul 8, 2023, 10:57 AM IST

ಕುಕನೂರು (ಜು.8)  ತಾಲೂಕಿನ ನಾನಾ ಗ್ರಾಮಗಳಲ್ಲಿ ವಿಂಡ್‌ಮಿಲ್‌ (ವಿದ್ಯುತ್‌ ಉತ್ಪಾದನೆ) ನಿರ್ಮಾಣ ಆಗುತ್ತಿದ್ದು, ವಿದ್ಯುತ್‌ ಉತ್ಪಾದನೆ ವಿಂಡ್‌ಮೀಲ್‌ಗಳ ಸುತ್ತಲೂ ವಂಚನೆ ಆರೋಪ ಕೇಳಿ ಬರುತ್ತಿದೆ!

ತಾಲೂಕಿನ ಸಮಾನ ಮನಸ್ಕ ರೈತ ಬಳಗ ಹಾಗು ರೈತ ವರ್ಗ ಹಾಗು ಶಾಸಕ ಬಸವರಾಜ ರಾಯರಡ್ಡಿ ರಾಜ್ಯ ಇಂಧನ ಸಚಿವ ಕೆ.ಜೆ ಜಾಜ್‌ರ್‍ ಅವರಿಗೆ ಈ ಕುರಿತು ಪರಿಶೀಲಿಸಿ ಕ್ರಮ ತೆಗೆದುಕೊಳ್ಳುವಂತೆ ಮನವಿ ಸಲ್ಲಿಸಿದ್ದಾರೆ.

ಎಲ್ಲೆಲ್ಲಿವೆ ವಿಂಡ್‌ಮಿಲ್‌:

ಕುಕನೂರು ತಾಲೂಕಿನ ಬಿನ್ನಾಳ, ಚಿಕೇನಕೊಪ್ಪ, ಯರೇಹಂಚಿನಾಳ, ರಾಜೂರು, ದ್ಯಾಂಪೂರು, ಕುಕನೂರು, ಆಡೂರು, ಯಲಬುಗಾ ತಾಲೂಕಿನ ತೊಂಡಿಹಾಳ, ಬಂಡಿಹಾಳ, ಸಂಗನಹಾಳ ಸುತ್ತಮುತ್ತಲ ಗ್ರಾಮಗಳ ಜಮೀನುಗಳಲ್ಲಿ ದೊಡ್ಡ ದೊಡ್ಡ ಗಾತ್ರದ ವಿಂಡ್‌ಮಿಲ್‌ಗಳು ಸದ್ಯ ಸ್ಥಾಪನೆಯಾಗಿವೆ.

Karnataka budget 2023: ಕೊಪ್ಪಳದಲ್ಲಿ ತಲೆ ಎತ್ತಲಿದೆ ಜಾನಪದ ಲೋಕ!

ಸುಮಾರು ನೂರಕ್ಕೂ ಹೆಚ್ಚು ವಿಂಡ್‌ಮಿಲ್‌ಗಳ ಸ್ಥಾಪನೆ ಆಗಿದೆ ಹಾಗೂ ಇನ್ನೂ ವಿಂಡ್‌ಮಿಲ್‌ಗಳ ನಿರ್ಮಾಣ ಆಗುತ್ತಿವೆ. ರೈತರ ಜಮೀನುಗಳಿಗೆ ಹಣದ ಆಸೆ ತೋರಿಸಿ ರೈತರಿಂದ ದಲ್ಲಾಳಿಗಳು ಜಮೀನು ಖರೀದಿ ಮಾಡಿ ವಿಂಡ್‌ಮಿಲ್‌ಗಳ ಸ್ಥಾಪನೆ ಮಾಡಿರುವ ಆರೋಪಗಳು ಸದ್ಯ ಕೇಳಿ ಬರುತ್ತಿವೆ.

ಮಧ್ಯವರ್ತಿಗಳ ಹಾವಳಿ:

ಒಂದು ವಿಂಡ್‌ಮಿಲ್‌ ನಿರ್ಮಾಣಕ್ಕೆ ರೈತರಿಂದ 36 ಗುಂಟೆ ಜಮೀನು ಖರೀದಿ ಆಗಿದೆ. 36 ಗುಂಟೆಗೆ ರೈತರಿಗೆ ಬರೀ .8 ರಿಂದ .12ಲಕ್ಷ ಹಣ ನೀಡಿದ್ದಾರೆ. ಖರೀದಿಸಿದ ಜಮೀನು ಎನ್‌ಎ ಮಾಡಿ, ಆಯಾ ಗ್ರಾಮದ ಗ್ರಾಪಂಗಳಲ್ಲಿ ನೋಂದಣಿ ಆಗಬೇಕು. ಇದರಿಂದ ಗ್ರಾಪಂಗಳಿಗೂ ತೆರಿಗೆ ಹಣ ಬರುತ್ತದೆ. ಜಮೀನು ಖರೀದಿ ಮಾಡಿ, ಕಮರ್ಷಿಯಲ್‌ ಎನ್‌ಎ ಆದರೆ ಮಾತ್ರ ವಿಂಡ್‌ಮಿಲ್‌ ಸ್ಥಾಪನೆಗೆ ಅವಕಾಶ ನೀಡಬೇಕು. ಅಲ್ಲದೆ 30 ವರ್ಷಕ್ಕೆ ಎಂದು 4.4 ಎಕರೆ ಜಮೀನನ್ನು ಪ್ರತಿ ವರ್ಷಕ್ಕೆ ಇಂತಿಷ್ಟುಬಾಡಿಗೆ ರೂಪದಲ್ಲಿ ಕಂಪನಿಗಳು ಪಡೆದಿವೆ. ಅದು ಮಧ್ಯವರ್ತಿಗಳ ಮೂಲಕ. ಇದರಿಂದ ಕಂಪನಿ ಮೂಲ ದರ ಸಹ ಸಿಕ್ಕಿಲ್ಲ ಎಂಬುದು ರೈತರ ಆರೋಪ. ಇಲ್ಲಿ ನಿಯಮ ಗಾಳಿಗೆ ತೂರಿ ಐದು ಎಕರೆ ಪ್ರದೇಶದಲ್ಲಿ ವಿಂಡ್‌ಮಿಲ್‌ ನಿರ್ಮಾಣ ಮಾಡಿದ್ದಾರೆ ಎಂದು ದೂರಿನಲ್ಲಿ ರೈತರು ತಿಳಿಸಿದ್ದಾರೆ.

ರಾಯರಡ್ಡಿ ಪತ್ರ:

ಮೆ.ರೇನಿಲ್‌ ಪಾವರ್‌ ಲಿಮಿಟೆಡ್‌ ಕಂಪನಿ ಹಾಗು ಅದರ ಅಂಗ ಸಂಸ್ಥೆಗಳು ರೈತರ ಜಮೀನಿನಲ್ಲಿ ವಿಂಡ್‌ಮಿಲ್‌ ಸ್ಥಾಪಿಸಿವೆ. ರೈತರ ಭೂಮಿ ಖರೀದಿ ವೇಳೆ ಕಂಪನಿಗಳು ಯಾವುದೇ ಮಾನದಂಡ ಅನುಸರಿಸಿಲ್ಲ. ವಿಂಡ್‌ಮಿಲ್‌ ಸುಮಾರು 150 ಮೀಟರ್‌ ಎತ್ತರವಿದ್ದು, 5 ರಿಂದ 8 ಮೀಟರ್‌ ಅಗಲ.165 ಮೀಟರ್‌ ಉದ್ದದ ಮೂರು ರೆಕ್ಕೆಗಳಿವೆ. ಇದರ ನೆರಳು ಸಹ 700 ಮೀಟರ್‌ ಉದ್ದ ಬೀಳುತ್ತದೆ. ವಿಂಡ್‌ ಮಿಲ್‌ ರೆಕ್ಕೆಗಳ ನೆರಳಿನಿಂದ ರೈತರ ಬೆಳೆಗಳಿಗೂ ತೊಂದರೆಯಾಗುತ್ತಿದೆ. ಇದರ ಬಗ್ಗೆ ಸೂಕ್ತ ಕ್ರಮ ತೆಗದುಕೊಳ್ಳಬೇಕು ಎಂದು ಶಾಸಕ ಬಸವರಾಜ ರಾಯರಡ್ಡಿ ಇಂಧನ ಸಚಿವ ಕೆ.ಜೆ ಜಾಜ್‌ರ್‍ ಅವರಿಗೆ ಪತ್ರ ಬರೆದಿದ್ದಾರೆ.

Karnataka budget 2023: ಉತ್ತರ ಕರ್ನಾಟಕಕ್ಕೆ ಮತ್ತೊಮ್ಮೆ ನಿರಾಸೆ, ಹೇಳಿಕೊಳ್ಳುವಂಥ ಯೋಜನೆ ಇಲ್ಲ

ತಾಲೂಕಿನ ಜಮೀನುಗಳಲ್ಲಿ ವಿಂಡ್‌ಮಿಲ್‌ ಸ್ಥಾಪನೆ ಹೆಸರಿನಲ್ಲಿ ರೈತರಿಗೆ ವಂಚನೆ ಜರುಗಿದೆ. ಕಂಪನಿಯವರು ನೇರವಾಗಿ ರೈತರ ಸಂಪರ್ಕಕ್ಕೆ ಬಾರದೆ ಮಧ್ಯವರ್ತಿಗಳ ಮೂಲಕ ಸಂಪರ್ಕಿಸಿ ರೈತರಿಗೆ ಮೋಸ ಮಾಡುತ್ತಿದ್ದಾರೆ. ಈಗಾಗಲೇ ನೂರಾರು ರೈತರು ಮಧ್ಯವರ್ತಿಗಳ ಮೋಸಕ್ಕೆ ಬಲಿಯಾಗಿದ್ದಾರೆ. ವಿಂಡ್‌ಮಿಲ್‌ ಸ್ಥಾಪನೆಯಿಂದ ರೈತರ ಜಮೀನು, ರೈತರ ಜಮೀನಿಗೆ ತೆರಳುವ ರಸ್ತೆಗಳು ಸಂಪೂರ್ಣ ಹದಗೆಟ್ಟಿವೆ. ಇದರಿಂದ ಬೆಳೆಗಳ ಮೇಲೂ ಪರಿಣಾಮ ಬೀರಲಿದೆ. ಇವುಗಳ ಬಗ್ಗೆ ತನಿಖೆ ಆಗಬೇಕು ಎಂದು ಇಂಧನ ಸಚಿವರಿಗೆ ದೂರು ನೀಡಿದ್ದೇವೆ.

ಭೀಮರೆಡ್ಡಿ ಶ್ಯಾಡ್ಲಗೇರಿ, ಮಹೇಂದ್ರ ಗದಗ, ಮಲ್ಲಿಕಾರ್ಜುನ ಗಡಗಿ, ಬಸವರೆಡ್ಡಿ ವಕ್ಕಳದ, ಸಮಾನ ಮನಸ್ಕ ರೈತ ಬಳಗದವರು.

Follow Us:
Download App:
  • android
  • ios