'BSY ದೈಹಿಕವಾಗಿ ಕುಗ್ಗಿದ್ದಾರೆ, ಮತ್ತೊಬ್ಬ ಸಮರ್ಥರನ್ನು ಮುಖ್ಯಮಂತ್ರಿಯಾಗಿ ಮಾಡಬೇಕು'
ರಾಜ್ಯದ ಆರ್ಥಿಕ ವ್ಯವಸ್ಥೆ ಹದೆಗೆಟ್ಟಿದ್ದು ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಂಡಿದೆ| ಬೇಸಿಗೆಯಲ್ಲಿ ಕುಡಿಯುವ ನೀರಿನ ಅಭಾವ ಕಂಡು ಬರುತ್ತಿದ್ದು, ನೀರು ಲಭ್ಯವಿರುವ ಕಡೆ ಶುದ್ದ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲಾಗಿದೆ|
ಶಿಡ್ಲಘಟ್ಟ(ಮೇ.24): ಮುಖ್ಯಮಂತ್ರಿ ಯಡಿಯೂರಪ್ಪ ದೈಹಿಕವಾಗಿ ಕುಗ್ಗಿದಂತೆ ಕಂಡು ಬರುತ್ತಿದ್ದು, ಮತ್ತೊಬ್ಬ ಸಮರ್ಥರನ್ನು ಮುಖ್ಯಮಂತ್ರಿಯಾಗಿ ಮಾಡಬೇಕಾಗಿದೆ ಎಂದು ಮಾಜಿ ಸಚಿವ ಶಾಸಕ ವಿ. ಮುನಿಯಪ್ಪ ತಿಳಿಸಿದ್ದಾರೆ.
ನಗರದ ವಿವಿಧ ಬಡಾವಣೆಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಉದ್ಘಾಟನೆ ನೆರವೇರಿಸಿ ಕೋಟಿ ವೃತ್ತದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ, ರಾಜ್ಯದ ಆರ್ಥಿಕ ವ್ಯವಸ್ಥೆ ಹದೆಗೆಟ್ಟಿದ್ದು ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಂಡಿದೆ. ಬೇಸಿಗೆಯಲ್ಲಿ ಕುಡಿಯುವ ನೀರಿನ ಅಭಾವ ಕಂಡು ಬರುತ್ತಿದ್ದು, ನೀರು ಲಭ್ಯವಿರುವ ಕಡೆ ಶುದ್ದ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲಾಗಿದೆ ಎಂದರು.
ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯಲ್ಲಿ COVID19 ಪ್ರಯೋಗಾಲಯ, ಕಂದವಾರ ಕೆರೆಗೆ ಭೇಟಿ ನೀಡಿದ ಸಚಿವ
ಶಿಡ್ಲಘಟ್ಟ ತಾಲೂಕಿಗೆ ಮುಂದಿನ ವರ್ಷದಿಂದ, ಕೆ.ಸಿ. ವ್ಯಾಲಿ, ಎಚ್‌ಎನ್ ವ್ಯಾಲಿ ನೀರು ಕೆರೆಗಳನ್ನು ತುಂಬಲಿದ್ದು ಅಂತರ್ಜಲ ಏರಿಕೆಯಾಗಿ ಬತ್ತಿರುವ ಬೋರ್ ವೆಲ್‌ಗಳಲ್ಲಿ ನೀರಿನ ಶೇಖರಣಾ ಸಾಮರ್ಥ್ಯ ಹೆಚ್ಚಲಿದೆ. ನಗರದ ಅಭಿವೃದ್ಧಿಗೆ ಜಿಲ್ಲಾಧಿಕಾರಿಗಳು 35 ಲಕ್ಷ ರು.ಗಳು ಬಿಡುಗೊಡೆಗೊಳಿಸಿದ್ದಾರೆ. ನಗರದ ಹಲವು ರಸ್ತೆಗಳು ಹದಗೆಟ್ಟಿದ್ದು ಹಣದ ಲಭ್ಯತೆ ನೋಡಿ ರಸ್ತೆ ನಿರ್ಮಾಣ ಕಾಮಾಗಾರಿಗೆ ಚಾಲನೆ ನೀಡಲಾಗುತ್ತದೆ ಎಂದರು. ನಗರ ಪೌರಾಯುಕ್ತ ತ್ಯಾಗರಾಜ್, ಮುರಳಿ ಪಿ, ನಗರಸಭಾ ಸದಸ್ಯರಾದ ಅನಿಲ್ ಕುಮಾರ್ ನಾರಾಯಣಸ್ವಾಮಿ, ಆಯೀಶ ಸುಲ್ತಾನ್, ನಂದಕಿಷನ್, ಸುರೇಶ್ ಕೆ., ಅನ್ಸರ್, ವಿ. ಮಧು, ಮುಂತಾದವರು ಇದ್ದರು.