ನಮ್ಮವರೇ ನಮ್ಮ ಕಾಲು ಎಳೀತಾರೆ: ಕಾಂಗ್ರೆಸ್ ನಾಯಕ
* ಪಕ್ಷದಲ್ಲಿ ಕಾಲು ಎಳೆಯೋದು ನಿಂತರೆ ಮಾತ್ರ ಕಾಂಗ್ರೆಸ್ ಅಧಿಕಾರ ಬರಲು ಸಾಧ್ಯ
* ಲಿಂಗಾಯತ ನಾಯಕರು ಮೊದಲು ಒಂದಾಗಬೇಕು
* ನಮ್ಮ ಪಕ್ಷದ ಅಭ್ಯರ್ಥಿಗಳನ್ನೇ ಸೋಲಿಸಲು ಓಡಾಡುತ್ತಿರುವ ಕಾಂಗ್ರೆಸ್ ನಾಯಕರು
ಬೆಳಗಾವಿ(ಜು.17): ರಾಜ್ಯದಲ್ಲಿರುವ ಲಿಂಗಾಯತ ನಾಯಕರು ಒಂದಾಗಿ, ಕಾಲು ಎಳೆಯುವುದನ್ನು ನಿಲ್ಲಿಸಬೇಕು. ಆಗ ಮಾತ್ರ ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಮಾಜಿ ಸಂಸದ ಪ್ರಕಾಶ ಹುಕ್ಕೇರಿ ವರಿಷ್ಠರಿಗೆ ಸಲಹೆ ನೀಡಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ‘ಲಿಂಗಾಯತ ನಾಯಕರು ಮೊದಲು ಒಂದಾಗಬೇಕು. ಒಬ್ಬರ ಕಾಲು ಎಳೆಯುವವರು ಇರುವಾಗ ಲಿಂಗಾಯತ ನಾಯಕರು ಹಿಂದೆ ಬೀಳುವುದು ಸಹಜ ಎಂದು ಹೇಳಿದ್ದಾರೆ.
ಚಿಕ್ಕೋಡಿ: ಸರ್ಕಾರಿ ಆಸ್ಪತ್ರೆಗೆ ಸ್ವಂತ ಖರ್ಚಲ್ಲಿ ಸಿಬ್ಬಂದಿ ನೇಮಿಸಿದ ಹುಕ್ಕೇರಿ
ಕಾಂಗ್ರೆಸ್‌ನಲ್ಲಿ ನಮ್ಮ ನಮ್ಮ ಒಳಗಡೆಯೇ ಕಾಲು ಎಳೆಯುವುದು, ನಮ್ಮ ಪಕ್ಷದ ಅಭ್ಯರ್ಥಿಗಳನ್ನೇ ಸೋಲಿಸಲು ಓಡಾಡುತ್ತಾರೆ. ಅದು ನಿಲ್ಲಬೇಕು. ಅಂದಾಗ ಮಾತ್ರ 2023ರಲ್ಲಿ ಕಾಂಗ್ರೆಸ್ ಅಧಿಕಾರ ಬರಲು ಸಾಧ್ಯವಾಗುತ್ತದೆ ಎಂದು ಪರೋಕ್ಷವಾಗಿ ತಮ್ಮ ನಾಯಕರ ನಡೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.