Asianet Suvarna News Asianet Suvarna News

‘ಬಾಬಾ ಸಾಹೇಬರನ್ನು ಒಂದು ಜಾತಿಗೆ ಸೀಮಿತ ಮಾಡಬೇಡಿ’

130 ಕೋಟಿ ಭಾರತೀಯರ ಶ್ರೇಯೋಭಿವೃದ್ಧಿ ಸಂವಿಧಾನದಲ್ಲಿ ಅಡಗಿದೆ| ಸಂವಿಧಾನ ಇದು ನಮ್ಮ ಗ್ರಂಥ ಎಂಬ ಭಾವನೆ ಪ್ರತಿಯೊಬ್ಬರಲ್ಲಿ ಬರಬೇಕು| ಭಗವದ್ಗೀತೆ, ವಚನಗಳು, ಖುರಾನ್, ಗುರು ಗ್ರಂಥ, ಬೈಬಲ್ ಗ್ರಂಥಗಳು ಆಯಾ ಸಮುದಾಯಗಳಿಗೆ ಮುಖ್ಯ | ಸಂವಿಧಾನ ಇಡೀ ದೇಶದ ಪ್ರತಿಯೊಬ್ಬರಿಗೂ ಅತ್ಯಂತ ಮಹತ್ವ| 371 (ಜೆ) ಕಲಂನಿಂದ ಈ ಭಾಗದ ವಿದ್ಯಾರ್ಥಿಗಳಿಗೆ, ಉದ್ಯೋಗಸ್ಥರು, ಅಭಿವೃದ್ಧಿಗೆ ಹೆಚ್ಚಿನ ಅನುದಾನ ಬರುತ್ತಿದೆ|

Former Union Minister Mallikarjun Kharge Talks Over Dr B R Ambedkar
Author
Bengaluru, First Published Mar 2, 2020, 3:21 PM IST

ಶಹಾಪುರ[ಮಾ.02]: ಅಂಬೇಡ್ಕರ್ ಅವರು ಒಂದು ಜಾತಿಗೆ ಸೀಮಿತವಾಗಿಲ್ಲ. ಒಂದೇ ಜಾತಿಗೋಸ್ಕರ ಅವರು ಕೆಲಸ ಮಾಡಿಲ್ಲ. ದೇಶದ ಪ್ರತಿಯೊಬ್ಬ ಜನತೆಯ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಿದ್ದಾರೆ. ಪ್ರತಿಯೊಬ್ಬ ಯುವಕರು ಅಂಬೇಡ್ಕರ್ ತತ್ವಗಳನ್ನು ಪಾಲಿಸಿ ಸಂವಿಧಾನದ ಆಶಯಗಳಂತೆ ನಡೆದರೆ, ದೇಶ ಸುಭಿಕ್ಷೆಯಾಗುವುದರಲ್ಲಿ ಸಂಶಯವಿಲ್ಲ ಎಂದು ಕೇಂದ್ರದ ಮಾಜಿ ಸಚಿವ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಡಾ. ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ. 

ತಾಲೂಕಿನ ಹತ್ತಿಗುಡೂರ ಗ್ರಾಮದಲ್ಲಿ ನೂತನವಾಗಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್‌ರ ಪುತ್ಥಳಿ ಲೋಕಾರ್ಪಣೆಗೊಳಿಸಿ, ನಂತರ ಆಯೋಜಿಸಿದ್ದ ಬಹಿರಂಗ ಸಭೆಗೆ ಚಾಲನೆ ನೀಡಿ ಮಾತನಾಡಿದ ಅವರು, ಭಗವದ್ಗೀತೆ, ವಚನಗಳು, ಖುರಾನ್, ಗುರು ಗ್ರಂಥ, ಬೈಬಲ್ ಗ್ರಂಥಗಳು ಆಯಾ ಸಮುದಾಯಗಳಿಗೆ ಮುಖ್ಯವಾಗಿವೆ. ಆದರೆ ಸಂವಿಧಾನ ಇಡೀ ದೇಶದ ಪ್ರತಿಯೊಬ್ಬರಿಗೂ ಅತ್ಯಂತ ಮಹತ್ವದಾಗಿದೆ. ಸಂವಿಧಾನ ಇದು ನಮ್ಮ ಗ್ರಂಥ ಎಂಬ ಭಾವನೆ ಇಡೀ ಭಾರತೀಯರಲ್ಲಿ ಬರಬೇಕು, ಬಾಬಾ ಸಾಹೇಬರನ್ನು ಒಂದು ಜಾತಿಗೆ ಸೀಮಿತ ಮಾಡಬೇಡಿ, ಈ ದೇಶಕ್ಕೆ ಸಾಮಾಜಿಕ ನ್ಯಾಯ ಕೊಟ್ಟವರು, ಜಾತಿ ನಿರ್ಮೂಲ ನೆಗಾಗಿ ದುಡಿದವರು, ಶೋಷಿತ ಸಮುದಾಯಕ್ಕೆ ಬೆಳಕಾದವರು. ಇಂತಹ ಮಹಾನ್ ಮಾನವತಾವಾ ದಿಯ ಪುತ್ಥಳಿಯನ್ನು ಸರ್ವ ಸಮಾಜದವರು ಒಗ್ಗೂಡಿ ಅತ್ಯಂತ ಶ್ರದ್ಧೆಯಿಂದ ಅನಾವರಣ ಕಾರ್ಯಕ್ರಮ ನೆರವೇರಿಸಿರುವುದು ಹತ್ತಿಗುಡೂರ ಗ್ರಾಮಕ್ಕೆ ಹೆಮ್ಮೆ ತರುವ ಸಂಗತಿ ಎಂದರು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಕಲ್ಯಾಣ ಕರ್ನಾಟಕ ಭಾಗಕ್ಕೆ 2000 ಕೋಟಿ ಅನುದಾನ ಹೈದ್ರಾಬಾದ್ ಕರ್ನಾಟಕ ಪ್ರದೇಶ ಈಗಿನ ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೆ ೨೦೦೦ ಕೋಟಿ ಅನುದಾನ ನೀಡುವಂತೆ, ಈ ಭಾಗದ ಸಂಸದರು ಹೆಚ್ಚು ಕಾಳಜಿ ತೆಗೆದುಕೊ ಳ್ಳಬೇಕು. ನಿಷ್ಕಾಳಜಿವಹಿಸಿದರೆ ವಹಿಸಿದರೆ ಅನುದಾನ ಬೇರೆಬೇರೆ ಜಿಲ್ಲೆಗಳಿಗೆ ಸೀಮಿತವಾ ಗುತ್ತದೆ, ಈ ಭಾಗದಲ್ಲಿ ನನೆಗುದಿಗೆ ಬಿದ್ದ ಕಾಮಗಾರಿ ಬಗ್ಗೆ ಕೇಂದ್ರದ ಸಚಿವ ರೊಂದಿಗೆ ಚರ್ಚಿಸುತ್ತೇನೆ ಎಂದು ಹೇಳಿದ್ದಾರೆ. 

371 (ಜೆ) ಈ ಭಾಗದ ಆಶಾಕಿರಣ ಹೈದ್ರಾಬಾದ್-ಕರ್ನಾಟಕ ಪ್ರದೇಶದ ೬ ಜಿಲ್ಲೆಗಳಿಗೆ ಶಿಕ್ಷಣ-ಉದ್ಯೋಗ ಅಭಿವೃದ್ಧಿಗಾಗಿ 371 (ಜೆ) ಜಾರಿಗೆ ತರುವಲ್ಲಿ, ವಿಶೇಷ ಪ್ರಯತ್ನ ಹಾಕುವುದರ ಮೂಲಕ ಈ ಭಾಗದ ಲ್ಲಿನ ವಿದ್ಯಾರ್ಥಿಗಳಿಗೆ, ಉದ್ಯೋಗಸ್ಥರಿಗೆ ಮತ್ತು ಅಭಿವೃದ್ಧಿಗೆ ಹೆಚ್ಚಿನ ಅನುದಾನ ಬರುತ್ತಿದೆ. ಇದು ಶಾಶ್ವತ ಕೆಲಸವಲ್ಲವೇ? ಜನತೆ ಒಳ್ಳೆ ಕೆಲಸ ಮಾಡಿದವರಿಗೆ ಬೆಂಬಲ ಕೊಡುವಲ್ಲಿ ಹಿಂದೇಟು ಹಾಕುತ್ತಾರೆ, ಅಭಿವೃದ್ಧಿಗಾಗಿ ಕಾಳಜಿ ಮಾಡುವವರಿಗೆ ಬೆಂಬಲ ಅಗತ್ಯವಾಗಿದೆ ಎಂದು ತಿಳಿಸಿದ್ದಾರೆ. 

ದೇಶಭಕ್ತಿ ಯಾರೊಬ್ಬರ ಗುತ್ತಿಗೆಯಲ್ಲ:

ಸಂವಿಧಾನದ ಆಶಯಗಳು ಪ್ರತಿಯೊಬ್ಬರಿಗೂ ಉತ್ತಮ ಅವಕಾಶ ನೀಡಿದೆ. ಆದರೆ ಸಂವಿಧಾನ ನಡೆಸಿಕೊಂಡು ಹೋಗುವ ಜನ ಸರಿಯಾಗಿದ್ದರೆ, ದೇಶ ಸರಿಯಾಗಿ ನಡೆಯುತ್ತದೆ. ದೇಶಭಕ್ತಿ, ದೇಶದ ಐಕ್ಯತೆ ಇದು ಯಾರೊಬ್ಬರ ಸ್ವತ್ತಲ್ಲ, ಪ್ರತಿಯೊಬ್ಬರೂ ದೇಶಭಕ್ತರೇ ಎಂಬುದನ್ನು ಮರೆಯಬಾರದು. ಡಾ. ಬಾಬಾ ಸಾಹೇಬರ ಆಶಯದಿಂದ ಎಲ್ಲರಿಗೂ ಅಧಿಕಾರ ಸಿಕ್ಕಿದೆ ಎಂಬುದನ್ನು ಅರೆತುಕೊಳ್ಳಬೇಕು ಎಂದರು. 

ಶಾಸಕ ಶರಣ ಬಸಪ್ಪಗೌಡ ದರ್ಶನಾಪುರ ಮಾತನಾಡಿ, ಹತ್ತಿಗುಡೂರ ಜನತೆ ಬಹುದಿನದ ಕನಸು ನನಸಾದಂತಾಗಿದೆ. ಈ ಭಾಗದ ಅಭಿವೃದ್ಧಿ ಕಾರ್ಯಗಳಿಗೆ ಸದಾ ಬೆಂಬಲವಿದೆ, ವಿಶೇಷವಾಗಿ ಕೇಂದ್ರ ಸರ್ಕಾರದಿಂದ ರಿಂಗ್ ರೋಡ್ ವ್ಯವಸ್ಥೆಗಾಗಿ ಲೋಕಸಭಾ ಸದಸ್ಯರು ಗಮನಹರಿಸಿ, ಟ್ರಾಫಿಕ್ ಸಮಸ್ಯೆ ನೀಗಿಸಬೇಕು ಎಂದು ತಿಳಿಸಿದರು. 

ಲೋಕಸಭಾ ಸದಸ್ಯ ರಾಜಾ ಅಮರೇಶ ನಾಯಕ ಮಾತನಾಡಿ, ಹತ್ತಿಗೂಡುರುದಲ್ಲಿ ಲೋಕಾರ್ಪಣೆಗೊಂಡ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಪುತ್ಥಳಿ ಹೆಚ್ಚು ಆಕರ್ಷಣೀಯವಾಗಲು, ಹೈಮಾಸ್ಕ್ ವಿದ್ಯುದೀಪ ಮತ್ತು ಗ್ರಾಮದಲ್ಲಿ ಸೋಲಾರ ವಿದ್ಯುತ್ ವ್ಯವಸ್ಥೆ ಕಲ್ಪಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು. 

ಈ ಸಂದರ್ಭದಲ್ಲಿ ವೇದಿಕೆ ಮೇಲೆ ಗ್ರಾಮದ ಸಿದ್ದಲಿಂಗರೆಡ್ಡಿ ಸಾಹು ಹತ್ತಿಗೂಡುರು, ಎಂಎಲ್‌ಸಿ ಬಸವರಾಜ ಪಾಟೀಲ್ ಇಟಗಿ, ಮಾಜಿ ಲೋಕಸಭಾ ಸದಸ್ಯ ಬಿ.ವಿ. ನಾಯಕ, ಮಾಜಿ ಎಂಎಲ್‌ಸಿ ಅಮಾತೆಪ್ಪ ಕಂದಕೂರು, ಚನ್ನಾರೆಡ್ಡಿ ಪಾಟೀಲ, ಶರಣಪ್ಪಸಲಾದಪುರ, ಡಾ. ಚಂದ್ರಶೇಖರ ಸುಬೇದಾರ, ಜ್ಞಾನಪ್ರಕಾಶ ಸ್ವಾಮೀಜಿ, ಕಬೀರಾನಂದ ಸ್ವಾಮೀಜಿ, ತಪೋವನ ಮಠದ ಗಿರಿಮಲ್ಲೇಶ್ವರ ಶ್ರೀ ಸೇರಿದಂತೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮರಿಗೌಡ ಹುಲ್ಕಲ್, ಜಿಲ್ಲಾ ಪಂಚಾಯತ್ ಅಧ್ಯಕ್ಷ ರಾಜಶೇಖರಗೌಡ ವಜ್ಜಲ್, ಮಲ್ಲಿಕಾರ್ಜುನ ಪೂಜಾರಿ, ಚಂದ್ರಶೇಖರ ಆರಬೋಳ, ಬಸವಂತರೆಡ್ಡಿ ಸಾಹು, ನಾಗಣ್ಣ ಪೂಜಾರಿ, ಹಯ್ಯಾಳಪ್ಪ ಟಣಕೆದಾರ, ಗಾಪಂ ಅಧ್ಯಕ್ಷ ನಾಗಪ್ಪ ಕಾಶಿರಾಜ, ಗುರುನಾಥರೆಡ್ಡಿ ಪಾಟೀಲ್ ಹಳಿಸಗರ, ಬಸ್ಸಣ್ಣ ಭಂಗಿ ಸೇರಿದಂತೆ ಅನೇಕರು ಇದ್ದರು. ನೀಲಕಂಠ ಬಡಿಗೇರ, ಭೀಮರಾಯ ಹೊಸಮನಿ, ಶರಣಪ್ಪ ಟಣಕೆದಾರ, ಶರಣರೆಡ್ಡಿ ಹತ್ತಿಗುಡೂರು, ತಿಪ್ಪಣ್ಣ ಘಂಟಿ, ಮಾನಯ್ಯ ಪಂಚುಮ್, ರಾಘವೇಂದ್ರ ಕುಲಕರ್ಣಿ, ಶಂಕರಗೌಡ ಪೊಲೀಸ್ ಪಾಟೀಲ್ ದೇವಿಂದ್ರ ಟಣಕೆದಾರ, ಶಿವರಾಜ ಕರಾಟೆ, ಪೀರಪ್ಪ, ಶರಣು ಬಿರನೂರು ಸೇರಿದಂತೆ ಡಾ. ಬಾಬಾ ಸಾಹೇಬ ಅಂಬೇಡ್ಕರ್‌ರ ಪುತ್ಥಳಿ ಪ್ರತಿಷ್ಠಾಪನೆ ಸಮಿತಿ ಹಾಗೂ ಬಿ.ಆರ್. ಅಂಬೇಡ್ಕರ್ ತರುಣ ಸಂಘ ಹತ್ತಿಗುಡೂರು ಪದಾಧಿಕಾರಿಗಳು ಹಾಗೂ ಹತ್ತಿಗುಡೂರು ಇದ್ದರು.

Follow Us:
Download App:
  • android
  • ios