Asianet Suvarna News Asianet Suvarna News

ಜನತಾ ಕರ್ಫ್ಯೂ: ಪ್ರಧಾನಿ ಮೋದಿ ಕರೆಗೆ ದೇವೇಗೌಡ ಬೆಂಬಲ

ಕೊರೋನಾ ತಡೆಗೆ ಕೇಂದ್ರ, ರಾಜ್ಯ ಸರ್ಕಾರ ಕೈಗೊಂಡ ಕ್ರಮಗಳ ಬಗ್ಗೆ ಮಾಜಿ ಪ್ರಧಾನಿ ಮೆಚ್ಚುಗೆ|ಮದ್ದಿಲ್ಲದ ಕೊರೋನಾ ವೈರಸ್‌ ಬಗ್ಗೆ ಪ್ರಧಾನಿ ಮಾತುಗಳು ಸರಿಯಾಗಿವೆ| ಪ್ರಧಾನಿಯವರ ಮನವಿ ಹಿಂದಿನ ಉದ್ದೇಶವನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು| ಇದರ ಹಿಂದೆಯು ರಾಜಕೀಯ ಹುಡುಕದೆ ಎಲ್ಲರೂ ಬೆಂಬಲ ಮಾಡಬೇಕು|
 

Former PM H D Devegowda Support to Janata Curfew
Author
Bengaluru, First Published Mar 21, 2020, 10:30 AM IST

ಹಾಸನ[ಮಾ.21]: ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನತೆಗೆ ಕೋರಿರುವ ಭಾನು​ವಾರ ಜನತಾ ಕರ್ಫ್ಯೂಗೆ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಬೆಂಬಲ ವ್ಯಕ್ತಪಡಿಸಿದ್ದಾರೆ.

ಮದ್ದಿಲ್ಲದ ಕೊರೋನಾ ವೈರಸ್‌ ಬಗ್ಗೆ ಪ್ರಧಾನಿಯವರು ಆಡಿರುವ ಮಾತುಗಳು ಸರಿಯಾಗಿವೆ. ಪ್ರಧಾನಿಯವರ ಮನವಿ ಹಿಂದಿನ ಉದ್ದೇಶವನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ಇದರ ಹಿಂದೆಯು ರಾಜಕೀಯ ಹುಡುಕದೆ ಎಲ್ಲರೂ ಬೆಂಬಲ ಮಾಡಬೇಕು ಎಂದು ಹೇಳಿದ್ದಾರೆ.

ಭಾನುವಾರ ಪ್ಯಾಸೆಂಜರ್‌, ಮೇಲ್‌, ಎಕ್ಸ್‌ಪ್ರೆಸ್‌ ರೈಲು ಸೇವೆ ಪೂರ್ಣ ಬಂದ್‌

ಪ್ರಧಾನಿಯವರ ಕರೆಯನ್ನು ಎಲ್ಲಾ ರಾಜ್ಯ ಸರ್ಕಾರಗಳು ಪಾಲಿಸುವುದು ಪ್ರಸ್ತುತ ಸನ್ನಿವೇಶ ಸೂಕ್ತ ಮತ್ತು ವಿವೇಕವಾಗುತ್ತದೆ ಎಂದು ಕಿವಿಮಾತು ಹೇಳಿರುವ ಗೌಡರು, ಕೊರೋನಾ ವೈರಸ್‌ ತಡೆಗೆ ಕೇಂದ್ರ ರಾಜ್ಯ ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕೊರೋನಾ ಸದ್ಯಕ್ಕೆ ಭಾರತದಲ್ಲಿ ದೊಡ್ಡ ಪ್ರಮಾಣದಲ್ಲಿ ಇಲ್ಲದಿದ್ದರೂ ಎಚ್ಚರಿಕೆ ಬೇಕಾಗಿದೆ. ಭಾರತದಂತಹ ಜನ ಸಾಂಧ್ರತೆ ಹೆಚ್ಚಾಗಿರುವ ದೇಶದಲ್ಲಿ ಎಚ್ಚರಿಕೆ ಅಗತ್ಯ. ದೇಶದ ಜನತೆ ತಮಗೆ ತಾವೇ ಕರ್ಫ್ಯೂ ವಿಧಿಸಿಕೊಂಡು ಮನೆಯಲ್ಲೇ ಉಳಿದುಕೊಳ್ಳುವ ಮೂಲಕ ಜನತೆ ಪ್ರಧಾನಿ ಕರೆ ಪಾಲಿಸಬೇಕು. 65 ವರ್ಷ ಮೇಲ್ಪಟ್ಟಮತ್ತು 10 ವರ್ಷ ವಯಸ್ಸಿನೊಳಗಿನ ಮಕ್ಕಳು ಕಡ್ಡಾಯವಾಗಿ ಮನೆಯಿಂದ ಹೊರಬಾರದು ಎಂದು ಹೇಳಿದ್ದಾರೆ.

ಜನತಾ ಕರ್ಫ್ಯೂಗೆ ಜೈ ಎಂದ ಬೆಂಗಳೂರು ಜನತೆ..!

ಕೊರೋನಾ ಎಂಬ ಅಗೋಚರ ಶತ್ರುವಿನ ವಿರುದ್ದದ ಹೋರಾಟ ಇಡೀ ಜನತೆಯ ಸಮಷ್ಟಿಪ್ರಜ್ಞೆ, ಸಂಯಮ ಪೂರ್ಣ ಭಾಗವಹಿಸುವಿಕೆಯಿಂದ ಮಾತ್ರ ಯಶಸ್ಸಿಯಾಗುತ್ತದೆ ಎಂದು ಹೇಳಿದ್ದಾರೆ.
 

Follow Us:
Download App:
  • android
  • ios