Asianet Suvarna News Asianet Suvarna News

ಚಿರತೆ ಓಡಿಸಲು ಹಾರಿಸಿದ ಗುಂಡು ತಗುಲಿ ನಾಲ್ವರು ರೈತರಿಗೆ ಗಾಯ: ಪ್ರಾಣಾಪಾಯದಿಂದ ಪಾರು

ಗಡಿನಾಡು ಚಾಮರಾಜನಗರದಲ್ಲಿ ಮಾನವ ಕಾಡು ಪ್ರಾಣಿ ಸಂಘರ್ಷ ದಿನ ಕಳೆದಂತೆ ಮಿತಿ ಮೀರುತ್ತಿದೆ. ಚಿರತೆಯ ಹಾವಳಿಗೆ ಬ್ರೇಕ್ ಹಾಕಲು ಬಂದ ಅರಣ್ಯ ಇಲಾಖೆಯ ಸಿಬ್ಬಂದಿಯೇ ಈಗ ರೈತರ ಪಾಲಿಗೆ ವಿಲನ್ ಆಗಿದ್ದಾರೆ. 

Four farmers were injured after being shot by a leopard at chamarajanagar gvd
Author
First Published Sep 20, 2024, 7:48 PM IST | Last Updated Sep 20, 2024, 7:48 PM IST

ವರದಿ: ಪುಟ್ಟರಾಜು.ಆರ್.ಸಿ., ಏಷಿಯಾನೆಟ್  ಸುವರ್ಣ ನ್ಯೂಸ್, ಚಾಮರಾಜನಗರ.

ಚಾಮರಾಜನಗರ (ಸೆ.20): ಗಡಿನಾಡು ಚಾಮರಾಜನಗರದಲ್ಲಿ ಮಾನವ ಕಾಡು ಪ್ರಾಣಿ ಸಂಘರ್ಷ ದಿನ ಕಳೆದಂತೆ ಮಿತಿ ಮೀರುತ್ತಿದೆ. ಚಿರತೆಯ ಹಾವಳಿಗೆ ಬ್ರೇಕ್ ಹಾಕಲು ಬಂದ ಅರಣ್ಯ ಇಲಾಖೆಯ ಸಿಬ್ಬಂದಿಯೇ ಈಗ ರೈತರ ಪಾಲಿಗೆ ವಿಲನ್ ಆಗಿದ್ದಾರೆ. ಚಿರತೆ ಸೆರೆ ಕಾರ್ಯಾಚರಣೆಗೆ ತೆರಳಿದ ರೈತರಿಗಾ ಆಸ್ಪತ್ರೆಯ ಪಾಲಾಗಿದ್ದಾರೆ. ಕಣ್ಣಾಡಿಸಿದ ಕಡೆಯಲ್ಲ ಬತ್ತದ ಗದ್ದೆ.. ಎತ್ತಿಗೆ ನೊಗ ಕಟ್ಟಿ ಕುಂಟೆ ಹೊಡೆಯುತ್ತಿರೊ ರೈತ ವರ್ಗ. ಮತ್ತೊಂದೆಡೆ ಜಮೀನುಗಳ ಪಕ್ಕದಲ್ಲೇ ಆಳೆತ್ತರಕ್ಕೆ ಬೆಳೆದು ನಿಂತಿರುವ ಗಿಡ ಗಂಟೆಗಳು.. ಹೀಗೆ ಪೂದೆಯತ್ತ ಕೈ ತೋರುತ್ತಾ ಅದೇನನ್ನ ಹೇಳುತ್ತಿರೊ ವ್ಯಕ್ತಿ. ಈ ಎಲ್ಲಾ ದೃಶ್ಯ ಕಣ್ಣಿಗೆ ರಾಚಿದ್ದು ಚಾಮರಾಜನಗರ ಜಿಲ್ಲೆ ಯಳಂದೂರು ತಾಲೂಕಿನ ಮಲ್ಲಿಗೆಹಳ್ಳಿ ಹೊರ ವಲಯದಲ್ಲಿ. 

ಬಿ.ಆರ್.ಟಿ ಹುಲಿ ಸಂರಕ್ಷಿತ ಪ್ರದೇಶ ಚಾಮರಾಜನಗರದ ಯಳಂದೂರು ವನ್ಯಜೀವಿ ವಲಯದ ವ್ಯಾಪ್ತಿಯ ಯಳಂದೂರು ತಾಲ್ಲೊಕು ಮದ್ದೂರು ಗ್ರಾಮದ ಎಳೆ ಪಿಳ್ಳಾರಿ ದೇವಸ್ಥಾನದಿಂದ ಮಲ್ಲಿಗೆ ಹಳ್ಳಿಗೆ ಹೋಗುವ ಚಾನಲ್ ರಸ್ತೆಯ ಬಳಿ ಒಂದು ಗಂಡು ಚಿರತೆ ಕಾಣಿಸಿಕೊಂಡ ಮಾಹಿತಿಯನ್ನು ತಿಳಿದ ಅರಣ್ಯ ಸಿಬ್ಬಂದಿ ಕಾರ್ಯಚರಣೆ ನಡೆಸಿದ್ದರು  ನಿನ್ನೆ ನಡೆದ ಚಿರತೆ ಕೂಂಬಿಂಗ್ ಈಗ ಜಿಲ್ಲಾದ್ಯಂತ ಬಾರೀ ಚರ್ಚೆಯಾಗ್ತಯಿದೆ ಇದಕ್ಕೆ ಕಾರಣ ಅರಣ್ಯ ಇಲಾಖಾ ಸಿಬ್ಬಂದಿ ಮಾಡಿದ ಎಡವಟ್ಟು. ಚಿರತೆ ಸೆರೆ ಕಾರ್ಯಾಚರಣೆ ವೇಳೆ ಎಗರಿ ಬಂದ ಚಿರತೆ ಮೇಲೆ ಅರಣ್ಯ ಸಿಬ್ಬಂದಿ ಓಪನ್ ಫೈರ್ ಮಾಡಿದ್ದಾರೆ ಪರಿಣಾಮ ಗುಂಡಿನ ಚೂರುಗಳು ನಾಲ್ಕು ಮಂದಿ ರೈತರಿಗೆ ತಾಕಿ ಅವಾಂತರ ಸೃಷ್ಠಿಯಾಗಿದೆ.

ಆಗಿದ್ದಿಷ್ಟೆ ಮಲ್ಲಿಗೆ ಹಳ್ಳಿ ಯಳಂದೂರು ವ್ಯಾಪ್ತಿಯ ಊರ ಹೊರವಲಯದ ಜಮೀನುಗಳಲ್ಲಿ ಚಿರತೆ ಓಡಾಟವಿತ್ತು. ಆಗಾಗ ಗ್ರಾಮಕ್ಕೆ ಲಗ್ಗೆ ಇಡ್ತಾಯಿದ್ದ ಚಿರತೆ ಕೊಟ್ಟಿಗೆಗೆ ನುಗ್ಗಿ ದನಕರ ಹಾಗೂ ಕುರಿಯನ್ನ ಕೊಂದು ತಿಂದು ತೇಗುತ್ತಿತ್ತು. ಇದರಿಂದ ಬೇಸತ್ತಿದ್ದ ಗ್ರಾಮಸ್ಥರು ಚಿರತೆಯನ್ನ ಸೆರೆ ಹಿಡಿಯಲು ಅರಣ್ಯ ಇಲಾಖೆಗೆ ಮನವಿ ಮಾಡಿದ್ರು. ನಿನ್ನೆ ಸಹ ಊರ ಹೊರವಲಯದಲ್ಲಿ ಮತ್ತದೆ ಕ್ರೂರಿ ಚಿರತೆ ಕಾಣಿಸಿಕೊಂಡಿತ್ತು. ಈ ವಿಚಾರವನ್ನ ಗ್ರಾಮಸ್ಥರು ಅರಣ್ಯ ಇಲಾಖೆಗೆ ಸುದ್ದಿ ಮುಟ್ಟಿಸಿದ್ರು ಚಿರತೆ ಸೆರೆಗೆ ಆಗಮಿಸಿದ ಅರಣ್ಯ ಸಿಬ್ಬಂದಿ ಚಿರತೆಯನ್ನ ಪತ್ತೆ ಹಚ್ಚಿದ್ದಾರೆ ಈ ವೇಳೆ ಚಿರತೆ ಸಿಬ್ಬಂದಿಯ ಮೇಲೆ ದಾಳಿ ನಡೆಸಲು ಮುಂದಾಗಿದೆ. ಈ ಹಿನ್ನಲೆ ಗಾಬರಿಯಾದ ಅರಣ್ಯ ಸಿಬ್ಬಂದಿ ಗಾಳಿಯಲ್ಲಿ ಒಂದು ಸುತ್ತು ಓಪನ್ ಫೈರ್ ಮಾಡಿದ್ದಾರೆ. 

ಕುಮ್ಮಕ್ಕು ಕೊಟ್ಟು ಬೆಂಕಿ ಹಚ್ಚಲು ನಾಗಮಂಗಲಕ್ಕೆ ಬಂದಿಲ್ಲ: ಎಚ್‌ಡಿಕೆಗೆ ಚಲುವರಾಯಸ್ವಾಮಿ ತಿರುಗೇಟು

ಈ ಅಲ್ಲೇ ಇದ್ದ ಅರಣ್ಯ ಸಿಬ್ಬಂದಿ ಸೇರಿದಂತೆ ಶಿವು, ರಂಗಸ್ವಾಮಿ, ರವಿ ಹಾಗೂ ಮೂರ್ತಿಗೆ ಗುಂಡಿನ ಚೂರು ತಾಗಿದೆ. ತಕ್ಷಣವೇ ಅವರನ್ನ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ನೀಡಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಆದ್ರೆ ಈಗ ಸುಮಾರು 2-3 ವರ್ಷದ ಚಿರತೆ ಸಾವನ್ನಪ್ಪಿದೆ. ಚಿರತೆಯ ಸಾವಿಗೆ ಅರಣ್ಯ ಇಲಾಖಾ ಸಿಬ್ಬಂದಿ ಹಾರಿಸಿದ ಗುಂಡು ಕಾರಣನಾ ಇಲ್ಲಾ ಗ್ರಾಮಸ್ಥರ ಬಡಿಗಿ ಏಟು ಕಾರಣನಾ ಎಂಬ ಪ್ರಶ್ನೆ ಮೂಡುತ್ತಿದೆ. ಸೂಕ್ತ ತನಿಖೆಯಿಂದಷ್ಟೇ ಚಿರತೆ ಸಾವಿನ ಅಸಲಿಯತ್ತು ಬೆಳಕಿಗೆ ಬರ ಬೇಕಿದೆ. ಒಂದೆಡೆ ಚಿರತೆ ಸತ್ತ ಸುದ್ದಿ ಕೆಳಿ ಗ್ರಾಮಸ್ದರು ನಿಟ್ಟುಸಿರು ಬಿಟ್ರೆ ಇತ್ತ ಚಿರತೆ ತನ್ನದಲ್ಲದ ತಪ್ಪಿಗೆ ಪ್ರಾಣವನ್ನೆ ಕಳೆದು ಕೊಂಡಿದೆ.ಸದ್ಯ ಚಿರತೆಯ ಮರಣೋತ್ತರ ಪರೀಕ್ಷೆ ನಡೆಸಿರುವ ಅರಣ್ಯ ಸಿಬ್ಬಂದಿ ಚಿರತೆಯ ಶವ ಪರೀಕ್ಷೆ ನಡೆಸಿರುತ್ತಾರೆ.

Latest Videos
Follow Us:
Download App:
  • android
  • ios