ಮಂಡ್ಯ: ವಿಷ ಕುಡಿದು, ಕಾರಿನಲ್ಲಿ ಒದ್ದಾಡುತ್ತಿದ್ದ ಬೆಂಗಳೂರು ಮೂಲದ ಕುಟುಂಬಕ್ಕೆ ಪೇದೆಯೊಬ್ಬರು ನೆರವಾಗಿದ್ದು, ಶ್ರೀರಂಗಪಟ್ಟಣ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬೆಂಗಳೂರು ಮೂಲದ ಮರೀಗೌಡ, ಪತ್ನಿ ರಜಿನಿ ಹಾಗೂ ಮಕ್ಕಳಾದ ಚಂದ್ರಶೇಖರ್ ಮತ್ತು ಚೇತನ್ ವಿಷ ಸೇವಿಸಿದ್ದರು. ಹೊಸೂರು ಗೇಟೆ ಬಳಿ ಪೊಲೀಸ್ ತಂಗುದಾಣದ ಎದುರು ಕಾರಿನಲ್ಲಿ ವಿಷ ಸೇವಿಸಿದ ಈ ನಾಲ್ವರು ಚೀರಾಡುತ್ತಿದ್ದರು. ಸಾಲಬಾಧೆ ತಾಳಲಾಗದೇ ತಾವು ವಿಷ ಸೇವಿಸಿದ ದಂಪತಿ ಮಕ್ಕಳಿಗೂ ವಿಷವುಣಿಸಿದ್ದರು.

ನೋವಿನಿಂದ ಚೀರಾಡುತ್ತಿದ್ದ ಮಗುವನ್ನು ದಂಪತಿ ಕಾರಿನಿಂದ ಹೊರ ತಳ್ಳಿದ್ದರು. ಈ ಎಲ್ಲರ ಕಿರುಚಾಟ ಕೇಳಿದ ಪೇದೆ ನಂಜುಂಡ ಸ್ಥಳೀಯರ ಸಹಾಯದಿಂದ ನಾಲ್ವರನ್ನೂ ಆಸ್ಪತ್ರೆಗೆ ಸೇರಿಸಿದ್ದಾರೆ.