ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯಲ್ಲಿ COVID19 ಪ್ರಯೋಗಾಲಯ, ಕಂದವಾರ ಕೆರೆಗೆ ಭೇಟಿ ನೀಡಿದ ಸಚಿವ

First Published 17, May 2020, 12:12 PM

ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯಲ್ಲಿ ಶನಿವಾರ ಕೋವಿಡ್‌ ಪ್ರ.ಯೋಗಾಲಯಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ. ಸುಧಾಕರ್ ಚಾಲನೆ ನೀಡಿದ್ದಾರೆ. ನಂತರ ಎಚ್‌ಎನ್‌ ವ್ಯಾಲಿ ನೀರು ಹರಿಯುತ್ತಿರುವ ನಗರ ಹೊರವಲಯದ ಕಂದವಾರ ಕೆರೆಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ. ಸುಧಾಕರ್‌ ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇಲ್ಲಿವೆ ಫೋಟೋಸ್

ಲಾಕ್‌ಡೌನ್‌ 4.0 ಸಡಿಲಿಕೆ ಇದ್ದೆ ಇರುತ್ತದೆ, ಜೀವವನ್ನೂ ಉಳಿಸಬೇಕು, ಜನಜೀವನವೂ ಸಾಗಬೇಕು, ಇವೆರಡರಲ್ಲೂ ಸಮತೋಲನ ಕಾಪಾಡುವ ಕೆಲಸ ಸರ್ಕಾರ ಮಾಡಬೇಕಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ. ಸುಧಾಕರ್‌ ಹೇಳಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯಲ್ಲಿ ಕೊರೋನಾ ಪರೀಕ್ಷೆ ಲ್ಯಾಬ್ ಉದ್ಘಾಟನೆ ನಡೆಸುತ್ತಿರುವುದು

ವಿಶ್ವ ಆರೋಗ್ಯ ಸಂಸ್ಥೆ ಈಗಾಗಲೇ ಹೇಳಿದಂತೆ ಕೊರೊನಾ ವೈರಸ್‌ ಸಂಪೂರ್ಣ ನಾಶವಾಗುವುದಿಲ್ಲ. ಎಂಡಮಿಕ್‌ ಎಂದು ತಿಳಿದುಕೊಂಡು ಕೆಲಸ ಮಾಡುವಂತೆ ಸೂಚಿಸಿದೆ. ಹಾಗಾಗಿ ಕೊರೊನಾ ವೈರಸ್‌ ಎಂಡಮಿಕ್‌ ಎಂದು ತಿಳಿದು ಕೆಲಸ ಮಾಡುತ್ತಿದ್ದು, ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುತ್ತವೆ ಇದಕ್ಕೆ ಜನರು ಆತಂಕ ಪಡಬೇಕಿಲ್ಲ ಎಂದು ಭರವಸೆ ನೀಡಿದರು.

ರಾಜ್ಯದಲ್ಲಿ ಈಗಾಗಲೇ 40 ಕೊರೋನಾ ಪ್ರಯೋಗಾಲಯಗಳಿದ್ದು, ಈಗ ಚಿಕ್ಕಬಳ್ಳಾಪುರದಲ್ಲೂ ಮಾಡಲಾಗಿದೆ. ಆಯಾ ಪ್ರದೇಶಗಳ ಕೂಲಿ ಕಾರ್ಮಿಕರನ್ನು ಹಂತ ಹಂತವಾಗಿ ಅವರ ಪ್ರದೇಶಗಳಿಗೆ ಕಳುಹಿಸಿಕೊಡುವ ಕೆಲಸ ಮಾಡಲಾಗುತ್ತಿದೆ. ಜನ ಅವಸರ ಪಡುವ ಅಗತ್ಯವಿಲ್ಲ, ಅದನ್ನು ಸಮುದಾಯಕ್ಕೆ ಹರಡದಂತೆ ಎಚ್ಚರ ವಹಿಸಬೇಕು ಎಂದಿದ್ದಾರೆ.

ಪ್ರಯೋಗಾಲಯ ಪರಿಶೀಲಿಸಿದ ಸಚಿವ ಸುಧಾಕರ್

ಪ್ರಯೋಗಾಲಯ ಪರಿಶೀಲಿಸಿದ ಸಚಿವ ಸುಧಾಕರ್

ಎಚ್‌ಎನ್‌ ವ್ಯಾಲಿ ನೀರು ಹರಿಯುತ್ತಿರುವ ನಗರ ಹೊರವಲಯದ ಕಂದವಾರ ಕೆರೆಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ. ಸುಧಾಕರ್‌ ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕಂದವಾರ ಕೆರೆಯಲ್ಲಿ ಮೀನುಗಳು ಸಾಯುತ್ತಿವೆ, ಕೆರೆಯ ಸುತ್ತಮುತ್ತಲಿನ ಗ್ರಾಮಗಳಲ್ಲಿ ಸೊಳ್ಳೆಗಳ ಕಾಟ ಹೆಚ್ಚಾಗಿದೆ ಎಂಬ ಆರೋಪಗಳು ಕೇಳಿಬಂದಿರುವುದು ಮತ್ತು ಕೆರೆ ತುಂಬುವ ಹಂತ ತಲುಪಿರುವ ಕಾರಣ ಇಲ್ಲಿಂದ ಮುಂದಿನ ಕೆರೆಗಳಿಗೆ ನೀರು ಹಾಯಿಸಬೇಕಿರುವ ಹಿನ್ನೆಲೆಯಲ್ಲಿ ಪಂಪ್‌ಹೌಸ್‌ ಸೇರಿದಂತೆ ಇತರೆ ಪ್ರದೇಶಗಳನ್ನು ಸಚಿವರು ಪರಿಶೀಲಿಸಿದರು.

ಎಚ್‌ಎನ್‌ ವ್ಯಾಲಿ ನೀರಿನಿಂದ ಯಾವುದೇ ಸಮಸ್ಯೆ ಇಲ್ಲ. ಇನ್ನು ಮೂರು ನಾಲ್ಕು ದಿನದಲ್ಲಿ ಕೆರೆ ತುಂಬಲಿದೆ. ಹಾಗಾಗಿ ಇಲ್ಲಿಂದ ಮುಂದೆ ಕೆರೆಯ ನೀರು ಹರಿಸಲಿದ್ದು, ಇದಕ್ಕೆ ಸಂಬಂಧಿಸಿದ ಪಂಪ್‌ಹೌಸ್‌ ಸೇರಿದಂತೆ ಇತರೆ ತಾಂತ್ರಿಕ ಉಪಕರಣಗಳನ್ನು ಪರಿಶೀಲಿಸಲಾಗಿದೆ ಎಂದು ಸಚಿವರು ಈ ಸಂದರ್ಭದಲ್ಲಿ ತಿಳಿಸಿದರು.

ಅಲ್ಲದೆ ನೀರಿನ ಗುಣಮಟ್ಟಅಥವಾ ಇತರೆ ಯಾವುದೇ ಸಮಸ್ಯೆ ಎದುರಾದರೂ ಜಿಲ್ಲಾಡಳಿತ ಮಾಹಿತಿ ನೀಡಲಿದ್ದು, ಜನರು ಆತಂಕಪಡಬೇಕಾದ ಅಗತ್ಯವಿಲ್ಲ ಎಂದು ಸಚಿವರು ಭರವಸೆ ನೀಡಿದರು. ಅಲ್ಲದೆ ಕೆರೆ ತುಂಬಲು ಇನ್ನು ಎರಡು ಅಡಿ ಬಾಕಿ ಇದ್ದು, ಶೀಘ್ರದಲ್ಲಿಯೇ ಮುಂದಿನ ಕೆರೆಗಳಿಗೆ ನೀರು ಹರಿಯಲಿದೆ ಎಂದರು.

loader