ಗದಗ(ಡಿ.03):  ಕುಡಿತ ಮತ್ತಿ​ನಲ್ಲಿ ನಾಲ್ವರು ಯುವ​ಕ​ರು ಪೊಲೀ​ಸ​ರೊಂದಿಗೆ ವಾಗ್ವಾದ ನಡೆ​ಸಿ​ ಧಮಕಿ ಹಾಕಿದ ಘಟನೆ ಬುಧ​ವಾರ ಸಂಜೆ ನಗ​ರದ ರಿಂಗ್‌ ರೋಡ್‌ ಬಳಿ ನಡೆ​ದಿ​ದೆ.

ಹುಬ್ಬ​ಳ್ಳಿಯ ಮೂಲದ ಅಖೀಲ್‌ (20), ರಾಹುಲ್‌ (18), ಗದಗ ನಿವಾ​ಸಿ​ಗ​ಳಾದ ಪ್ರತೀಕ್‌ (18), ಪ್ರಮೋದ್‌ (25) ಕುಡಿದ ಮತ್ತಿ​ನಲ್ಲಿ ಪೊಲೀ​ಸ​ರಿಗೆ ಅವ್ಯಾಚ್ಯ ಶಬ್ದ​ಗ​ಳಿಂದ ನಿಂದಿ​ಸಿ​ದ್ದಾರೆ. ಇದ​ರಲ್ಲಿ ಓರ್ವ ಯುವಕ ಹುಬ್ಬ​ಳ್ಳಿಗೆ ಬನ್ನಿ ನೋಡಿ​ಕೊ​ಳ್ಳು​ತ್ತೇನೆ ಎಂದು ಧಮಕಿ ಹಾಕಿ​ದ್ದಾನೆ. ರಸ್ತೆ​ಯಲ್ಲಿ ರಂಪಾಟ ನೋಡಿದ ಪೊಲೀ​ಸರು ಚಿತ್ರೀಕ​ರ​ಣಕ್ಕೆ ಮುಂದಾ​ದಾಗ ಮೊಬೈಲ್‌ ಕಿತ್ತು​ಕೊ​ಳ್ಳಲು ಮುಂದಾ​ಗಿ​ದ್ದಾರೆ. 

ಕೊರೋನಾ: 45 ದಿನ​ಗ​ಳಿಂದ ಈ ಜಿಲ್ಲೆಯಲ್ಲಿ ಒಂದೂ ಸಾವಿ​ಲ್ಲ..!

ವಿಷಯ ತಿಳಿ​ಯು​ತ್ತಿ​ದ್ದಂತೆ ಹೆಚ್ಚಿನ ಸಂಖ್ಯೆ​ಯಲ್ಲಿ ಪೊಲೀ​ಸರು ಸ್ಥಳ​ಕ್ಕಾ​ಗ​ಮಿಸಿ ನಾಲ್ವ​ರನ್ನು ವಶಕ್ಕೆ ಪಡೆದು ಗದಗ ಶಹರ ಠಾಣೆಗೆ ಕರೆ​ದು​ಕೊಂಡು ಹೋಗಿ​ ಆರೋಗ್ಯ ತಪಾ​ಸಣೆ ನಡೆ​ಸಿ​ದ್ದಾರೆ. ಇವರ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖ​ಲಿ​ಸು​ವಂತೆ ಜಿಲ್ಲಾ ಪೊಲೀಸ್‌ ವರಿ​ಷ್ಠಾ​ಧಿ​ಕಾರಿ ಪೊಲೀ​ಸ​ರಿಗೆ ಸೂಚಿ​ಸಿ​ದ್ದಾರೆ.