'ಮುರುಗೇಶ್ ನಿರಾಣಿಗೆ ಅಧಿಕಾರದ ಹುಚ್ಚು ಹಿಡಿದಿದೆ'
ಶಾಸಕ ಯತ್ನಾಳ್‌ಗೆ ಸಚಿವ ನಿರಾಣಿ ಅವಹೇಳನಕಾರಿ ಪದ ಬಳಕೆ ಕುರಿತು ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ವಾಗ್ದಾಳಿ| ಆರು ತಿಂಗಳಲ್ಲಿ ಮೀಸಲಾತಿ ಘೋಷಣೆ ಮಾಡದಿದ್ದರೆ ನಿರಾಣಿ ಮನೆ ಮುಂದೆ ಧರಣಿ|
ಯಾದಗಿರಿ(ಏ.05): ಶಾಸಕ ಯತ್ನಾಳ್‌ಗೆ ಸಚಿವ ಮುರುಗೇಶ್ ನಿರಾಣಿ ಅವಹೇಳನಕಾರಿ ಪದ ಬಳಕೆ ಕುರಿತು ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಕಾರ್ಯಕ್ರಮ ನಿಮಿತ್ತ ಶನಿವಾರ ರಾತ್ರಿ ಯಾದಗಿರಿಗೆ ಆಗಮಿಸಿದ್ದ ಅವರನ್ನು ಸಂಪರ್ಕಿಸಿದ ಮಾಧ್ಯಮಗಳೊಂದಿಗೆ ಮಾತನಾಡಿದ ಕಾಶಪ್ಪನವರ್, ನಿರಾಣಿಯವರಿಗೆ ಅಧಿಕಾರದ ಹುಚ್ಚು ಹಿಡಿದಿದೆ, ವ್ಯಾಮೋಹ ಹೆಚ್ಚಾಗಿದೆ ಎಂದರು. ನಿರಾಣಿಗೆ ಸಮಾಜದ ಬಗ್ಗೆ ಕಳಕಳಿ ಇಲ್ಲ, ನನ್ನ ಬಗ್ಗೆ ಹಾಗೂ ಸ್ವಾಮೀಜಿ ಬಗ್ಗೆ ಅತೀ ಕೀಳಾಗಿ ಮಾತನಾಡಿರುವುದು ಮಾಧ್ಯಮದಲ್ಲಿ ಕಂಡಿದ್ದೀರಿ ಎಂದ ಅವರು, ಸದನದಲ್ಲಿ ವರದಿ ತರಿಸಿಕೊಂಡು ಆರು ತಿಂಗಳಲ್ಲಿ ಮೀಸಲಾತಿ ನೀಡುವ ಬಗ್ಗೆ ಸಿಎಂ ಭರವಸೆ ನೀಡಿದ್ದಾರೆ ಎಂದರು.
'ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ಗುಲಾಮರಂತೆ ವರ್ತಿಸುತ್ತಿರುವ ಗೃಹ ಸಚಿವರು'
ಸರ್ಕಾರದಲ್ಲಿ ಮಂತ್ರಿ ದೊಡ್ಡವರಾ ಅಥವಾ ಮುಖ್ಯಮಂತ್ರಿ ದೊಡ್ಡವರಾ ಎಂದು ಪ್ರಶ್ನಿಸಿದ ಕಾಶಪ್ಪನವರ್, ಇವರಾರಯಕೆ ಹಿಯ್ಯಾಳಿಸುವಂತೆ ಮಾತಾಡುತ್ತಿದ್ದಾರೆ ಎಂದರು. ಬಸನಗೌಡ ಯತ್ನಾಳ್ ಅವರು ಸಮಾಜದ ಪರ ನಿಂತಿದ್ದಕ್ಕೆ ಹೀಗೆಲ್ಲಾ ಮಾತನಾಡುತ್ತಿದ್ದಾರೆ ಎಂದ ಅವರು, ಒಂದು ವೇಳೆ ಸರ್ಕಾರ ಆರು ತಿಂಗಳಲ್ಲಿ ಮೀಸಲಾತಿ ಘೋಷಣೆ ಮಾಡದಿದ್ದರೆ ನಿರಾಣಿ ಮನೆ ಮುಂದೆ ಧರಣಿ ಸತ್ಯಾಗ್ರಹ ಮಾಡಲಾಗುವುದು ಎಂದು ಎಚ್ಚರಿಸಿದರು.
ಸಮಾಜದ ವಿರುದ್ಧ ಹೀಗೆ ಹೇಳಿಕೆಗಳನ್ನ ಕೊಟ್ಟರೆ ಸಮಾಜ ತಕ್ಕ ಪಾಠ ಕಲಿಸುತ್ತದೆ ಎಂದು ನಿರಾಣಿ ವಿರುದ್ಧ ಪರೋಕ್ಷವಾಗಿ ಎಚ್ಚರಿಸಿದ ಅವರು, ಸ್ವಾಮೀಜಿ ಅವರ ಆಶೀರ್ವಾದದಿಂದ ಮಂತ್ರಿಯಾಗಿರೋದನ್ನ ಮರೆಯಬಾರದು ಎಂದು ಕಿವಿಮಾತು ಹೇಳಿದರು.