ಯಾದಗಿರಿ: ಭೀಮಾನದಿಯಲ್ಲಿ ಈಜಲು ತೆರಳಿದ್ದ ನಾಲ್ವರು ಬಾಲಕರು ನಾಪತ್ತೆ
ನದಿಯಲ್ಲಿ ಈಜಲು ತೆರಳಿದ್ದ ಐವರು ಬಾಲಕರಲ್ಲಿ ನಾಲ್ವರು ನಾಪತ್ತೆ| ಯಾದಗಿರಿ ಜಿಲ್ಲೆ ವಡಗೇರಾ ತಾಲೂಕಿನ ಗುರುಸುಣಗಿ ಬಳಿ ನಡೆದ ಘಟನೆ| ಮೀನುಗಾರರ ತಂಡ ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿಯಿಂದ ಶೋಧ ಕಾರ್ಯ|
ಯಾದಗಿರಿ(ಸೆ.07): ಇಲ್ಲಿನ ಭೀಮಾನದಿಯಲ್ಲಿ ಭಾನುವಾರ ಮಧ್ಯಾಹ್ನ ಈಜಲು ತೆರಳಿದ್ದ ಐವರು ಬಾಲಕರಲ್ಲಿ ನಾಲ್ವರು ನಾಪತ್ತೆಯಾಗಿದ್ದಾರೆ.
ಯಾದಗಿರಿಗೆ ಸಮೀಪದ ವಡಗೇರಾ ತಾಲೂಕಿನ ಗುರುಸುಣಗಿ ಬಳಿ ಭೀಮಾ ನದಿಗೆ ನಗರದ ಅಜಿಜೀಯಾ ಕಾಲೋನಿ ಸ್ನೇಹಿತರ ಗುಂಪು ತೆರಳಿತ್ತು. ಯಾದಗಿರಿಯ ಅಮಾನ್ (16), ಅಯಾನ್(16), ರೆಹಮಾನ್ (16) ಹಾಗೂ ಕಲಬುರಗಿ ಮೂಲದ ರೆಹಮಾನ್ ನೀರಿನ ಸೆಳೆತದಲ್ಲಿ ನಾಪತ್ತೆಯಾದವರು.
ನನಸಾದ ಯಾದಗಿರಿ ಮೆಡಿಕಲ್ ಕಾಲೇಜು ಕನಸು
ಮೊಹ್ಮದ್ ಅಬ್ದುಲ್ ಎಂಬ ಬಾಲಕ ದಡದಲ್ಲಿ ನಿಂತು ಫೋಟೋ ತೆಗೆಯಲು ಯತ್ನಿಸುತ್ತಿದ್ದ ವೇಳೆ ನೀರು ಮುಳುಗುವುದನ್ನು ನೋಡಿ ಚೀರಾಡಿದ್ದಾನೆ. ಅಕ್ಕಪಕ್ಕದವರು ಬರುವಷ್ಟರಲ್ಲಿ ಬಾಲಕರು ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದರು. ಮೀನುಗಾರರ ತಂಡ ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ಶೋಧ ಕಾರ್ಯ ನಡೆಸುತ್ತಿದ್ದಾರೆ.